3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸಿಕ್ಕ 3 ಸಕಾರಾತ್ಮಕ ಅಂಶಗಳಿವು..!

Suvarna News   | Asianet News
Published : Mar 29, 2021, 03:45 PM IST

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್‌ಗಳ ಅಂತರದ ಜಯ ಸಾಧಿಸುವ ಮೂಲಕ ಹಾಲಿ ಚಾಂಪಿಯನ್ನರಿಗೆ ಶಾಕ್‌ ನೀಡಿದೆ. ಟೆಸ್ಟ್ ಹಾಗೂ ಟಿ20 ಬಳಿಕ ಇದೀಗ ಏಕದಿನ ಸರಣಿಯೂ ಭಾರತದ ಪಾಲಾಗಿದೆ.  ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯ ಕ್ರಿಕೆಟ್‌ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಸಾಧಿಸುವ ಮೂಲಕ ಏಕದಿನ ಸರಣಿ ಜಯಿಸಿ ಸಂಭ್ರಮಿಸಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸಿಕ್ಕ ಮೂರು ಸಕಾರಾತ್ಮಕ ಅಂಶಗಳಾವುವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
19
3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸಿಕ್ಕ 3 ಸಕಾರಾತ್ಮಕ ಅಂಶಗಳಿವು..!

1. ಏಕದಿನ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಶಿಸ್ತಿನ ದಾಳಿ ನಡೆಸಿದ್ದು:

29

ಗಾಯಗೊಂಡು ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ ಬಳಿಕ ಹಾರ್ದಿಕ್‌ ಪಾಂಡ್ಯ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ಕೇವಲ 4 ಓವರ್‌ ಮಾತ್ರ ಬೌಲಿಂಗ್‌ ಮಾಡಿದ್ದರು. ಆದರೆ ಇಂಗ್ಲೆಂಡ್‌ ವಿರುದ್ದದ ಕೊನೆಯ ಏಕದಿನ ಪಂದ್ಯದಲ್ಲಿ ಪೂರ್ಣ ಪ್ರಮಾಣದ ಬೌಲಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.

39

ಇಂಗ್ಲೆಂಡ್‌ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ 9 ಓವರ್‌ ಬೌಲಿಂಗ್ ಮಾಡಿ 48 ರನ್‌ ನೀಡಿದರು. ಪಾಂಡ್ಯ ಬೌಲಿಂಗ್‌ನಲ್ಲಿ ವಿಕೆಟ್‌ ಕಬಳಿಸದಿದ್ದರೂ, ಡೆತ್‌ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ನಡೆಸಿದ್ದು, ತಂಡಕ್ಕೆ ಸಿಕ್ಕ ಪ್ರಮುಖ ಪಾಸಿಟಿವ್ ಅಂಶ. 

49

2. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್‌ ಮಾಡಿದ ಭುವಿ

59

ವರ್ಷಗಳ ಕಾಲ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ವೇಗಿ ಭುವನೇಶ್ವರ್ ಕುಮಾರ್‌ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್‌ ಮಾಡಿದ್ದಾರೆ. ಶಮಿ ಹಾಗೂ ಬುಮ್ರಾ ಅನುಪಸ್ಥಿತಿಯಲ್ಲಿ ಭುವಿ ಯಶಸ್ವಿಯಾಗಿ ಟೀಂ ಇಂಡಿಯಾ ವೇಗದ ದಾಳಿಯನ್ನು ಮುನ್ನಡೆಸಿದ್ದಾರೆ.
 
69

ನಿರ್ಣಾಯಕ ಪಂದ್ಯದಲ್ಲಿ ಪವರ್‌ ಪ್ಲೇನಲ್ಲೇ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಾದ ಜೇಸನ್‌ ರಾಯ್ ಹಾಗೂ ಜಾನಿ ಬೇರ್‌ಸ್ಟೋವ್‌ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾಗೆ ಆರಂಭಿಕ ಯಶಸ್ಸು ದಕ್ಕಿಸಿಕೊಡುವ ಮೂಲಕ ತಾವೆಷ್ಟು ಉಪಯುಕ್ತ ವೇಗಿ ಎನ್ನುವುದನ್ನು ಭುವಿ ಸಾಬೀತು ಮಾಡಿದ್ದಾರೆ.
 
79

3. ಅಗ್ರಕ್ರಮಾಂಕ ವೈಫಲ್ಯ ಅನುಭವಿಸಿದರೂ 300+ ರನ್ ಚಚ್ಚಿದ ಟೀಂ ಇಂಡಿಯಾ

89

ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌. ರಾಹುಲ್‌, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪೈಕಿ ಒಬ್ಬರು ಕನಿಷ್ಟ ಅರ್ಧಶತಕ ಬಾರಿಸದಿದ್ದರೂ ಟೀಂ ಇಂಡಿಯಾ 300+ ರನ್‌ ಕಲೆಹಾಕಲು ಯಶಸ್ವಿಯಾಗಿದ್ದು, ತಂಡದ ಮತ್ತೊಂದು ಪಾಸಿಟಿವ್ ಅಂಶ.

99

ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್‌, ಹಾರ್ದಿಕ್‌ ಪಾಂಡ್ಯ ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಸಹ ಉತ್ತಮವಾಗಿ ಬ್ಯಾಟ್‌ ಬೀಸುವ ಮೂಲಕ ಅಗ್ರಕ್ರಮಾಂಕ ಬ್ಯಾಟಿಂಗ್‌ನಲ್ಲಿ ಕೈಕೊಟ್ಟರೂ ಮಧ್ಯಮ ಕ್ರಮಾಂಕ ಸದೃಢವಾಗಿದೆ ಎನ್ನುವುದನ್ನು ಏಕದಿನ ಸರಣಿಯ ಕೊನೆಯ ಪಂದ್ಯ ಸಾಬೀತು ಮಾಡಿದೆ. 

click me!

Recommended Stories