10. ಕೋಲ್ಕತಾ ನೈಟ್ ರೈಡರ್ಸ್: 7.05 ಕೋಟಿ ರುಪಾಯಿ
ಎರಡು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು 16 ಆಟಗಾರರನ್ನು ರಿಲೀಸ್ ಮಾಡಿದ್ದು, ಮೂವರನ್ನು ಟ್ರೇಡ್ ಮಾಡಿದೆ. ಇದೀಗ ಕೆಕೆಆರ್ ಬಳಿ ಕೇವಲ 7.05 ಕೋಟಿ ರುಪಾಯಿ ಬಾಕಿ ಉಳಿದಿದ್ದು, ಗರಿಷ್ಠ 3 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
09. ರಾಯಲ್ ಚಾಲೆಂಜರ್ಸ್ ಬೆಂಗಳೂರು: 8.75 ಕೋಟಿ ರುಪಾಯಿ
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಬಹತೇಕರನ್ನು ಉಳಿಸಿಕೊಂಡು 5 ಆಟಗಾರರನ್ನು ರಿಲೀಸ್ ಮಾಡಿದೆ. ಸದ್ಯ ಆರ್‌ಸಿಬಿ ಫ್ರಾಂಚೈಸಿ ಬಳಿಕ 8.75 ಕೋಟಿ ರುಪಾಯಿ ಹಣ ಉಳಿದಿದ್ದು, ಗರಿಷ್ಠ ಎರಡು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
08. ರಾಜಸ್ಥಾನ ರಾಯಲ್ಸ್: 13.20 ಕೋಟಿ ರುಪಾಯಿ
ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ನೀಶಮ್, ಡೇರಲ್ ಮಿಚೆಲ್, ಕರುಣ್ ನಾಯರ್ ಸೇರಿದಂತೆ 9 ಆಟಗಾರರನ್ನು ರಿಲೀಸ್ ಮಾಡಿದ್ದು, ಮಿನಿ ಹರಾಜಿಗೂ ಮುನ್ನ 13.20 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಗರಿಷ್ಠ 4 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
07. ಗುಜರಾತ್ ಟೈಟಾನ್ಸ್: 19.25 ಕೋಟಿ ರುಪಾಯಿ
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 6 ಆಟಗಾರರನ್ನು ರಿಲೀಸ್ ಮಾಡಿದ್ದು, ತನ್ನ ಪರ್ಸ್‌ನಲ್ಲಿ 19.25 ಕೋಟಿ ರುಪಾಯಿ ಉಳಿಸಿಕೊಂಡಿದೆ. ಸದ್ಯ ಟೈಟಾನ್ಸ್ ಗರಿಷ್ಠ 3 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
06. ಡೆಲ್ಲಿ ಕ್ಯಾಪಿಟಲ್ಸ್: 19.45 ಕೋಟಿ ರುಪಾಯಿ
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 5 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದ್ದು, 19.45 ಕೋಟಿ ರುಪಾಯಿಗಳನ್ನು ಹರಾಜಿಗೆ ಉಳಿಸಿಕೊಂಡಿದೆ. ಡೆಲ್ಲಿ ತಂಡವು ಗರಿಷ್ಠ ಎರಡು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
05. ಚೆನ್ನೈ ಸೂಪರ್ ಕಿಂಗ್ಸ್: 20.45 ಕೋಟಿ ರುಪಾಯಿ
ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್ ಸೇರಿದಂತೆ 8 ಆಟಗಾರರನ್ನು ರಿಲೀಸ್ ಮಾಡಿದ್ದು, ಮಿನಿ ಹರಾಜಿಗೆ 20.45 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಗರಿಷ್ಠ ಎರಡು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
04. ಮುಂಬೈ ಇಂಡಿಯನ್ಸ್: 20.55 ಕೋಟಿ ರುಪಾಯಿ
ಐಪಿಎಲ್‌ನ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ತನ್ನ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಪೊಲ್ಲಾರ್ಡ್ ಸೇರಿದಂತೆ 13 ಆಟಗಾರರನ್ನು ರಿಲೀಸ್ ಮಾಡಿದ್ದು, 20.55 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. ಮುಂಬೈ ತಂಡವು ಗರಿಷ್ಠ ಮೂವರು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
03. ಲಖನೌ ಸೂಪರ್ ಜೈಂಟ್ಸ್: 23.35 ಕೋಟಿ ರುಪಾಯಿ
ಲಖನೌ ತಂಡವು ಪಾಂಡೆ, ಹೋಲ್ಡರ್, ಎವಿನ್ ಲೆವಿಸ್ ಸೇರಿದಂತೆ 7 ಆಟಗಾರರನ್ನು ರಿಲೀಸ್ ಮಾಡಿದ್ದು, ತನ್ನ ಖಾತೆಯಲ್ಲಿ 23.35 ಕೋಟಿ ರುಪಾಯಿ ಉಳಿಸಿಕೊಂಡಿದೆ. ಲಖನೌ ಫ್ರಾಂಚೈಸಿಯು ಗರಿಷ್ಠ 4 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
02. ಪಂಜಾಬ್ ಕಿಂಗ್ಸ್: 32.20 ಕೋಟಿ ರುಪಾಯಿ
ಚೊಚ್ಚಲ ಟ್ರೋಫಿ ಕನವರಿಕೆಯಲ್ಲಿರುವ ಪಂಜಾಬ್ ತಂಡವು ನಾಯಕ ಮಯಾಂಕ್ ಅಗರ್‌ವಾಲ್ ಸೇರಿದಂತೆ 9 ಆಟಗಾರರನ್ನು ರಿಲೀಸ್ ಮಾಡಿದ್ದು, ಮಿನಿ ಹರಾಜಿಗೆ 32.2 ಕೋಟಿ ರುಪಾಯಿ ಉಳಿಸಿಕೊಂಡಿದೆ. ಇನ್ನು ಸಿಎಸ್‌ಕೆ ಫ್ರಾಂಚೈಸಿಯು ಮಿನಿ ಹರಾಜಿಗೆ ಗರಿಷ್ಠ ಮೂವರು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
01. ಸನ್‌ರೈಸರ್ಸ್ ಹೈದರಾಬಾದ್: 42.25 ಕೋಟಿ ರುಪಾಯಿ
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಸನ್‌ರೈಸರ್ಸ್ ತಂಡವು ಮೇಜರ್ ಸರ್ಜರಿಗೆ ಮುಂದಾಗಿದ್ದು ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ 12 ಆಟಗಾರರನ್ನು ರಿಲೀಸ್ ಮಾಡಿದ್ದು, ಮಿನಿ ಹರಾಜಿಗೆ ಗರಿಷ್ಠ(42.25 ಕೋಟಿ ರುಪಾಯಿ) ಹಣ ಉಳಿಸಿಕೊಂಡಿದೆ. ಸನ್‌ರೈಸರ್ಸ್ ಗರಿಷ್ಠ ನಾಲ್ವರು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.