Zimbabwe Cricket Team Captain Sikandar Raza on Vaibhav Suryavanshi ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೂ ಮುನ್ನ, ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಎದುರಾಳಿ ತಂಡದ ನಾಯಕ ಸಿಕಂದರ್ ರಾಜಾ ಮಾತನಾಡಿದ್ದಾರೆ.
ಕ್ರಿಕೆಟ್ ಟೀಂ ಇಂಡಿಯಾ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ, ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ. ಜುಲೈ 23ರಿಂದ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯಗಳು ನಡೆಯಲಿವೆ. ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿ ಬಗ್ಗೆ ಎದುರಾಳಿ ತಂಡದ ನಾಯಕ ಸಿಕಂದರ್ ರಾಜಾ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
25
ವೈಭವ್ ಸೂರ್ಯವಂಶಿ ಅದ್ಭುತ ಪ್ರತಿಭೆ
ಜಿಯೋ ಹಾಟ್‌ಸ್ಟಾರ್ ಜೊತೆ ಮಾತನಾಡಿರುವ ಸಿಕಂದರ್ ರಾಜಾ, 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ, ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದಾನೆ. ಕೇವಲ ಎರಡ್ಮೂರು ಪಂದ್ಯಗಳ ಆಟವನ್ನು ಪರಿಗಣಿಸಿ ಟೀಕೆ ಮಾಡೋದು ಸರಿಯಲ್ಲ. ವೈಭವ್ ಜೊತೆ ಅನೇಕ ಹಿರಿಯರು ಮತ್ತು ಅನುಭವಿ ಆಟಗಾರರಿದ್ದಾರೆ. ಇವರೆಲ್ಲರ ಮಾರ್ಗದರ್ಶನ ಪಡೆದು ವೈಭವ್ ಆಟವಾಡಿದ್ರೆ ಅದ್ಭುತ ಪ್ರತಿಭೆ ಆಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
35
ಇದು ದೊಡ್ಡ ಸಾಧನೆ
ತಮ್ಮೊಂದಿಗಿರುವ 15 ವರ್ಷದ ಬಾಲಕ ವೈಭವ್‌ಗೆ ಹಿರಿಯ ಆಟಗಾರರು ಮಾರ್ಗದರ್ಶನ ನೀಡಬೇಕು ಎಂದಿರುವ ಸಿಕಂದರ್ ರಾಜಾ, ಅಂಡರ್-19 ತಂಡದಲ್ಲಿನ ಉತ್ತಮ ಪ್ರದರ್ಶನದಿಂದಾಗಿ ವೈಭವ್ ಸೂರ್ಯವಂಶಿ, ಇಂಟರ್‌ನ್ಯಾಷನಲ್ ಮ್ಯಾಚ್ ಆಡುತ್ತಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಪಂದ್ಯವಾಡೋದು ಸಾಧನೆ. ಇಂದಿನ ದಿನಗಳಲ್ಲಿ ಇಂತಹ ಸಾಧನೆಗಳು ಕೇಳೋದು ಅಪರೂಪ. ವೈಭವ್ ಸೂರ್ಯವಂಶಿ ವಿಶೇಷ ಆಟಗಾರನಾಗಿದ್ದು, ಆತನಿಗೆ ಸೂಕ್ತ ಮಾರ್ಗದರ್ಶನ ನೀಡಿ ಹ್ಯಾಂಡಲ್ ಮಾಡೋದು ಪ್ರಮುಖವಾಗುತ್ತದೆ.
ಸಚಿನ್ ತೆಂಡಲ್ಕೂರ್ ದಾಖಲೆ ಬ್ರೇಕ್ ಮಾಡಿರುವ ವೈಭವ್ ಸೂರ್ಯವಂಶಿ
15 ವರ್ಷದ ವೈಭವ್ ಸೂರ್ಯವಂಶಿ, ಇದೇ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದ ಮೂಲಕ ಇಂಟರ್‌ನ್ಯಾಷನಲ್ ಮ್ಯಾಚ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಸಚಿನ್ ತೆಂಡಲ್ಕೂರ್ ದಾಖಲೆಯನ್ನು ವೈಭವ್ ಸೂರ್ಯವಂಶಿ ಬ್ರೇಕ್ ಮಾಡಿದ್ದರು.
55
16 ಪಂದ್ಯಗಳಲ್ಲಿ 776 ರನ್
2026ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಟವಾಡಿದ್ದ ವೈಭವ್ ಸೂರ್ಯವಂಶಿ, 16 ಪಂದ್ಯಗಳಲ್ಲಿ 776 ರನ್ ಕಲೆ ಹಾಕಿದ್ದರು. ಈ ವರ್ಷದ ಐಪಿಎಲ್‌ನ Most Valuable Player ಮತ್ತು Best Emerging Player ಆಗಿ ಹೊರಹೊಮ್ಮಿದ್ದರು. ಐಪಿಎಲ್‌ನಲ್ಲಿ ಅತಿ ಸಿಕ್ಸ್ ದಾಖಲಿಸುವ ಮೂಲಕ ಕ್ರಿಸ್ ಗೇಲ್ ದಾಖಲೆಯನ್ನು ಅಳಿಸಿ ಹಾಕಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.