Ind vs SA: ಇಂದಾದರೂ ಟೀಂ ಇಂಡಿಯಾದಲ್ಲಿ ಈ ಇಬ್ಬರಿಗೆ ಸಿಗುತ್ತಾ ಸ್ಥಾನ..?

Published : Jun 17, 2022, 03:34 PM IST

ಕಟಕ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 4ನೇ ಟಿ20 ಪಂದ್ಯಕ್ಕೆ ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ಕ್ರಿಕೆಟ್ ಅಕಾಡೆಮಿ ಮೈದಾನ ಆತಿಥ್ಯವನ್ನು ವಹಿಸಿದೆ. ಸತತ 2 ಸೋಲುಗಳ ಬಳಿಕ ಮೂರನೇ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು, ಟಿ20 ಸರಣಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬಹುತೇಕ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

PREV
111
Ind vs SA: ಇಂದಾದರೂ ಟೀಂ ಇಂಡಿಯಾದಲ್ಲಿ ಈ ಇಬ್ಬರಿಗೆ ಸಿಗುತ್ತಾ ಸ್ಥಾನ..?
Image credit: PTI

1. ಇಶಾನ್ ಕಿಶನ್
ಸ್ಪೋಟಕ ಎಡಗೈ ಆರಂಭಿಕ ಬ್ಯಾಟರ್ ಇಶಾನ್ ಕಿಶನ್‌, ಹರಿಣಗಳ ಪಡೆಯೆದುರು ಅದ್ಭುತ ಬ್ಯಾಟಿಂಗ್ ನಡೆಸುತ್ತಿದ್ದು, ಕಳೆದ 3 ಪಂದ್ಯಗಳಿಂದ ಒಟ್ಟು 164 ರನ್ ಸಿಡಿಸುವ ಮೂಲಕ ಗರಿಷ್ಟ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಇಶಾನ್ ತಮ್ಮ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

211

2.ಋತುರಾಜ್ ಗಾಯಕ್ವಾಡ್‌
ಮೊದಲೆರಡು ಪಂದ್ಯಗಳಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದ ಋತುರಾಜ್ ಗಾಯಕ್ವಾಡ್ ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಫಾರ್ಮ್‌ಗೆ ಮರಳಿದ್ದರು. ಗಾಯಕ್ವಾಡ್ ಇಂದಿನ ಪಂದ್ಯದಲ್ಲೂ ಅಬ್ಬರಿಸುವ ರೆಡಿಯಾಗಿದ್ದಾರೆ.
 

311
Image credit: PTI

3. ಶ್ರೇಯಸ್ ಅಯ್ಯರ್
ಮುಂಬೈ ಮೂಲದ ಪ್ರತಿಭಾನ್ವಿತ ಕ್ರಿಕೆಟಿಗ ಶ್ರೇಯಸ್ ಅಯ್ಯರ್, ದಕ್ಷಿಣ ಆಫ್ರಿಕಾ ಎದುರು ಉತ್ತಮ ಆರಂಭವನ್ನು ಪಡೆಯುತ್ತಿದ್ದರೂ ಸಹಾ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗುತ್ತಿದ್ದಾರೆ. ಇದೀಗ ದೊಡ್ಡ ಮೊತ್ತ ಗಳಿಸಿ ತಂಡಕ್ಕೆ ನೆರವಾಗುವ ಒತ್ತಡ ಶ್ರೇಯಸ್ ಅಯ್ಯರ್ ಮೇಲಿದೆ
 

411
Image credit: PTI

4. ರಿಷಭ್ ಪಂತ್
ಹಂಗಾಮಿ ನಾಯಕರಾಗಿರುವ ಪಂತ್‌, ಬ್ಯಾಟಿಂಗ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ ಎರಡಂಕಿ ಮೊತ್ತ ದಾಖಲಿಸಲು ವಿಫಲವಾಗಿರುವ ಪಂತ್, ನಾಲ್ಕನೇ ಟಿ20 ಪಂದ್ಯದಲ್ಲಿ ಸಿಡಿಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
 

511
Image credit: PTI

5. ಹಾರ್ದಿಕ್‌ ಪಾಂಡ್ಯ
ಬ್ಯಾಟಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮ್ಯಾಚ್ ಫಿನಿಶರ್ ಆಗಿ ಯಶಸ್ವಿಯಾಗುತ್ತಿದ್ದರೂ ಸಹಾ, ಬೌಲಿಂಗ್‌ನಲ್ಲಿ ಲಯ ಕಂಡುಕೊಳ್ಳಲು ವಿಫಲವಾಗಿದ್ದಾರೆ. ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಅವರಿಂದ ಪರಿಣಾಮಕಾರಿ ಬೌಲಿಂಗ್ ದಾಳಿಯನ್ನು ನಿರೀಕ್ಷೆ ಮಾಡುತ್ತಿದೆ.

611
Image credit: PTI

6. ದಿನೇಶ್ ಕಾರ್ತಿಕ್
2022ನೇ ಸಾಲಿನ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ದಿನೇಶ್ ಕಾರ್ತಿಕ್‌ ಅವರಿಗೆ ತಮ್ಮ ಖದರ್ ತೋರಿಸಲು ಹರಿಣಗಳ ಎದುರು ಉತ್ತಮ ವೇದಿಕೆ ಸಿಕ್ಕಿಲ್ಲ. ದಕ್ಷಿಣ ಆಫ್ರಿಕಾ ಎದುರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದೊಳಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವುದು ಕಾರ್ತಿಕ್ ಲೆಕ್ಕಾಚಾರವಾಗಿದೆ.
 

711
Image credit: PTI

7. ಹರ್ಷಲ್ ಪಟೇಲ್
ಟೀಂ ಇಂಡಿಯಾ ಡೆತ್ ಓವರ್‌ ಸ್ಪೆಷಲಿಸ್ಟ್ ಹಾರ್ದಿಕ್ ಪಾಂಡ್ಯ, ಕಳೆದ ಪಂದ್ಯದಲ್ಲಿ ಶಿಸ್ತುಬದ್ದ ದಾಳಿಯ ಮೂಲಕ 4 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಹರ್ಷಲ್ ಪಟೇಲ್ ಎದುರು ನೋಡುತ್ತಿದ್ದಾರೆ.
 

811

8. ಆರ್ಶದೀಪ್ ಸಿಂಗ್
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆತ್ ಓವರ್‌ನಲ್ಲಿ ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸಿದ್ದ ಆರ್ಶದೀಪ್ ಸಿಂಗ್, ಇದೀಗ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದು, ಅಕ್ಷರ್ ಪಟೇಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

911

9. ಭುವನೇಶ್ವರ್ ಕುಮಾರ್
ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಬುಮ್ರಾ ಹಾಗೂ ಶಮಿ ಅನುಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿ ಬೌಲಿಂಗ್ ದಾಳಿ ನಡೆಸುತ್ತಿದ್ದು, ಇದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

1011

10. ಉಮ್ರಾನ್ ಮಲಿಕ್
ಆವೇಶ್ ಖಾನ್ ಕಳೆದ ಮೂರು ಪಂದ್ಯಗಳಲ್ಲಿ ಅಂತಹ ಗಮನಾರ್ಹ ಪ್ರದರ್ಶನ ತೋರಲು ಯಶಸ್ವಿಯಾಗಿಲ್ಲ. ಹೀಗಾಗಿ ಮಾರಕ ವೇಗಿ ಉಮ್ರಾನ್ ಮಲಿಕ್‌ಗೆ ಇಂದಿನ ಪಂದ್ಯದಲ್ಲಿ ತಂಡದೊಳಗೆ ಸ್ಥಾನ ನೀಡುವ ಸಾಧ್ಯತೆಯಿದೆ.

1111
Image credit: PTI

11. ಯುಜುವೇಂದ್ರ ಚಹಲ್
ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಚಹಲ್, ಕಳೆದ 3 ಪಂದ್ಯಗಳಿಂದ 4 ವಿಕೆಟ್ ಕಬಳಿಸಿದ್ದು, ಮಹತ್ವದ ಪಂದ್ಯದಲ್ಲಿ ತಮ್ಮ ಕೈಚಳಕ ತೋರಿಸಲು ರೆಡಿಯಾಗಿದ್ದಾರೆ.
 

Read more Photos on
click me!

Recommended Stories