5. ಎಬಿ ಡಿವಿಲಿಯರ್ಸ್:
ಮಿಸ್ಟರ್ 360 ಖ್ಯಾತಿಯ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 2015ರ ಏಕದಿನ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಎದುರು ಕೇವಲ 52 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದ್ದರು. ಇದು ಏಕದಿನ ವಿಶ್ವಕಪ್‌ನಲ್ಲಿ ದಾಖಲಾದ 5ನೇ ಅತಿವೇಗದ ಶತಕ ಎನಿಸಿಕೊಂಡಿದೆ.
4. ಗ್ಲೆನ್ ಮ್ಯಾಕ್ಸ್‌ವೆಲ್:
ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೇ ಶ್ರೀಲಂಕಾ ಎದುರು ಕೇವಲ 51 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ, ನಾಲ್ಕನೇ ಅತಿವೇಗದ ವಿಶ್ವಕಪ್ ಶತಕ ಸಾಧಕ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.
3. ಕೆವಿನ್ ಒ'ಬ್ರಿಯಾನ್:
ಐರ್ಲೆಂಡ್ ಸ್ಪೋಟಕ ಬ್ಯಾಟರ್ ಕೆವಿನ್ ಒ'ಬ್ರಿಯಾನ್ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಬೆಂಗಳೂರಿನಲ್ಲಿ ನಡೆದ ಆ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಐರ್ಲೆಂಡ್ ಆಘಾತಕಾರಿ ಸೋಲುಣಿಸಿತ್ತು.
2. ಏಯ್ಡನ್ ಮಾರ್ಕ್‌ರಮ್:
12 ವರ್ಷಗಳ ಕಾಲ ಕೆವಿನ್ ಒ'ಬ್ರಿಯಾನ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ದಕ್ಷಿಣ ಆಫ್ರಿಕಾದ ಏಯ್ಡನ್ ಮಾರ್ಕ್‌ರಮ್ ಯಶಸ್ವಿಯಾಗಿದ್ದರು. 2023ರ ಏಕದಿನ ವಿಶ್ವಕಪ್‌ನಲ್ಲಿ ಮಾರ್ಕ್‌ರಮ್, ಶ್ರೀಲಂಕಾ ಎದುರು ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು.
1. ಗ್ಲೆನ್ ಮ್ಯಾಕ್ಸ್‌ವೆಲ್:
ಮಾರ್ಕ್‌ರಮ್ ನಿರ್ಮಿಸಿದ ಅಪರೂಪದ ದಾಖಲೆ ಹೆಚ್ಚು ಹೊತ್ತು ಉಳಿಯಲು ಗ್ಲೆನ್ ಮ್ಯಾಕ್ಸ್‌ವೆಲ್ ಅವಕಾಶ ನೀಡಿಲ್ಲ. 2023ರ ಏಕದಿನ ವಿಶ್ವಕಪ್‌ನಲ್ಲಿ ನೆದರ್‌ಲೆಂಡ್ಸ್ ಎದುರು ಮ್ಯಾಕ್ಸಿ ಶತಕ ಸಿಡಿಸಲು ಕೇವಲ 40 ಎಸೆತಗಳನ್ನು ಬಳಸಿಕೊಂಡರು. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ದಾಖಲೆ ಇದೀಗ ಮ್ಯಾಕ್ಸಿ ಪಾಲಾಗಿದೆ.