T20 World Cup ಶ್ರೇಷ್ಠ ಆಟಗಾರರನ್ನೊಳಗೊಂಡ ಟಿ20 ತಂಡ ಪ್ರಕಟಿಸಿದ ಐಸಿಸಿ, ಇಬ್ಬರು ಭಾರತೀಯರಿಗೆ ಸ್ಥಾನ..!

First Published | Nov 14, 2022, 1:40 PM IST

ದುಬೈ(ನ.14): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಟೂರ್ನಿಗೆ ಅಧಿಕೃತ ಪೂರ್ಣ ವಿರಾಮ ಬಿದ್ದಿದೆ. ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಇದೀಗ ಐಸಿಸಿ, ಈ ವರ್ಷದ ಟಿ20 ವಿಶ್ವಕಪ್ ಟೂರ್ನಿಯ ಶ್ರೇಷ್ಠ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ಇನ್ನು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹನ್ನೆರಡನೇ ಆಟಗಾರನ ರೂಪದಲ್ಲಿ ಸ್ಥಾನ ಪಡೆದಿದ್ದಾರೆ.
 

1. ಅಲೆಕ್ಸ್‌ ಹೇಲ್ಸ್‌: ಇಂಗ್ಲೆಂಡ್ ಆರಂಭಿಕ ಬ್ಯಾಟರ್, ಫೈನಲ್ ಹೊರತುಪಡಿಸಿ ಮಹತ್ವದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿ ಮಿಂಚಿದ್ದರು. ಹೇಲ್ಸ್‌ 6 ಪಂದ್ಯಗಳನ್ನಾಡಿ  42.40 ಬ್ಯಾಟಿಂಗ್ ಸರಾಸರಿಯಲ್ಲಿ 212 ರನ್ ಬಾರಿಸಿ ಮಿಂಚಿದ್ದರು.
 

2. ಜೋಸ್ ಬಟ್ಲರ್: ಟಿ20 ವಿಶ್ವಕಪ್ ಟೂರ್ನಿಯುದ್ದಕ್ಕೂ ಎಲ್ಲಾ ತಂಡದ ಆರಂಭಿಕರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೇ, ಇಂಗ್ಲೆಂಡ್‌ಗೆ ಆ ಸಮಸ್ಯೆ ಕಾಡಲಿಲ್ಲ. ಜೋಸ್ ಬಟ್ಲರ್ ನಾಯಕನಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಮಾತ್ರವಲ್ಲದೇ, ಆರಂಭಿಕನಾಗಿ 45ರ ಬ್ಯಾಟಿಂಗ್ ಸರಾಸರಿಯಲ್ಲಿ 225 ರನ್ ಚಚ್ಚಿದ್ದರು.
 

Tap to resize

3. ವಿರಾಟ್ ಕೊಹ್ಲಿ: ಮೂರನೇ ಕ್ರಮಾಂಕದಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಆಸರೆಯಾಗಿದ್ದರು. ವಿರಾಟ್ 6 ಪಂದ್ಯಗಳಿಂದ 296 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು.
 

4. ಸೂರ್ಯಕುಮಾರ್ ಯಾದವ್: ಆಧುನಿಕ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಕೂಡಾ 4ನೇ ಕ್ರಮಾಂಕದಲ್ಲಿ 6 ಪಂದ್ಯಗಳನ್ನಾಡಿ 59.75ರ ಬ್ಯಾಟಿಂಗ್ ಸರಾಸರಿಯಲ್ಲಿ 239 ರನ್ ಬಾರಿಸಿ ಟೂರ್ನಿಯ ಮೂರನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು.

5. ಗ್ಲೆನ್ ಫಿಲಿಫ್ಸ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದ ಗ್ಲೆನ್ ಫಿಲಿಫ್ಸ್‌ ಒಂದು ಶತಕ ಸಹಿತ 40.20 ಬ್ಯಾಟಿಂಗ್ ಸರಾಸರಿಯಲ್ಲಿ 201 ರನ್ ಬಾರಿಸಿ ತಂಡವು ಸೆಮೀಸ್‌ಗೇರುವಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದರು. 

6. ಸಿಕಂದರ್ ರಾಜಾ: ಜಿಂಬಾಬ್ವೆ ಪರ ಅತ್ಯಂತ ಸ್ಥಿರವಾದ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದ ಸಿಕಂದರ್ ರಾಜಾ ಬ್ಯಾಟಿಂಗ್‌ನಲ್ಲಿ 219 ರನ್ ಹಾಗೂ ಬೌಲಿಂಗ್‌ನಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದರು. 
 

7. ಶಾದಾಬ್ ಖಾನ್: ಪಾಕಿಸ್ತಾನದ ತಾರಾ ಆಲ್ರೌಂಡರ್ ಶಾದಾಬ್ ಖಾನ್, 7 ಪಂದ್ಯಗಳನ್ನಾಡಿ 98 ರನ ಹಾಗೂ ಪ್ರಮುಖ 11 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ಫೈನಲ್‌ಗೇರುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
 

8. ಸ್ಯಾಮ್ ಕರ್ರನ್: ಇಂಗ್ಲೆಂಡ್‌ನ ಪ್ರತಿಭಾನ್ವಿತ ಎಡಗೈ ವೇಗಿ ಸ್ಯಾಮ್ ಕರ್ರನ್ 13 ವಿಕೆಟ್ ಕಬಳಿಸುವ ಮೂಲಕ ಜೋಸ್ ಬಟ್ಲರ್ ಪಡೆ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದರು. ಸ್ಯಾಮ್ ಕರ್ರನ್ ಫೈನಲ್‌ ಪಂದ್ಯದಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್‌ ಕಬಳಿಸಿದ್ದಷ್ಟೇ ಅಲ್ಲದೇ ಸರಣಿ ಶ್ರೇಷ್ಠ ಪ್ರಶಸ್ತಿ ಗೌರವಕ್ಕೂ ಭಾಜನರಾಗಿದ್ದರು. 

9. ಏನ್ರಿಚ್ ನೊಕಿಯ: ದಕ್ಷಿಣ ಆಫ್ರಿಕಾ ಮಾರಕ ವೇಗಿ ನೊಕಿಯ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಾರಕ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದರು. ನೊಕಿಯ ಕೇವಲ 5 ಪಂದ್ಯಗಳನ್ನಾಡಿ 11 ವಿಕೆಟ್ ಕಬಳಿಸಿದ್ದರು.

10. ಮಾರ್ಕ್ ವುಡ್‌: ಇಂಗ್ಲೆಂಡ್‌ ಮಾರಕ ವೇಗಿ ಮಾರ್ಕ್‌ ವುಡ್‌ ಕೂಡಾ ಸೂಪರ್ 12 ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಮಾರ್ಕ್ ವುಡ್ ಕೇವಲ 4 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿ ತಂಡ ಸೆಮೀಸ್‌ಗೇರುವಲ್ಲಿ ಮಹತ್ತರ ಪಾತ್ರವಹಿಸಿದ್ದರು.
 

11. ಶಾಹೀನ್ ಅಫ್ರಿದಿ: ಪಾಕಿಸ್ತಾನದ ಎಡಗೈ ಮಾರಕ ವೇಗಿ ಶಾಹೀನ್ ಅಫ್ರಿದಿ, ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ತಂಡ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶಾಹೀನ್ ಅಫ್ರಿದಿ 7 ಪಂದ್ಯಗಳಿಂದ 11 ಬಲಿ ಪಡೆದಿದ್ದರು.
 

12. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್‌ನಲ್ಲಿ 128 ರನ್ ಬಾರಿಸಿದ್ದ ಪಾಂಡ್ಯ, ಬೌಲಿಂಗ್‌ನಲ್ಲಿ 8 ವಿಕೆಟ್ ಕಬಳಿಸಿದ್ದರು.

Latest Videos

click me!