ಗೂಗಲ್‌ನಲ್ಲಿ India National Cricket Team ಸರ್ಚ್‌ ಮಾಡಿ, ನಿಮಗೊಂದು ಸರ್ಪ್ರೈಸ್‌ ಇದೆ..!

Suvarna News   | Asianet News
Published : Jan 23, 2021, 02:47 PM ISTUpdated : Jan 23, 2021, 02:59 PM IST

ಬೆಂಗಳೂರು: ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ 2-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ ಆ ಬಳಿಕ ರಹಾನೆ ನೇತೃತ್ವದ ಫಿನಿಕ್ಸ್‌ನಂತೆ ಗೆದ್ದು ಬಂದಿತ್ತು. ಟೀಂ ಇಂಡಿಯಾದ ಈ ಗೆಲುವನ್ನು ಕೇವಲ ಭಾರತೀಯರು ಮಾತ್ರವಲ್ಲ, ವಿದೇಶಗಳಲ್ಲೂ ಸಂಭ್ರಮಪಟ್ಟಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಟೀಂ ಇಂಡಿಯಾದ ಈ ಸಾಧನೆಗೆ ಜಗತ್ತಿನ ನಾನಾ ಮೂಲೆಗಳಿಂದ ಶಹಬ್ಬಾಸ್‌ಗಿರಿ ವ್ಯಕ್ತವಾಗಿದೆ. ಇದೀಗ ನೀವು ಗೂಗಲ್‌ನಲ್ಲಿ India National Cricket Team ಅಂತ ಸರ್ಚ್‌ ಮಾಡಿದರೆ, ನಿಮಗೂ ಅಚ್ಚರಿ ಕಾದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
17
ಗೂಗಲ್‌ನಲ್ಲಿ India National Cricket Team ಸರ್ಚ್‌ ಮಾಡಿ, ನಿಮಗೊಂದು ಸರ್ಪ್ರೈಸ್‌ ಇದೆ..!

ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಜನವರಿ 19ರಂದು ಗಾಬಾ ಟೆಸ್ಟ್‌ ಪಂದ್ಯವನ್ನು 3 ವಿಕೆಟ್‌ಗಳಿಂದ ರೋಚಕವಾಗಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು.

27

ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡ ಬರೋಬ್ಬರಿ 32 ವರ್ಷಗಳ ಬಳಿಕ ಮೊದಲ ಬಾರಿಗೆ ಸೋಲಿನ ಕಹಿಯುಂಡಿತ್ತು. 

37

ಗಾಬಾ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಆಸ್ಟ್ರೇಲಿಯಾ ತಂಡವು 328 ರನ್‌ಗಳ ಸವಾಲಿನ ಗುರಿ ನೀಡಿತ್ತು. ಶುಭ್‌ಮನ್ ಗಿಲ್‌ ಉತ್ತಮ ಆರಂಭ, ಚೇತೇಶ್ವರ್ ಪೂಜಾರ ತಾಳ್ಮೆಯ ಬ್ಯಾಟಿಂಗ್ ಹಾಗೂ ರಿಷಭ್‌ ಪಂತ್ ಮ್ಯಾಚ್‌ ಫಿನಿಶಿಂಗ್ ಆಟಕ್ಕೆ ಕಾಂಗರೂ ಪಡೆ ಕಂಗಾಲಾಗಿ ಹೋಯಿತು.

47

ಈ ಮೂಲಕ ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ಡಿಸೆಂಬರ್ 19ರಂದು ಕೇವಲ 36 ರನ್‌ ಗಳಿಸಿ ಆಸೀಸ್‌ ಎದುರು ಮುಖಭಂಗ ಅನುಭವಿಸಿದ್ದ ಭಾರತ, ಪ್ರಮುಖ ಆಟಗಾರರ ಹೊರತಾಗಿಯೂ 2-1 ಅಂತರದಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳಲು ಯಶಸ್ವಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ.

57

ಟೀಂ ಇಂಡಿಯಾದ ಐತಿಹಾಸಿಕ ಗೆಲುವಿಗೆ ಭಾರತೀಯ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ ಹಾಗೂ ಮೈಕ್ರೋಸಾಫ್‌ ಸಿಇಒ ಸತ್ಯ ನಾದೆಲ್ಲಾ ಟ್ವೀಟ್‌ ಮೂಲಕ ಶುಭ ಹಾರೈಸಿದ್ದರು.

67

ಇದೀಗ ಗೂಗಲ್ ಒಂದು ಹೆಜ್ಜೆ ಮುಂದೆ ಹೋಗಿ India National Cricket Team ಅಂತ ಸರ್ಚ್‌ ಮಾಡಿದರೆ ಸ್ಕ್ರೀನ್‌ ಮೇಲೆ ವರ್ಚುವಲ್‌ ಆಗಿ ಪಟಾಕಿ ಸಿಡಿಯುವಂತೆ ಸಂಭ್ರಮಾಚಣೆಯ ದೃಶ್ಯಗಳು ಕಾಣಿಸುವಂತೆ ಮಾಡಲಾಗಿದೆ.

77

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮುಗಿದು ಇಂದಿಗೆ(ಜ.23) ನಾಲ್ಕು ದಿನಗಳೇ ಕಳೆದಿದ್ದರೂ, ಈಗಲೂ ನೀವು India National Cricket Team ಸರ್ಚ್ ಮಾಡಿ ಒಂದೆರಡು ಸೆಕೆಂಡ್ ಕಾದರೆ ವರ್ಚುವಲ್‌ ಸಂಭ್ರಮಾಚಣೆ ನಿಮಗೆ ಕಾಣಸಿಗುತ್ತದೆ.

click me!

Recommended Stories