ಮೊಹಮ್ಮದ್ ಶಮಿಗೆ ಹಿನ್ನಡೆ, ವಿಚ್ಚೇದಿತ ಪತ್ನಿಗೆ ದುಬಾರಿ ಜೀವನಾಂಶ ಪಾವತಿಸಲು ಆದೇಶ

Published : Jul 01, 2025, 10:35 PM ISTUpdated : Jul 01, 2025, 10:46 PM IST

ಕ್ರಿಕೆಟಿಗ ಮೊಹಮ್ಮದ್ ಶಮಿಗೆ ತೀವ್ರ ಹಿನ್ನಡೆಯಾಗಿದೆ. ಪ್ರತಿ ತಿಂಗಳು ವಿಚ್ಚೇದಿತ ಪತ್ನಿಗೆ ಇಷ್ಟು ಮೊತ್ತವನ್ನು ಜೀವನಾಂಶ ಪಾವತಿಸಲು ಕೋರ್ಟ್ ಆದೇಶಿಸಿದೆ. ಇದೀಗ ಶಮಿ ಪ್ರತಿ ತಿಂಗಳು ಹಸಿನಾ ಜಹಾನ್‌ಗೆ ಎಷ್ಟು ಪಾವತಿಸಬೇಕು?

PREV
16

ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ದಾಂಪತ್ಯ ಜೀವನ ಮುರಿದು ಬಿದ್ದು ಹಲವು ವರ್ಷ ಉರುಳಿದೆ. ಆದರೆ ಕಾನೂನು ಹೋರಾಟ ನಡೆಯುತ್ತಲೇ ಇದೆ. ಪರಿಹಾರ ಮೊತ್ತ, ಜೀವನಾಂಶ ಮೊತ್ತ ಸೇರಿದಂತೆ ಹಲವು ಮೊತ್ತಗಳನ್ನು ಮೊಹಮ್ಮದ್ ಶಮಿ ಪಾವತಿಸಬೇಕು. ಸದ್ಯ ನೀಡುತ್ತಿರುವ ಮೊತ್ತ ಸಾಲುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಹಸಿನ್ ಜಹಾನ್ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಇದರೊಂದಿಗೆ ಶಮಿಗೆ ತೀವ್ರ ಹಿನ್ನಡೆಯಾಗಿದೆ.

26

ಕಲ್ಕತ್ತಾ ಹೈಕೋರ್ಟ್ ಹಸಿನ್ ಜಹಾನ್ ಅರ್ಜಿ ವಿಚಾರಣೆ ನಡೆಸಿ ಇದೀಗ ಆದೇಶ ಹೊರಡಿಸಿದೆ. ಪ್ರತಿ ತಿಂಗಳು ಮೊಹಮ್ಮದ್ ಶಮಿ ವಿಚ್ಚೇದಿತ ಪತ್ನಿ ಹಸಿನ್ ಜಹಾನ್‌ಗೆ 4 ಲಕ್ಷ ರೂಪಾಯಿ ಜೀವನಾಂಶ ವೆಚ್ಚವಾಗಿ ಪಾವತಿಸಬೇಕು ಎಂದು ಆದೇಶ ನೀಡಿದೆ. ಪ್ರತಿ ತಿಂಗಳು ಮೊಹಮ್ಮದ್ ಶಮಿ ಈ ಮೊತ್ತವನ್ನು ಪತ್ನಿಗೆ ವರ್ಗಾವಣೆ ಮಾಡಬೇಕು ಎಂದಿದೆ.

36

4 ಲಕ್ಷ ರೂಪಾಯಿ ತಿಂಗಳ ವೆಚ್ಚದಲ್ಲಿ 2.5 ಲಕ್ಷ ರೂಪಾಯಿ ಶಮಿ ಪುತ್ರಿ ಐರಾಗೆ ನೀಡಬೇಕು. ಇನ್ನುಳಿದ 1.5 ಲಕ್ಷ ರೂಪಾಯಿ ಮೊತ್ತವನ್ನು ಹಸಿನ್ ಜಹಾನ್‌ಗೆ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿಯಿಂದ ಕಳೆದ 7 ವರ್ಷದ ಮೊತ್ತವನ್ನು ಶಮಿ ಪಾವತಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಹೀಗಾಗಿ ಮೊಮ್ಮದ್ ಶಮಿ ದುಬಾರಿ ಮೊತ್ತವನ್ನು ಇದೀಗ ವಿಚ್ಚೇದಿತ ಪತ್ನಿ ಹಸಿನ್ ಜಹಾನ್‌ಗೆ ವರ್ಗಾವಣೆ ಮಾಡಬೇಕಿದೆ.

46

ಇತ್ತೀಚೆಗೆ ಕೆಳ ಹಂತದ ನ್ಯಾಯಾಲಯ ಈ ಪ್ರಕರಣವನ್ನು 6 ತಿಂಗಳ ಒಳಗೆ ಮುಗಿಸಬೇಕು ಎಂದಿತ್ತು. ಕಾರಣ ಕಳೆದ 7 ವರ್ಷದಿಂದ ಈ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ತುರ್ತಾಗಿ ಪ್ರಕರಣ ಅಂತ್ಯಗೊಳಿಸಲು ಸೂಚಿಸಿತ್ತು. ಇದೀಗ ಕಲ್ಕತಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

56

ಕಳೆದ ವರ್ಷ ಮೊಹಮ್ಮದ್ ಶಮಿ ಪುತ್ರಿಯನ್ನು ಭೇಟಿ ಮಾಡಿದ್ದರು. ಬಳಿಕ ಇಬ್ಬರು ಶಾಪಿಂಗ್ ಮಾಲ್‌ನಲ್ಲಿ ಸುತ್ತಾಡಿದ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಮೊಹಮ್ಮದ್ ಶಮಿ ಹಂಚಿಕೊಂಡಿದ್ದರು. ಸುದೀರ್ಘ ವರ್ಷಗಳ ಬಳಿಕ ಮೊಹಮ್ಮದ್ ಶಮಿ ಮಗಳನ್ನು ಭೇಟಿಯಾಗಿದ್ದರು. ಈ ವೇಳೆ ಶಮಿ ಭಾವುಕರಾಗಿದ್ದರು. ಪುತ್ರಿಗೆ ಕೆಲ ವಸ್ತುಗಳನ್ನು ಖರೀದಿಸಿ ನೀಡಿದ್ದರು.

66

ಈ ಭೇಟಿ ಬಳಿಕವೂ ಹಸಿನಾ ಜಹಾನ್ , ಶಮಿ ವಿರುದ್ಧ ಆರೋಪ ಮಾಡಿದ್ದರು. ಇಷ್ಟು ವರ್ಷ ಶಮಿ ಮಗಳ ಬಳಿ ಮಾತನಾಡಿಲ್ಲ,ಭೇಟಿಯಾಗಿಲ್ಲ. ಶಮಿಗೆ ಪ್ರಾಯೋಜಕತ್ವ ನೀಡಿದ ಕಂಪನಿ ಶಾಪ್‌ಗೆ ತೆರಳಿದ್ದಾರೆ. ಅಲ್ಲಿ ಶಮಿ ಏನು ಪಾವತಿಸಬೇಕಿಲ್ಲ. ಹೀಗಾಗಿ ಶೂ ಹಾಗೂ ಇತರ ವಸ್ತು ತೆಗೆದುಕೊಟ್ಟಿದ್ದಾರೆ ಎಂದು ಜಹಾನ್ ಆರೋಪಿಸಿದ್ದರು. ಇದುವರೆಗೆ ಶಮಿ ಮಗಳ ಬಗ್ಗೆ ವಿಚಾರಿಸಿಲ್ಲ ಎಂದು ಆರೋಪಿಸಿದ್ದರು.

Read more Photos on
click me!

Recommended Stories