ಗುಟ್ಟು ಗುಟ್ಟಾಗಿ ಬಾಯ್‌ಫ್ರೆಂಡ್ ಶುಭ್‌ಮನ್‌ ಗಿಲ್‌ ಮೀಟಾದ್ರಾ ಸಾರಾ ತೆಂಡೂಲ್ಕರ್? ವಿಡಿಯೋ ವೈರಲ್‌

First Published | Nov 14, 2023, 3:17 PM IST

ಮುಂಬೈನಲ್ಲಿರೋ ಶುಭ್ಮನ್‌ ಗಿಲ್‌ರನ್ನು ಸಾರಾ ತೆಂಡೂಲ್ಕರ್‌ ಭೇಟಿಯಾಗಿದ್ದಾರೆ ಎಂದು ಪ್ಯಾಪರಾಜಿಯೊಬ್ಬರ ವಿಡಿಯೋ ವೈರಲ್‌ ಆಗ್ತಿದೆ. ಈ ಬಗ್ಗೆ ಇಲ್ಲಿದೆ ವಿವರ..

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ನಡೆಯುತ್ತಿರುವ ಮಧ್ಯೆಯೇ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಶುಭ್‌ಮನ್‌ ಗಿಲ್‌ ನಡುವಿನ ಡೇಟಿಂಗ್ ವದಂತಿಗೆ ಮತ್ತಷ್ಟು ಬಣ್ಣ ಬಂದಂತಿದೆ. ಅಭಿಮಾನಿಗಳ ನಡುವೆ ಈ ವಿಚಾರ ಆಗಾಗ ಹರಿದಾಡುತ್ತಲೇ ಇರುತ್ತದೆ. 

ಈ ಜೋಡಿಯು ಬಹಳ ಸಮಯದಿಂದ ಡೇಟಿಂಗ್ ಮಾಡ್ತಿದ್ದಾರೆ ಎಂದು ಹೇಳಲಾಗ್ತಿದ್ರೂ, ಸಾರಾ ಮತ್ತು ಶುಭ್‌ಮನ್‌ ಅದನ್ನು ಎಂದಿಗೂ ಒಪ್ಪಿಕೊಂಡಿಲ್ಲ ಅಥವಾ ನಿರಾಕರಿಸಿಯೂ ಇಲ್ಲ.

Tap to resize

ಇದಲ್ಲದೆ, ಶುಭ್‌ಮನ್‌ ಗಿಲ್‌ ಮ್ಯಾಚ್‌ ಆಡಿದ ಕ್ರೀಡಾಂಗಣದಲ್ಲಿ ಸಾರಾ ತೆಂಡೂಲ್ಕರ್‌ ಉಪಸ್ಥಿತಿ  ಮತ್ತು ಅಂತಹ ಇತರ ನಿದರ್ಶನಗಳು ಇಬ್ಬರೂ ತಮ್ಮ ಏರಿಳಿತದ ಸಮಯದಲ್ಲಿ ಜತೆಯಾಗಿದ್ದಾರೆ ಎಂದು ಹಲವರು ಹೇಳಿಕೊಳ್ಳುತ್ತಾರೆ. 

ಇದೀಗ ಮತ್ತೊಮ್ಮೆ, ಸಾರಾ ಮತ್ತು ಶುಭ್‌ಮನ್‌ ಮುಂಬೈನಲ್ಲಿ ಪರಸ್ಪರ ರಹಸ್ಯವಾಗಿ ಭೇಟಿಯಾದರು ಎಂದು ಪ್ಯಾಪರಾಜಿಯ ವಿಡಿಯೋ ಒಂದು ಹೇಳಿಕೊಂಡಿದೆ. ಈ ವಿಡಿಯೋ ವೈರಲ್‌ ಆಗಿದ್ದು, ಇದಕ್ಕೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ.  

ಮುಂಬೈನಲ್ಲಿ ಗುಟ್ಟಾಗಿ ಭೇಟಿಯಾದ್ರಾ ಸಾರಾ ತೆಂಡೂಲ್ಕರ್ - ಶುಭ್‌ಮನ್‌ ಗಿಲ್‌?
ನಾಳೆ ಭಾರತ - ನ್ಯೂಜಿಲೆಂಡ್‌ ಸೆಮಿ ಫೈನಲ್‌ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆ ಮುಂಬೈನಲ್ಲಿರೋ ಶುಭ್ಮನ್‌ ಗಿಲ್‌ರನ್ನು ಸಾರಾ ತೆಂಡೂಲ್ಕರ್‌ ಭೇಟಿಯಾಗಿದ್ದಾರೆ ಎಂದು ಪ್ಯಾಪರಾಜಿಯ ವಿಡಿಯೋ ವೈರಲ್‌ ಆಗ್ತಿದೆ. ಕಾರಿನೊಳಗೆ ಸಾರಾ ತೆಂಡೂಲ್ಕರ್, ಯಾವುದೋ ಸ್ಥಳದಿಂದ ನಿರ್ಗಮಿಸುವ ವಿಡಿಯೋ ಹಂಚಿಕೊಂಡಿದ್ದಾರೆ.

ಸಾರಾ - ಶುಭ್‌ಮನ್‌ ಗಿಲ್ ರನ್ನು ಮುಂಬೈನಲ್ಲಿ ಅತ್ಯಂತ ರಹಸ್ಯವಾಗಿ ಭೇಟಿಯಾಗಲು ಹೋಗಿದ್ದರು ಎಂದು ಪ್ಯಾಪರಾಜಿ ಹೇಳಿಕೊಂಡಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಶುಭ್ಮನ್‌ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆ ನೆಟ್ಟಿಗರು ಸಾರಾ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ಶೇರ್ ಆದ ತಕ್ಷಣ ನೆಟ್ಟಿಗರು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಒಬ್ಬ ಬಳಕೆದಾರ, ಇಲ್ಲಿ ಶುಭ್‌ಮನ್‌ ಗಿಲ್‌ ಎಲ್ಲಿಂದ ಬಂದರು, ಸ್ವಲ್ಪ ವಿವರಿಸಿ ಹೇಳಿ ಎಂದು ಬರೆದರೆ, ಮತ್ತೊಬ್ಬ ನೆಟ್ಟಿಗ ಶೀರ್ಷಿಕೆಯನ್ನು ಯೋಚಿಸಿ ಪೋಸ್ಟ್‌ ಮಾಡಿ ಪಾಪರಾಜಿ ಎಂದು ಹೇಳಿದ್ದಾರೆ. 

ಇತ್ತೀಚೆಗೆ ಸಾರಾ ತೆಂಡೂಲ್ಕರ್ ಶುಭ್ಮನ್‌ ಗಿಲ್‌ ರನ್ನು ತಬ್ಬಿಕೊಂಡಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದು ಅವರ ಡೇಟಿಂಗ್ ಬಗ್ಗೆ ನಡೆಯುತ್ತಿರುವ ವದಂತಿಗಳಿಗೆ ತುಪ್ಪ ಸುರಿದಿತ್ತು.  ಆದರೆ, ಇದು ಸಾರಾ ಹಾಗೂ ಅರ್ಜುನ್‌ ತೆಂಡೂಲ್ಕರ್‌ ಚಿತ್ರವನ್ನು ಈ ರೀತಿ ಎಡಿಟ್‌ ಮಾಡಲಾಗಿತ್ತು. 
 

Latest Videos

click me!