ಕೊನೆಗೂ ತನ್ನ ಇನಿಯನ ಮೇಲಿರುವ ಪ್ರೀತಿಯ ಗುಟ್ಟು ಬಿಚ್ಚಿಟ್ಟ ಸಾರಾ..! ತೆಂಡುಲ್ಕರ್ ಪುತ್ರಿಯ ಟ್ವೀಟ್ ವೈರಲ್

First Published | Sep 23, 2023, 1:52 PM IST

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್, ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಮುಖ್ಯವಾಗಿ ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಇದೀಗ ಸಾರಾ ತೆಂಡುಲ್ಕರ್ ಮಾಡಿದ ಒಂದು ಟ್ವೀಟ್‌ ಅವರ ಇನಿಯನ ಗುಟ್ಟನ್ನು ಬಿಚ್ಚಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

ಮುಂಬೈಕರ್ ಪುತ್ರಿ ಸಾರಾ ತೆಂಡುಲ್ಕರ್ ಅವರ ಹೆಸರು ಆಗಾಗ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಜತೆ ಥಳುಕು ಹಾಕಿಕೊಳ್ಳುತ್ತಲೇ ಇರುತ್ತದೆ. ಇದೀಗ ಈ ಕುರಿತಂತೆ ಮತ್ತೊಂದು ಸೀಕ್ರೇಟ್ ಬಿಚ್ಚಿಟ್ಟಿದ್ದಾಳೆ ಸಾರಾ ತೆಂಡುಲ್ಕರ್.
 

ಶುಭ್‌ಮನ್ ಗಿಲ್ ಹಾಗೂ ಸಾರಾ ತೆಂಡುಲ್ಕರ್ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವಿಚಾರ ಸದ್ಯ ಗುಟ್ಟಾಗಿ ಏನೂ ಉಳಿದಿಲ್ಲ. ಹೀಗಿದ್ದೂ ತಾವಿಬ್ಬರು ಡೇಟಿಂಗ್ ನಡೆಸುತ್ತಿರುವುದರ ಬಗ್ಗೆ ಇಬ್ಬರೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
 

Tap to resize

ಸದ್ಯ ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, ಇದೀಗ ತವರಿನಲ್ಲಿ ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ.
 

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮೊಹಾಲಿಯ ಐಎಸ್ ಬಿಂದ್ರಾ ಮೈದಾನ ಆತಿಥ್ಯವನ್ನು ವಹಿಸಿತ್ತು. ಮೊಹಾಲಿ ಶುಭ್‌ಮನ್ ಗಿಲ್ ಅವರ ತವರು ಮೈದಾನವಾಗಿದೆ.
 

ತವರಿನ ಮೈದಾನದಲ್ಲಿ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ ಶುಭ್‌ಮನ್ ಗಿಲ್, ಆಸ್ಟ್ರೇಲಿಯಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಗಿಲ್ 63 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 74 ರನ್ ಸಿಡಿಸಿ, ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಶುಭ್‌ಮನ್ ಗಿಲ್‌ ಅದ್ಭುತ ಬ್ಯಾಟಿಂಗ್‌ ನಡೆಸಿದ ಬೆನ್ನಲ್ಲೇ ಟ್ವೀಟ್ ಮಾಡಿದ ಸಾರಾ ತೆಂಡುಲ್ಕರ್, ತುಂಬಾ ಚೆನ್ನಾಗಿ ಆಡಿದಿರಾ ಶುಭ್‌ಮನ್ ಗಿಲ್ &  ಟೀಂ ಇಂಡಿಯಾ ಎಂದು ಟ್ವೀಟ್ ಮಾಡುವ ಮೂಲಕ ತನ್ನ ಒಲವು ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಪರ ಗಿಲ್ ಮಾತ್ರವಲ್ಲದೇ ಋತುರಾಜ್ ಗಾಯಕ್ವಾಡ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಕೂಡಾ ಅರ್ಧಶತಕ ಸಿಡಿಸಿದ್ದರು. ಹೀಗಿದ್ದೂ, ಕೇವಲ ಗಿಲ್ ಅವರ ಹೆಸರನ್ನು ಮಾತ್ರ ಸಾರಾ ತೆಂಡುಲ್ಕರ್ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದು, ಗಾಳಿ ಸುದ್ದಿ ಬಲ ಬರುವಂತೆ ಮಾಡಿದೆ.
 

Latest Videos

click me!