ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ: ಕ್ರಿಕೆಟಿಗರ ಹನಿಮೂನ್‌ ಫೋಟೋಸ್!

First Published | Nov 30, 2020, 5:30 PM IST

ಭಾರತದಲ್ಲಿ ಕ್ರಿಕೆಟಿಗರನ್ನು ಸೆಲೆಬ್ರಿಟಿಗಳೆಂದು ಪರಿಗಣಿಸಲಾಗುತ್ತದೆ, ಹಾಗಾಗಿ ಅವರ ವೈವಾಹಿಕ ಜೀವನವು ಗಮನ ಸೆಳೆಯುತ್ತದೆ. ಕ್ರಿಕೆಟಿಗರು ಸಖತ್‌ ಶ್ರೀಮಂತರಾಗಿರುವುದರಿಂದ ಅವರ ಹನಿಮೂನ್‌ಗಾಗಿ ದುಬಾರಿ ಸ್ಥಳಗಳಿಗೇ ಹೋಗುತ್ತಾರೆ. ಟೀಮ್‌ ಇಂಡಿಯಾದ ಕೆಲವು ಟಾಪ್‌ ಪ್ಲೇಯರ್ಸ್‌ನ ಹನಿಮೂನ್‌ ಫೋಟೋಗಳು ಇಲ್ಲಿವೆ

ಭಾರತದ ಕ್ರಿಕೆಟಿಗರು ಸೆಲೆಬ್ರಿಟಿಗಳಿಗಿಂತ ಕಡಿಮೆಯಿಲ್ಲ. ಅದರಿಂದ ಅವರ ವೈವಾಹಿಕ ಜೀವನ ಸಹ ಅಭಿಮಾನಿಗಳಗಮನ ಸೆಳೆಯುತ್ತದೆ.
ಕೆಲವರು ಕ್ರಿಕೆಟರ್ಸ್‌ ತಮ್ಮ ಹನಿಮೂನಿಗಾಗಿ ಯೂನಿಕ್‌ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
Tap to resize

ಎಂ.ಎಸ್. ಧೋನಿ (ಗೋವಾ):ಭಾರತದ ಪ್ರಸಿದ್ಧ ಮಾಜಿ ನಾಯಕ ಎಂ.ಎಸ್. ಧೋನಿ, 2010ರಲ್ಲಿ ಸಾಕ್ಷಿ ಜೊತೆ ವಿವಾಹವಾದರು. ದಂಪತಿ ಹಾಲಿಡೇಗಾಗಿ ಸಾಕಷ್ಟು ಹೊರಗಿನಸ್ಥಳಗಳಿಗೆ ಭೇಟಿ ನೀಡಿದ್ದರೂ, ಹನಿಮೂನ್‌ಗಾಗಿ ಮಾತ್ರ ಗೋವಾವನ್ನು ಆರಿಸಿಕೊಂಡಿದ್ದರು.
ರೋಹಿತ್ ಶರ್ಮಾ (ಇಟಲಿ):ರೋಹಿತ್ ತಮ್ಮ ದೀರ್ಘಕಾಲದ ಗೆಳತಿರಿತಿಕಾ ಸಜ್ದೆಹ್ ಅವರನ್ನು 2015ರಲ್ಲಿ ಮದುವೆಯಾಗಿದ್ದಾರೆ. ಮದುವೆಯ ನಂತರ ಹನಿಮೂನ್‌‌ಗೆ ಇಟಲಿಗೆ ಹೋಗಿದ್ದರು.
ರಾಬಿನ್ ಉತ್ತಪ್ಪ (ಯುರೋಪ್):ಭಾರತದ ಆರಂಭಿಕ ಮತ್ತು ಪಾರ್ಟ್‌ ಟೈಮ್‌ ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ 2016 ರಲ್ಲಿ ಶೀತಲ್ ಗೌತಮ್‌ಗೆ ಬೌಲ್ಡ್‌ ಆದರು. ಈ ಕಪಲ್‌ ಹನಿಮೂನ್‌ಗಾಗಿ ಯುರೋಪಿನ ವಿವಿಧ ಸ್ಥಳಗಳಿಗೆ ಹೋಗಿತ್ತು.
ಸುರೇಶ್ ರೈನಾ (ಮಿಲನ್):2015 ರಲ್ಲಿ ಮದುವೆಯಾದ ರೈನಾ ಪ್ರಿಯಾಂಕ ಇಟಲಿಯ ಆಕರ್ಷಕ ದ್ವೀಪ ಮಿಲನ್‌ನಲ್ಲಿ ತಮ್ಮ ಹನಿಮೂನ್‌ ಸೆಲೆಬ್ರೇಟ್ ಮಾಡಿದ್ದರು.
ವಿರಾಟ್ ಕೊಹ್ಲಿ (ಫಿನ್ಲ್ಯಾಂಡ್):ಭಾರತೀಯ ನಾಯಕ ಮತ್ತು ಅವರ ಬಾಲಿವುಡ್ ಪತ್ನಿ ಅನುಷ್ಕಾ ಶರ್ಮಾ 2017 ರಲ್ಲಿ ವಿವಾಹವಾದರು. ಈ ಜೋಡಿ ಮಧುಚಂದ್ರಕ್ಕಾಗಿ ಫಿನ್ಲೆಂಡ್‌ಗೆ ತೆರಳಿತ್ತು.
ದಿನೇಶ್ ಕಾರ್ತಿಕ್ (ಮಾಲ್ಡೀವ್ಸ್):ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ದೀಪಿಕಾ ಪಲ್ಲಿಕಲ್ ಅವರೊಂದಿಗೆ ಸಂತೋಷದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ, ಈ ದಂಪತಿಗಳು ತಮ್ಮ ಮಧುಚಂದ್ರವನ್ನು ಮಾಲ್ಡೀವ್ಸ್‌ನ ಶಾಂತ ದ್ವೀಪಗಳಲ್ಲಿ ಕಳೆದರು.

Latest Videos

click me!