ಎಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ ಟ್ರ್ಯಾಕ್ ರೆಕಾರ್ಡ್ ಹೇಗಿದೆ?

Published : Jul 02, 2025, 10:01 AM IST

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎರಡನೇ ಟೆಸ್ಟ್ ಪಂದ್ಯದಲ್ಲಿಂದು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಜ್‌ಬಾಸ್ಟನ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಈ ಹಿಂದೆ ಎಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ.

PREV
19
ಎಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ ಟ್ರ್ಯಾಕ್ ರೆಕಾರ್ಡ್:

ಟೀಂ ಇಂಡಿಯಾ ಇಂದು ಇಂಗ್ಲೆಂಡ್ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ಎರಡನೇ ಟೆಸ್ಟ್ ಆಡಲಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋತ ನಂತರ ಭಾರತ 0-1 ಅಂತರದಿಂದ ಹಿನ್ನಡೆಯಲ್ಲಿದೆ.

29
1. 1967 - ಇಂಗ್ಲೆಂಡ್ ಎದುರು 132 ರನ್ ಅಂತರದ ಸೋಲು

ಎಜ್‌ಬಾಸ್ಟನ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ 1967ರಲ್ಲಿ ಮೊದಲ ಪಂದ್ಯ ನಡೆಯಿತು. ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದ ಭಾರತ 132 ರನ್‌ಗಳಿಂದ ಸೋತಿತು.

39
2. 1974 - ಇಂಗ್ಲೆಂಡ್ ಎದುರು ಇನ್ನಿಂಗ್ಸ್ ಹಾಗೂ 78 ರನ್ ಅಂತರದ ಸೋಲು

1974 ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಅಜಿತ್ ವಾಡೇಕರ್ ನಾಯಕತ್ವದ ಭಾರತ ಇನ್ನಿಂಗ್ಸ್ ಮತ್ತು 78 ರನ್‌ಗಳಿಂದ ಸೋತಿತು.

49
3. 1979 - ಇಂಗ್ಲೆಂಡ್ ಎದುರು ಇನ್ನಿಂಗ್ಸ್‌ ಹಾಗೂ 83 ರನ್ ಅಂತರದ ಸೋಲು

1979 ರಲ್ಲಿ ವೆಂಕಟರಾಘವನ್ ನಾಯಕತ್ವದ ಭಾರತ ತಂಡವು ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋತಿತು.

59
4. 1986 - ಭಾರತ-ಇಂಗ್ಲೆಂಡ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ

1986 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ನಡೆದ ಇಂಗ್ಲೆಂಡ್ ಎದುರಿನ ಪಂದ್ಯವು ಡ್ರಾ ನಲ್ಲಿ ಅಂತ್ಯವಾಯಿತು.

69
5. 1996 - ಇಂಗ್ಲೆಂಡ್ ಎದುರು 8 ವಿಕೆಟ್ ಅಂತರದ ಸೋಲು

1996 ರಲ್ಲಿ ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಭಾರತ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ 8 ವಿಕೆಟ್‌ಗಳಿಂದ ಸೋತಿತು.

79
6. 2011 - ಇಂಗ್ಲೆಂಡ್ ಎದುರು ಇನ್ನಿಂಗ್ಸ್ ಹಾಗೂ 242 ರನ್ ಅಂತರದ ಸೋಲು

2011 ರಲ್ಲಿ ಧೋನಿ ನಾಯಕತ್ವದ ಭಾರತ ಇನ್ನಿಂಗ್ಸ್ ಮತ್ತು 242 ರನ್‌ಗಳಿಂದ ಸೋತಿತು.

89
7. 2018 - ಇಂಗ್ಲೆಂಡ್ ಎದುರು 31 ರನ್ ಅಂತರದ ಸೋಲು

2018 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ 31 ರನ್‌ಗಳಿಂದ ಸೋತಿತು.

99
8. 2022 - ಇಂಗ್ಲೆಂಡ್ ಎದುರು 7 ವಿಕೆಟ್ ಅಂತರದ ಸೋಲು

2022 ರಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವದ ಭಾರತ 7 ವಿಕೆಟ್‌ಗಳಿಂದ ಸೋತಿತು.

Read more Photos on
click me!

Recommended Stories