ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ (Team India) ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಹಾಗೂ ನ್ಯೂಜಿಲೆಂಡ್‌ನ ಸ್ಪಿನ್ನರ್ ಅಜಾಜ್ ಪಟೇಲ್ (Ajaz Patel) ಅಪರೂಪದ ದಾಖಲೆ ಬರೆದಿದ್ದಾರೆ. ಅನುಭವಿ ಆಫ್‌ಸ್ಪಿನ್ನರ್ ಅಶ್ವಿನ್ 2021ರ ಕ್ಯಾಲೆಂಡರ್ ವರ್ಷದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಅಷ್ಟಕ್ಕೂ ಅಶ್ವಿನ್-ಅಜಾಜ್ ಪಟೇಲ್ ನಿರ್ಮಿಸಿದ ದಾಖಲೆಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ 540 ರನ್‌ಗಳ ಕಠಿಣ ಗುರಿ ಪಡೆದಿರುವ ನ್ಯೂಜಿಲೆಂಡ್ ತಂಡವು ಸೋಲಿನತ್ತ ಮುಖ ಮಾಡಿದ್ದು, ಮೂರನೇ ದಿನದಾಟದಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು ಕೇವಲ 140 ರನ್ ಬಾರಿಸಿದೆ.
210
ಇನ್ನು ನ್ಯೂಜಿಲೆಂಡ್ ತಂಡವು ಗೆಲುವು ದಾಖಲಿಸಬೇಕಿದ್ದರೇ ಇನ್ನು ಎರಡು ದಿನದಲ್ಲಿ 400 ರನ್ ಗಳಿಸಬೇಕಿದೆ. ವಿರಾಟ್ ಕೊಹ್ಲಿ ಪಡೆ ಈ ಟೆಸ್ಟ್ ಪಂದ್ಯ ಹಾಗೂ ಸರಣಿ ಗೆಲ್ಲಬೇಕಿದ್ದರೆ ಇನ್ನೈದು ವಿಕೆಟ್ ಪಡೆಯಬೇಕಿದೆಯಷ್ಟೇ.
310
ಇನ್ನು ನ್ಯೂಜಿಲೆಂಡ್‌ನ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಬಳಿಸುತ್ತಿದ್ದಂತೆಯೇ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2021ರ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ಬೌಲರ್ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ.
410
ಸದ್ಯ ರವಿಚಂದ್ರನ್ ಅಶ್ವಿನ್ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸಿದ್ದು, ಒಟ್ಟಾರೆ ಕ್ಯಾಲೆಂಡರ್ ವರ್ಷದಲ್ಲಿ 51 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಬಾರಿ 50+ ವಿಕೆಟ್ ಕಬಳಿಸಿದ ಭಾರತದ ಬೌಲರ್ ಎನ್ನುವ ಕೀರ್ತಿಗೆ ಅಶ್ವಿನ್ ಪಾತ್ರರಾಗಿದ್ದಾರೆ.
510
ರವಿಚಂದ್ರನ್ ಅಶ್ವಿನ್ 2015, 2016, 2017 ಹಾಗೂ 2021ರಲ್ಲಿ 50+ ವಿಕೆಟ್ ಕಬಳಿಸುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ 4 ಬಾರಿ 50+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
610
ಈ ಮೊದಲು ಟೀಂ ಇಂಡಿಯಾ ಸ್ಪಿನ್ ದಿಗ್ಗಜರಾದ ಅನಿಲ್ ಕುಂಬ್ಳೆ(1999, 2004, 2006) ಹಾಗೂ ಹರ್ಭಜನ್ ಸಿಂಗ್ (2001, 2002, 2008) ತಲಾ ಮೂರು ಬಾರಿ ಕ್ಯಾಲೆಂಡರ್ ವರ್ಷದಲ್ಲಿ 50+ ವಿಕೆಟ್ ಕಬಳಿಸಿದ್ದರು. ಈ ದಾಖಲೆಯನ್ನು ಇದೀಗ ಅಶ್ವಿನ್ ಮುರಿದು ಹಾಕಿದ್ದಾರೆ.
710
ಇನ್ನು ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಬಾರಿ 50+ ವಿಕೆಟ್ ಕಬಳಿಸಿದ ದಾಖಲೆ ಆಸ್ಟ್ರೇಲಿಯಾದ ದಿಗ್ಗಜ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೆಸರಿನಲ್ಲಿದೆ. ವಾರ್ನ್ ಒಟ್ಟು 8 ಬಾರಿ 50+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
810
ಇನ್ನು ಭಾರತ ವಿರುದ್ದ ಮೊದಲ ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿ ಅಪರೂಪದ ದಾಖಲೆ ಬರೆದಿದ್ದ ನ್ಯೂಜಿಲೆಂಡ್ ಎಡಗೈ ಆಫ್‌ಸ್ಪಿನ್ನರ್ ಅಜಾಜ್ ಪಟೇಲ್, ಇದೀಗ ಭಾರತ ವಿರುದ್ದ ಪಂದ್ಯವೊಂದರಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ.
910
ಅಜಾಜ್ ಪಟೇಲ್ ಮೊದಲ ಇನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದಿದ್ದರು. ಇನ್ನು ಎರಡನೇ ವಿಕೆಟ್‌ನಲ್ಲಿ 4 ವಿಕೆಟ್ ಕಬಳಿಸಿದ್ದರು. ಒಟ್ಟಾರೆ ಮುಂಬೈ ಟೆಸ್ಟ್ ಪಂದ್ಯದಲ್ಲಿ 225 ರನ್ ನೀಡಿ 14 ವಿಕೆಟ್ ಕಬಳಿಸಿ ಹೊಸ ದಾಖಲೆ ಬರೆದಿದ್ದಾರೆ.
1010
ಈ ಮೊದಲು 1980ರಲ್ಲಿ ಮುಂಬೈನಲ್ಲೇ ನಡೆದ ಟೆಸ್ಟ್ ಪಂದ್ಯದಲ್ಲಿ ಇಯಾನ್ ಬಾಥಮ್ 106 ರನ್ ನೀಡಿ 13 ವಿಕೆಟ್ ಕಬಳಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆ ಅಜಾಜ್ ಪಟೇಲ್ ಪಾಲಾಗಿದೆ