ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ, ಮಾಡಲ್ ನತಾಶಾ ಸ್ಟಾಂಕೋವಿಕ್ ಮತ್ತೊಮ್ಮೆ ಮದುವೆಯಾಗಿದ್ದಾರೆ. ಉದಯಪುರದಲ್ಲಿ ಅದ್ದೂರೊಯಾಗಿ ಮದುವೆ ಸಮಾರಂಭ ನಡೆದಿದೆ.
ಅಣ್ಣ ಕೃನಾಲ್ ಪಾಂಡ್ಯ ಸೇರಿದಂತೆ ತೀರಾ ಆಪ್ತರು ಮಾತ್ರವೇ ಮದುವೆ ಸಮಾರಂಭದಲ್ಲಿದ್ದರು. ಮೂರು ವರ್ಷಗಳ ಹಿಂದೆ ನತಾಶಾ ಸ್ಟಾಂಕೋವಿಕ್‌ರನ್ನು ಹಾರ್ದಿಕ್ ಪಾಂಡ್ಯ ರಿಜಿಸ್ಟರ್ ಮದುವೆ ಆಗಿದ್ದರು.
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ನಿಶ್ಚಿತಾರ್ಥ ಮಾಡಿಕೊಂಡ ಆರೇ ತಿಂಗಳಿಗೆ, ನತಾಶಾ ಅವರು ಹಾರ್ದಿಕ್ ಪಾಂಡ್ಯರ ಪುತ್ರ ಅಗಸ್ತ್ಯನಿಗೆ ಜನ್ಮ ನೀಡಿದ್ದರು. ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಇವರಿಬ್ಬರೂ ವಿವಾಹ ಮಾಡಿಕೊಂಡಿದ್ದರು.
ಮದುವೆ ಸಮಾರಂಭಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್, ಪ್ರೇಮಿಗಳ ದಿನಕ್ಕಾಗಿ ಆಪ್ತರಿಗಷ್ಟೇ ಪಾರ್ಟಿ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಹಾರ್ದಿಕ್ ಹಾಗೂ ನತಾಶಾ ಹಿಂದಿನ 'ರಾಂಜನಾ' ಚಿತ್ರದ ಹಾಡಿಗೆ ನೃತ್ಯ ಮಾಡಿದ್ದರು.
ಮದುವೆಯ ಚಿತ್ರಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಹಾರ್ದಿಕ್ ಪಾಂಡ್ಯ, ಮೂರು ವರ್ಷಗಳ ಹಿಂದೆಯೇ ನಾವು ಜೊತೆಯಾಗಿ ಬದುಕಬೇಕು ಎಂದು ತೀರ್ಮಾನ ಮಾಡಿದ್ದೆವು. ಈ ಪ್ರೇಮಿಗಳ ದಿನದಂದು ಮತ್ತೊಮ್ಮೆ ಇದರ ಸಂಭ್ರಮ ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ನಟಿ ಹಾಗೂ ಮಾಡೆಲ್ ಕೂಡ ಆಗಿರುವ ನತಾಶಾ ಸ್ಟಾಂಕೋವಿಕ್ ಕನ್ನಡದಲ್ಲಿ, 'ದನ ಕಾಯೋನು' ಚಿತ್ರದಲ್ಲಿ ಐಟಂ ಸಾಂಗ್‌ವೊಂದಕ್ಕೆ ನೃತ್ಯ ಮಾಡಿದ್ದರು.
ಮದುವೆ ಸಮಾರಂಭ ಗುರುವಾರದವರೆಗೂ ನಡೆಯಲಿದ್ದು, ಆ ಬಳಿಕ ಕ್ರಿಕೆಟಿಗರು ಹಾಗೂ ಸ್ನೇಹಿತರಿಗೆ ಆರತಕ್ಷತೆ ಕಾರ್ಯಕ್ರಮ ನಡೆಸುವ ಪ್ಲ್ಯಾನ್‌ನಲ್ಲೂ ಹಾರ್ದಿಕ್ ಪಾಂಡ್ಯ ಇದ್ದಾರೆ.