ಟೀಂ ಇಂಡಿಯಾದ 6 ಕ್ರಿಕೆಟಿಗರಿಗೆ SUV ಕಾರ್ ಗಿಫ್ಟ್ ಕೊಟ್ಟ ಆನಂದ್‌ ಮಹೀಂದ್ರ..!

First Published Jan 23, 2021, 5:31 PM IST

ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಈ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾದ ಐವರು ಆಟಗಾರರು ಸೇರಿದಂತೆ ಒಟ್ಟು 6 ಕ್ರಿಕೆಟಿಗರಿಗೆ ಮಹೀಂದ್ರ ಗ್ರೂಪ್‌ ಚೇರ್‌ಮನ್‌ ಆನಂದ್ ಮಹೀಂದ್ರ ಥಾರ್ SUV ಕಾರ್‌ಗಳನ್ನು ಗಿಫ್ಟ್‌ ನೀಡಿದ್ದಾರೆ.

4 ಪಂದ್ಯಗಳ ಬಾರ್ಡರ್‌ ಗವಾಸ್ಕರ್‌ ಟೆಸ್ಟ್ ಸರಣಿಯನ್ನು ಅಜಿಂಕ್ಯ ರಹಾನೆ ಪಡೆ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಟೆಸ್ಟ್‌ ಸರಣಿಯಲ್ಲಿ ಮಿಂಚಿದ ಯುವ ಪ್ರತಿಭಾನ್ವಿತ ಆಟಗಾರರಿಗೆ ಆನಂದ್ ಮಹೀಂದ್ರ ಬಂಪರ್ ಗಿಫ್ಟ್‌ ನೀಡಿದ್ದಾರೆ. ಆನಂದ್ ಮಹೀಂದ್ರ ಸೋಷಿಯಲ್‌ ಮೀಡಿಯಾದ ಮೂಲಕ 6 ಕ್ರಿಕೆಟಿಗರಿಗೆ ಥಾರ್‌ SUVs ನೀಡುವುದಾಗಿ ಘೋಷಿಸಿದ್ದಾರೆ.
 

1. ಮೊಹಮ್ಮದ್ ಸಿರಾಜ್
undefined
ಸಿರಾಜ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ, 3 ಪಂದ್ಯಗಳನ್ನಾಡಿ 13 ವಿಕೆಟ್‌ ಕಬಳಿಸುವ ಮೂಲಕ ಭಾರತ ಪರ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿದರು.
undefined
2. ನವದೀಪ್‌ ಸೈನಿ
undefined
ಡೆಲ್ಲಿ ಮೂಲದ ವೇಗಿ ಸೈನಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸಿಡ್ನಿ ಟೆಸ್ಟ್ ಪಂದ್ಯ ರೋಚಕವಾಗಿ ಡ್ರಾನಲ್ಲಿ ಅಂತ್ಯವಾಗಿತ್ತು.
undefined
3. ಶುಭ್‌ಮನ್‌ ಗಿಲ್‌
undefined
ಆನಂದ್‌ ಮಹೀಂದ್ರ ಅವರಿಂದ ಕಾರು ಗಿಫ್ಟ್‌ ಪಡೆಯುತ್ತಿರುವ ಏಕೈಕ ಬ್ಯಾಟ್ಸ್‌ಮನ್‌, ಗಿಲ್‌ 3 ಪಂದ್ಯಗಳನ್ನಾಡಿ 259 ರನ್ ಬಾರಿಸಿದ್ದಾರೆ.
undefined
4.ವಾಷಿಂಗ್ಟನ್‌ ಸುಂದರ್‌:
undefined
ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಸ್ಪಿನ್ನರ್‌, ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿದ್ದಲ್ಲದೇ ಪ್ರಮುಖ ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದಾರೆ.
undefined
5. ಟಿ. ನಟರಾಜನ್‌
undefined
ಯಾರ್ಕರ್‌ ಸ್ಪೆಷಲಿಸ್ಟ್ ನಟರಾಜನ್‌ ಗಾಬಾ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು, ಆಸ್ಟ್ರೇಲಿಯಾ ಬರೋಬ್ಬರಿ 32 ವರ್ಷಗಳ ಬಳಿಕ ಬ್ರಿಸ್ಬೇನ್‌ನಲ್ಲಿ ಸೋಲು ಕಾಣಲು ನಟರಾಜನ್‌ ಪಾತ್ರವೂ ಇದೆ.
undefined
6. ಶಾರ್ದೂಲ್ ಠಾಕೂರ್
undefined
ಠಾಕೂರ್ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಹೈದ್ರಾಬಾದ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಕೇವಲ 10 ಎಸೆತಗಳು ಹಾಕುವಷ್ಟರಲ್ಲೇ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದರು. ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಹತ್ವದ 7 ವಿಕೆಟ್ ಹಾಗೂ ಬ್ಯಾಟಿಂಗ್‌ನಲ್ಲಿ 67 ರನ್‌ ಬಾರಿಸಿ ಗಾಬಾ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
undefined
click me!