ಇಂಡೋ-ಆಸೀಸ್ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ 3 ಬದಲಾವಣೆ..?

Suvarna News   | Asianet News
Published : Dec 01, 2020, 04:53 PM IST

ಕ್ಯಾನ್‌ಬೆರಾ: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಡಿಸೆಂಬರ್ 02ರಂದು ನಡೆಯಲಿರುವ ಪಂದ್ಯಕ್ಕೆ ಇಲ್ಲಿನ ಮುನುಕಾ ಓವಲ್ ಮೈದಾನ ಆತಿಥ್ಯ ವಹಿಸಿದೆ. ಈಗಾಗಲೇ ಮೊದಲೆರಡು ಪಂದ್ಯಗಳು ಸೋಲುವ ಮೂಲಕ ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ 3 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

PREV
111
ಇಂಡೋ-ಆಸೀಸ್ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ 3 ಬದಲಾವಣೆ..?

1. ಶುಭ್‌ಮನ್ ಗಿಲ್‌: ಮೊದಲೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ಪ್ರದರ್ಶನ ತೋರಲು ವಿಫಲವಾಗಿರುವ ಅಗರ್‌ವಾಲ್ ಬದಲಿಗೆ ಮತ್ತೋರ್ವ ಪ್ರತಿಭೆ ಶುಭ್‌ಮನ್‌ ಗಿಲ್‌ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.

211

2. ಶಿಖರ್ ಧವನ್: ಮೊದಲ ಪಂದ್ಯದಲ್ಲಿ ಅರ್ಧಶತಕ ಚಚ್ಚಿದ್ದ ಧವನ್ ಬ್ಯಾಟ್‌ನಿಂದ ಮತ್ತೊಂದು ದೊಡ್ಡ ಇನಿಂಗ್ಸ್‌ನ ಅಗತ್ಯವಿದೆ.

311

3. ವಿರಾಟ್ ಕೊಹ್ಲಿ: ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ದೊಡ್ಡ ಇನಿಂಗ್ಸ್‌ ಆಡಬೇಕಾದ ಅನಿವಾರ್ಯತೆಯಿದೆ.

411

4. ಶ್ರೇಯಸ್ ಅಯ್ಯರ್: ಮೊದಲೆರಡು ಪಂದ್ಯಗಳಲ್ಲಿ ವಿಫಲವಾಗಿದ್ದರೂ ಅಯ್ಯರ್‌ಗೆ ನಾಯಕ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ.

511

5. ಕೆ.ಎಲ್. ರಾಹುಲ್: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಕೂಡಾ ಮತ್ತೊಮ್ಮೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬೇಕಾಗಿದೆ.

611

6. ಹಾರ್ದಿಕ್ ಪಾಂಡ್ಯ: ಬ್ಯಾಟಿಂಗ್‌ನಲ್ಲಿ ಸೈ ಎನಿಸಿಕೊಂಡಿರುವ ಪಾಂಡ್ಯ, ಬೌಲಿಂಗ್‌ನಲ್ಲೂ ಆಸರೆಯಾಗಬೇಕಿದೆ.

711

7. ರವೀಂದ್ರ ಜಡೇಜಾ: ಬೌಲಿಂಗ್‌ನಲ್ಲಿ ರನ್‌ ವೇಗಕ್ಕೆ ಜಡೇಜಾ ಕೊಂಚ ಕಡಿವಾಣ ಹಾಕುತ್ತಿದ್ದಾರೆ. ಆದರೆ ವಿಕೆಟ್‌ ಕಬಳಿಸಿದರೆ ತಂಡಕ್ಕೆ ಮತ್ತಷ್ಟು ಅನುಕೂಲವಾಗಲಿದೆ.

811

8. ಮೊಹಮ್ಮದ್ ಶಮಿ: ಕಳೆದೆರಡು ಪಂದ್ಯಗಳಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿರುವ ಶಮಿ ಮತ್ತೊಮ್ಮೆ ತಂಡಕ್ಕೆ ತಮ್ಮ ಅನುಭವವನ್ನು ಧಾರೆ ಎರೆಯಬೇಕಾಗಿದೆ.

911

9. ಟಿ. ನಟರಾಜನ್: ಕಳೆದೆರಡು ಪಂದ್ಯಗಳಲ್ಲಿ ದುಬಾರಿಯಾಗಿರುವ ನವದೀಪ್ ಸೈನಿ ಬದಲಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

1011

10. ಜಸ್ಪ್ರೀತ್ ಬುಮ್ರಾ: ಡೆತ್ ಓವರ್ ಸ್ಪೆಷಲಿಸ್ಟ್ ಬುಮ್ರಾ ಮೊದಲೆರಡು ಪಂದ್ಯಗಳಲ್ಲಿ ಪರಿಣಾಮಕಾರಿ ದಾಳಿ ನಡೆಸಲು ಎಡವಿದ್ದು, ಕೊನೆಯ ಪಂದ್ಯದಲ್ಲಾದರೂ ಲಯಕ್ಕೆ ಮರಳುತ್ತಾರಾ ಕಾದು ನೋಡಬೇಕಿದೆ.

1111

11. ಕುಲ್ದೀಪ್ ಯಾದವ್: ಇನ್ನು ಕಳೆದೆರಡು ಪಂದ್ಯಗಳಲ್ಲಿ ಸಾಕಷ್ಟು ದುಬಾರಿಯಾಗಿರುವ ಯುಜುವೇಂದ್ರ ಚಹಲ್‌ ಬದಲಿಗೆ ಕುಲ್ದೀಪ್ ಯಾದವ್‌ಗೆ ತಂಡದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿದೆ.

click me!

Recommended Stories