T20 World Cup: ನ್ಯೂಜಿಲೆಂಡ್ ಎದುರಿನ ಫೈನಲ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ಸಂಭಾವ್ಯ ತಂಡ ಪ್ರಕಟ

Suvarna News   | Asianet News
Published : Nov 14, 2021, 05:24 PM IST

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿಂದು (Dubai International Stadium) ಆಸ್ಟ್ರೇಲಿಯಾ ತಂಡವು (New Zealand Cricket Team) ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ರೋಚಕ ಜಯ ಸಾಧಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡವು, ಕಿವೀಸ್‌ ಎದುರಿನ ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ಕಿವೀಸ್ ಎದುರಿನ ಫೈನಲ್‌ ಪಂದ್ಯಕ್ಕೆ ಆಸ್ಟ್ರೇಲಿಯಾದ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೀಗಿದೆ ನೋಡಿ  

PREV
111
T20 World Cup: ನ್ಯೂಜಿಲೆಂಡ್ ಎದುರಿನ ಫೈನಲ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ಸಂಭಾವ್ಯ ತಂಡ ಪ್ರಕಟ

1. ಆ್ಯರೋನ್ ಫಿಂಚ್‌: ಆಸ್ಟ್ರೇಲಿಯಾ ತಂಡದ ನಾಯಕ ಹಾಗೂ ತಾರಾ ಆರಂಭಿಕ ಬ್ಯಾಟರ್‌. ಸೆಮಿಫೈನಲ್‌ನಲ್ಲಿ ಶೂನ್ಯ ಸುತ್ತಿರುವ ಫಿಂಚ್‌, ಕಿವೀಸ್ ಎದುರು ಅಬ್ಬರಿಸಲು ಎದುರು ನೋಡುತ್ತಿದ್ದಾರೆ. ನಾಯಕನಾಗಿ ಹಾಗೂ ಬ್ಯಾಟರ್‌ ಆಗಿ ಫಿಂಚ್ ಪಾಲಿಗಿದು ಮಹತ್ವದ ಪಂದ್ಯ

211

2. ಡೇವಿಡ್ ವಾರ್ನರ್: ಸ್ಪೋಟಕ ಎಡಗೈ ಆರಂಭಿಕ ಬ್ಯಾಟರ್‌. ಪಾಕ್ ಎದುರಿನ ಸೆಮೀಸ್‌ನಲ್ಲಿ 49 ರನ್ ಸಿಡಿಸಿದ್ದ ವಾರ್ನರ್‌ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇದೀಗ ಫೈನಲ್‌ನಲ್ಲೂ ಮಿಂಚಲು ವಾರ್ನರ್ ಸಜ್ಜಾಗಿದ್ದಾರೆ.

311

3. ಮಿಚೆಲ್ ಮಾರ್ಶ್‌: ಆಸೀಸ್‌ ಪರ ಮೂರನೇ ಕ್ರಮಾಂಕದಲ್ಲಿ ಮಿಚೆಲ್‌ ಮಾರ್ಶ್ ಉತ್ತಮವಾಗಿಯೇ ಬ್ಯಾಟ್‌ ಬೀಸುತ್ತಿದ್ದಾರೆ. ಪವರ್‌ ಪ್ಲೇನಲ್ಲಿ ಆರಂಭಿಕರಂತೆ ಸ್ಪೋಟಕ ಬ್ಯಾಟಿಂಗ್ ನಡೆಸುವ ಕ್ಷಮತೆ ಮಾರ್ಶ್‌ಗಿದೆ

411
Steve Smith

4.ಸ್ಟೀವ್‌ ಸ್ಮಿತ್: ಅನುಭವಿ ಬ್ಯಾಟರ್‌ ಸ್ಟೀವ್ ಸ್ಮಿತ್ ಕಳೆದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ ಮಹತ್ವದ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವ ಕಲೆ ಸ್ಮಿತ್‌ಗೆ ಚೆನ್ನಾಗಿ ಕರಗತವಾಗಿದ್ದು, ಕಿವೀಸ್ ಬೌಲರ್‌ಗಳು ಎಚ್ಚರದಿಂದಿರಬೇಕು.

511

5. ಗ್ಲೆನ್‌ ಮ್ಯಾಕ್ಸ್‌ವೆಲ್‌: ಐಪಿಎಲ್‌ನಲ್ಲಿ ಆರ್‌ಸಿಬಿ ಪರ ರನ್‌ ಮಳೆ ಹರಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, ಟಿ20 ವಿಶ್ವಕಪ್‌ನಲ್ಲಿ ಇದುವರೆಗೂ ಅಬ್ಬರಿಸಿಲ್ಲ. ಆದರೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಯಾವುದೇ ಕ್ಷಣದಲ್ಲಾದರೂ ಆಸರೆಯಾಗುವ ಶಕ್ತಿ ಮ್ಯಾಕ್ಸ್‌ವೆಲ್‌ಗಿದೆ.

611

6. ಮಾರ್ಕಸ್‌ ಸ್ಟೋಯ್ನಿಸ್: ಅನುಭವಿ ಆಲ್ರೌಂಡರ್‌ ಸ್ಟೋಯ್ನಿಸ್ ಸೆಮೀಸ್‌ನಲ್ಲಿ ಪಾಕ್‌ ವಿರುದ್ದ ಉಪಯುಕ್ತ ಬ್ಯಾಟಿಂಗ್ ನಡೆಸುವ ಮೂಲಕ ಆಸೀಸ್ ತಂಡ ಫೈನಲ್‌ಗೇರುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಅಂತಹದ್ದೇ ಇನಿಂಗ್ಸ್‌ ಆಸೀಸ್ ಮತ್ತೊಮ್ಮೆ ನಿರೀಕ್ಷಿಸುತ್ತಿದೆ.

711

7. ಮ್ಯಾಥ್ಯೂ ವೇಡ್: ಪಾಕಿಸ್ತಾನ ಎದುರಿನ ಸೆಮಿಫೈನಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದ್ದ ಆಸೀಸ್‌ ವಿಕೆಟ್ ಕೀಪರ್‌ ಬ್ಯಾಟರ್‌, ಮತ್ತೊಮ್ಮೆ ಫಿನಿಶರ್ ಪಾತ್ರ ನಿಭಾಯಿಸಲು ಎದುರು ನೋಡುತ್ತಿದ್ದಾರೆ.

811

8. ಪ್ಯಾಟ್‌ ಕಮಿನ್ಸ್‌: ಆಸೀಸ್‌ ಅನುಭವಿ ವೇಗಿ ಪ್ಯಾಟ್‌ ಕಮಿನ್ಸ್‌ ಪವರ್‌ ಪ್ಲೇ ಹಾಗೂ ಡೆತ್ ಓವರ್‌ನಲ್ಲಿ ಪರಿಣಾಮಕಾರಿಯಾದ ದಾಳಿ ಸಂಘಟಿಸುತ್ತಿದ್ದು, ಕಿವೀಸ್‌ ಬ್ಯಾಟರ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಲು ಎದುರು ನೋಡುತ್ತಿದ್ದಾರೆ.

911

9. ಮಿಚೆಲ್ ಸ್ಟಾರ್ಕ್‌: ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ತಮ್ಮ ಕರಾರುವಕ್ಕಾದ ಯಾರ್ಕರ್ ಮೂಲಕ ಕಿವೀಸ್‌ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಸ್ಟಾರ್ಕ್‌ ಬಗ್ಗೆ ಕಿವೀಸ್ ಬ್ಯಾಟರ್‌ಗಳು ಎಚ್ಚರದಿಂದಿರಬೇಕಿದೆ.

1011

10. ಜೋಶ್ ಹೇಜಲ್‌ವುಡ್‌: ಆಸೀಸ್‌ ತ್ರಿವಳಿ ವೇಗಿಗಳ ಪೈಕಿ ಹೇಜಲ್‌ವುಡ್‌ ಇನಿಂಗ್ಸ್‌ ಮಧ್ಯದಲ್ಲಿ ಉಪಯುಕ್ತ ವಿಕೆಟ್ ಕಬಳಿಸುವ ಮೂಲಕ ಆಸೀಸ್‌ಗೆ ಮುನ್ನಡೆ ಒದಗಿಸಿಕೊಡುತ್ತಿದ್ದು, ಫೈನಲ್‌ನಲ್ಲಿ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ.

1111

11. ಆ್ಯಡಂ ಜಂಪಾ: ಆಸ್ಟ್ರೇಲಿಯಾದ ಅನುಭವಿ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ ಈಗಾಗಲೇ ಆಸೀಸ್‌ ಪರ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಅಗಿ ಹೊರಹೊಮ್ಮಿದ್ದಾರೆ. ಇದೀಗ ಫೈನಲ್‌ನಲ್ಲೂ ಜಾದೂ ಮಾಡಲು ಜಂಪಾ ಎದುರು ನೋಡುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories