28 ವರ್ಷ ಚಿಕ್ಕ ಪತ್ನಿಯನ್ನು ಮದುವೆಯಾಗಿರುವ ಮಾಜಿ ಕ್ರಿಕೆಟಿಗ ಅರುಣ್‌ ಲಾಲ್ ಹನಿಮೂನ್ ಬಗ್ಗೆ ಹೇಳಿದ್ದೇನು?

Published : Jun 10, 2022, 01:26 PM IST

ಬೆಂಗಳೂರು: ಕಳೆದ ಮೇ ತಿಂಗಳಿನಲ್ಲಿ ಬಹುಕಾಲದ ಗೆಳತಿ ಹಾಗೂ ತಮಗಿಂತ 28 ವರ್ಷ ಚಿಕ್ಕವರಾಗಿರುವ ಬುಲ್‌ಬುಲ್ ಸಾಹ (Bulbul Saha) ಅವರನ್ನು ವಿವಾಹವಾಗಿ ಗಮನ ಸೆಳೆದಿದ್ದ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಅರುಣ್‌ ಲಾಲ್‌ (Arun Lal), ತಮ್ಮ ಹನಿಮೂನ್ ಪ್ಲಾನ್ (Honeymoon plans) ರಿವೀಲ್ ಮಾಡಿದ್ದಾರೆ. 

PREV
17
28 ವರ್ಷ ಚಿಕ್ಕ ಪತ್ನಿಯನ್ನು ಮದುವೆಯಾಗಿರುವ ಮಾಜಿ ಕ್ರಿಕೆಟಿಗ ಅರುಣ್‌ ಲಾಲ್ ಹನಿಮೂನ್ ಬಗ್ಗೆ ಹೇಳಿದ್ದೇನು?

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅರುಣ್ ಲಾಲ್‌ ಮೇ.02ರಂದು ಬಹುಕಾಲದ ಗೆಳತಿ ಬುಲ್‌ಬುಲ್ ಸಾಹ ಅವರನ್ನು ಕೈಹಿಡಿದಿದ್ದಾರೆ. ಅರುಣ್ ಲಾಲ್ ಅವರ ಪತ್ನಿ ವೃತ್ತಿಯಲ್ಲಿ  ಶಿಕ್ಷಕಿಯಾಗಿದ್ದು, ಅರುಣ್ ಲಾಲ್ ಅವರಿಗಿಂತ 28 ವರ್ಷ ಚಿಕ್ಕವರಾಗಿದ್ದಾರೆ.
 
27

66 ವರ್ಷದ ಅರುಣ್ ಲಾಲ್‌, 38 ವರ್ಷದ ಬುಲ್‌ಬುಲ್‌ ಸಾಹ ಅವರೊಂದಿಗೆ ಸಾಕಷ್ಟು ಕಾಲದಿಂದಲೂ ಡೇಟಿಂಗ್ ನಡೆಸುತ್ತಿದ್ದರು. ಅರುಣ್ ಲಾಲ್‌ ಅವರ ಮೊದಲ ಪತ್ನಿ ರೀನಾ, ಸಾಕಷ್ಟು ಸಮಯದಿಂದ ಕಾಯಿಲೆಯಿಂದ ಬಳಲುತ್ತಿದ್ದರು. ರೀನಾ ಅವರ ಅನುಮತಿಯನ್ನು ಪಡೆದೇ ಬುಲ್‌ಬುಲ್ ಸಾಹ ಅವರನ್ನು ಅರುಣ್ ಲಾಲ್ ಕೈಹಿಡಿದಿದ್ದಾರೆ.
 
37

47

ವಿವಾಹದ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರುಣ್ ಲಾಲ್, ನಾನು ವಿವಾಹವಾಗಿರುವುದಕ್ಕೆ ಖುಷಿಯಾಗಿತ್ತದೆ. ನನ್ನ ಜೀವನದಲ್ಲಿ ಇದು ವಿಶೇಷ ಕ್ಷಣ. ನಾನು ಬುಲ್‌ಬುಲ್ ಅವರನ್ನು ತುಂಬಾ ಇಷ್ಟಪಡುತ್ತೇನೆ ಎಂದು ಖ್ಯಾತ ವೀಕ್ಷಕ ವಿವರಣೆಗಾರರೂ ಆಗಿರುವ ಅರುಣ್ ಲಾಲ್ ಹೇಳಿದ್ದಾರೆ.

57

ಇದೇ ಮಾಧ್ಯಮದವರು ಕೇಳಿದ ನಿಮ್ಮ ಹನಿಮೂನ್ ಎಲ್ಲಿ ಅಚರಿಸಿಕೊಳ್ಳುತ್ತೀರಿ ಎಂದಿದ್ದಕ್ಕೆ ಉತ್ತರಿಸಿದ್ದ ಅವರು ರಣಜಿ ಟ್ರೋಫಿಯೇ ನಮ್ಮ ಹನಿಮೂನ್ ಎಂದು ಚುಟುಕಾಗಿ ಉತ್ತರಿಸಿದ್ದರು.

67

ಅರುಣ್‌ ಲಾಲ್‌, ಬೆಂಗಾಲ್ ರಣಜಿ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿಳಿದ್ದಾರೆ. ಅರುಣ್ ಲಾಲ್‌ ಜತೆ ಅವರ ಪತ್ನಿ ಬುಲ್‌ಬುಲ್ ಸಾಹ ಕೂಡಾ ಬೆಂಗಳೂರಿಗೆ ಬಂದಿಳಿದ್ದಾರೆ.

77

Read more Photos on
click me!

Recommended Stories