Latest Videos

ಮದುವೆಗೆ ಮೊದಲೇ ತಂದೆಯಾಗಿದ್ದ ಹಾರ್ದಿಕ್ ಪಾಂಡ್ಯಗೆ ಕೈಕೊಟ್ರಾ ನತಾಶಾ..? ಮುಂಬೈ ನಾಯಕನಿಗೆ ಬಿಗ್ ಶಾಕ್

First Published May 24, 2024, 12:59 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಹೀನಾಯ ಪ್ರದರ್ಶನ ತೋರಿದೆ ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಅವರ ಪತ್ನಿ ನತಾಶಾ ಸ್ಟ್ಯಾಂಕೋವಿಚ್ ಕೈಕೊಟ್ರಾ ಎನ್ನುವ ಆತಂಕ ಶುರುವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪಾಲಿಗೆ 2024ರ ವರ್ಷ ಒಂದಿಲ್ಲೊಂದು ಹೊಡೆತ ಕೊಡುತ್ತಲೇ ಬಂದಿದೆ. ಕಳೆದ ಕೆಲ ತಿಂಗಳಿನಿಂದ ಪಾಂಡ್ಯಗೆ ಕಾಲ ಕಾಲೆಳೆದಂತೆ ಭಾಸವಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕರಾದ ಬಳಿಕ ರೋಹಿತ್ ಶರ್ಮಾ ಹಾಗೂ ತಂಡದ ಆಟಗಾರರ ಜತೆ ಮನಸ್ತಾಪ ಕೂಡಾ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು.

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 14 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 10 ಸೋಲು ಸಹಿತ ಕೇವಲ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು.

ಇದೆಲ್ಲದರ ನಡುವೆ ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ಖಾಸಗಿ ಬದುಕಿನಲ್ಲಿ ಬಿರುಗಾಳಿ ಬೀಸುತ್ತಿದ್ದು, ಪತ್ನಿ ನತಾಶಾ ಸ್ಟ್ಯಾಂಕೋವಿಚ್ ಇದೀಗ ಬೇರೆ ಬೇರೆಯಾಗಲಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

ಮದುವೆಗೆ ಮುನ್ನವೇ ತಂದೆಯಾಗುವ ವಿಚಾರ ಖಚಿತಪಡಿಸಿದ್ದ ಹಾರ್ದಿಕ್ ಪಾಂಡ್ಯ, 2020ರ ಮೇನಲ್ಲಿ ಸರ್ಬಿಯಾ ಮೂಲದ ನಟಿ ನತಾಶಾ ಅವರನ್ನು ಮದುವೆಯಾಗಿದ್ದರು. ಇದಾದ ಬಳಿಕ ಅದೇ ವರ್ಷದ ಜುಲೈನಲ್ಲಿ ಅಗಸ್ತ್ಯ ಎನ್ನುವ ಗಂಡು ಮಗುವನ್ನು ಸ್ವಾಗತಿಸಿದ್ದರು.

ಇದೀಗ ಐಪಿಎಲ್‌ನ ಶಾಕಿಂಗ್‌ನಿಂದ ಹೊರಬರುವ ಮುನ್ನವೇ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್ ಎದುರಾಗಿದೆ. ಐಪಿಎಲ್ ಮುಗಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಹಾರ್ದಿಕ್ ಪಾಂಡ್ಯಗೆ ಸ್ವತಃ ಪತ್ನಿ ನತಾಶಾ ಶಾಕ್ ನೀಡಿದ್ದಾರೆ.

ಇದೀಗ ನತಾಶಾ ಸ್ಟ್ಯಾಂಕೋವಿಚ್ ಪಾಂಡ್ಯ ಎನ್ನುವ ಯೂಸರ್ ನೇಮ್ ಹೊಂದಿದ್ದ ನತಾಶಾ ಇದೀಗ ತಮ್ಮ ಹೆಸರಿನ ಜತೆಗಿದ್ದ ಪಾಂಡ್ಯ ಸರ್‌ ನೇಮ್ ಕೈಬಿಟ್ಟಿದ್ದಾರೆ. ಇದು ಇಬ್ಬರ ದಾಂಪತ್ಯ ಜೀವನ ಹದಗೆಟ್ಟಿದೆಯಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಮಾರ್ಚ್ 04ರಂದು ನತಾಶಾ ಸ್ಟ್ಯಾಂಕೋವಿಚ್ ಅವರ ಹುಟ್ಟುಹಬ್ಬವಿತ್ತು. ಆದರೆ ಪತ್ನಿ ಬರ್ತ್‌ಡೇ ಗೆ ಪಾಂಡ್ಯ ಶುಭಕೋರಿರಲಿಲ್ಲ. ಅದೇ ರೀತಿ ಪಾಂಡ್ಯ ತಮ್ಮ ಮಗನ ಜತೆ ನತಾಶಾ ಇರುವ ಫೋಟೋ ಬಿಟ್ಟು ಉಳಿದೆಲ್ಲಾ ನತಾಶಾ ಫೋಟೋಗಳನ್ನು ಪಾಂಡ್ಯ ತಮ್ಮ ಸೋಷಿಯಲ್ ಮೀಡಿಯಾದಿಂದ ಅಳಿಸಿ ಹಾಕಿದ್ದಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನು ಕೆಲವು ನೆಟ್ಟಿಗರು ಇದೇ ಮೊದಲ ಬಾರಿಗೆ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಹೀಗಿದ್ದೂ ನತಾಶಾ ಸ್ಟೇಡಿಯಂಗೆ ಬಂದಿಲ್ಲ ಪತಿಗೆ ಚಿಯರ್ ಅಪ್ ಮಾಡಿಲ್ಲ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಸದ್ಯದಲ್ಲೇ ಬೇರ್ಪಡಲಿದ್ದಾರೆ ಎನ್ನುವ ಗುಸು ಗುಸು ಸುದ್ದಿಗೆ ಬಲ ಬರುವಂತೆ ಮಾಡಿದೆ. 

click me!