ಭಾರತ-ಇಂಗ್ಲೆಂಡ್ ಟೆಸ್ಟ್: ಅಭಿಮಾನಿಗಳ ಪ್ರವೇಶ ಕುರಿತು ಬಿಸಿಸಿಐ ನಿರ್ಧಾರ ಪ್ರಕಟ!

First Published Jan 23, 2021, 7:27 PM IST

ಆಸ್ಟ್ರೇಲಿಯಾ ನಾಡಿನಲ್ಲಿ ದಿಗ್ವಿಜಯ ಸಾಧಿಸಿ ತವರಿಗೆ ಆಗಮಿಸಿರುವ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆರಂಭಿಕ 2 ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಇದೀಗ ಈ ಟೆಸ್ಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶವಿದೆಯಾ ಅನ್ನೋದರ ಕುರಿತು ಬಿಸಿಸಿಐ ನಿರ್ಧಾರ ಪ್ರಕಟಿಸಿದೆ.

ಆಸ್ಟ್ರೇಲಿಯಾ ತಂಡವನ್ನು 2-1 ಅಂತರದಿಂದ ಬಗ್ಗು ಬಡಿದು ಇತಿಹಾಸ ರಚಿಸಿದ ಟೀಂ ಇಂಡಿಯಾ ಇದೀಗ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಲ್ಟ್ ಪಂದ್ಯಕ್ಕೆ ತಯಾರಿ ಆರಂಭಿಸಿದೆ.
undefined
ಫೆಬ್ರವರಿ 5 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಆರಂಭಗೊಳ್ಳುತ್ತಿದೆ. ಆರಂಭಿಕ 2 ಟೆಸ್ಟ್ ಪಂದ್ಯ ಚೆನ್ನೈನ ಚಿಪಾಕ್ ಮೈದಾನದಲ್ಲಿ ಆಯೋಜಿಸಲಾಗಿದೆ.
undefined
ಕೊರೋನಾ ವೈರಸ್ ಕಾರಣ ಅಭಿಮಾನಿಗಳ ಪ್ರವೇಶ ನೀಡಬೇಕೇ? ಅನ್ನೋ ಕುರಿತು ಬಿಸಿಸಿಐ ಹಾಗೂ ತಮಿಳುನಾಡು ಕ್ರಿಕೆಟ್ ಸಂಸ್ಥೆ ನಿರ್ಧಾರ ಪ್ರಕಟಿಸಿದೆ. ಆರಂಭಿಕ 2 ಟೆಸ್ಟ್ ಪಂದ್ಯಕ್ಕೆ ಅಭಿಮಾನಿಗಳಿಗೆ ಪ್ರವೇಶಿವಿಲ್ಲ.
undefined
ಉಭಯ ತಂಡ, ಸಹಾಯಕ ಸಿಬ್ಬಂದಿ, ಗ್ರೌಂಡ್ ಸ್ಟಾಫ್ ಸೇರಿದಂತೆ ಕೆಲವೇ ಕೆಲವರಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶ ನೀಡಲಾಗುತ್ತಿದೆ. ಕೊರೋನಾ ವೈರಸ್ ಕಾರಣ ಆರಂಭಿಕ 2 ಪಂದ್ಯಕ್ಕೆ ಅಭಿಮಾನಿಗಳು ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ ಸ್ಪಷ್ಟಪಡಿಸಿದೆ.
undefined
ಕೊರೋನಾ ವೈರಸ್ ಕಾರಣ ಆಟಗಾರರ ಸುರಕ್ಷತೆ ಹಾಗೂ ಅಭಿಮಾನಿಗಳ ಸುರಕ್ಷತೆಯ ದೃಷ್ಟಿಯಿಂದ ಬಿಸಿಸಿಐ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಿದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ ಹೇಳಿದೆ.
undefined
ಫೆಬ್ರವರಿ 5 ರಂದು ಮೊದಲ ಟೆಸ್ಟ್, ಹಾಗೂ ಫೆ.13ರಂದು 2ನೇ ಟೆಸ್ಟ್ ಪಂದ್ಯವನ್ನು ಚೆನ್ನೈನಲ್ಲಿ ಆಯೋಜಿಸಲಾಗಿದೆ. ಇನ್ನುಳಿದ 2 ಪಂದ್ಯ ಅಹಮ್ಮದಾಬಾದ್‌ನಲ್ಲಿ ಆಯೋಜಿಸಲಾಗಿದೆ.
undefined
ಫೆಬ್ರವರಿ 24 ರಿಂದ 28ರ ವರೆಗೆ ಸರ್ದಾರ ಪಟೇಲ್ ಕ್ರೀಡಾಂಗಣ ಅಹಮ್ಮದಾಬಾದ್‌ನಲ್ಲಿ 3ನೇ ಟೆಸ್ಟ್ ಹಾಗೂ ಮಾರ್ಚ್ 4 ರಿಂದ 8 ವರೆಗೆ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.
undefined
ಕೊರೋನಾ ವೈರಸ್ , ಕ್ವಾರಂಟೈನ್, ಬಯೋಬಬಲ್ ನಿಯಮದ ಕಾರಣ ಟೀಂ ಇಂಡಿಯಾ ಕ್ರಿಕೆಟಿಗರು ಜನವರಿ 27ಕ್ಕೆ ಚೆನ್ನೈಗೆ ಆಗಮಿಸುವ ಸಾಧ್ಯತೆ ಇದೆ.
undefined
click me!