T20 World Cup ಪಾಕ್‌ ಚೆಂಡಾಡಿದ ಜಿಮಿಮಾ ರೋಡ್ರಿಗ್ಸ್‌ ಕುರಿತು ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್‌ ಸಂಗತಿಗಳಿವು..!

First Published Feb 13, 2023, 12:42 PM IST

ಬೆಂಗಳೂರು(ಫೆ.13): ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನ​ಸಿ​ನೊಂದಿಗೆ ಐಸಿಸಿ ಮಹಿ​ಳಾ ಟಿ20 ವಿಶ್ವ​ಕಪ್‌ ಟೂರ್ನಿಗೆ ಕಾಲಿ​ಟ್ಟ ಭಾರತ ಆರಂಭಿಕ ಪಂದ್ಯ​ದಲ್ಲಿ ಸಾಂಪ್ರ​ದಾ​ಯಿಕ ಬದ್ಧ​ವೈರಿ ಪಾಕಿ​ಸ್ತಾನವನ್ನು ಸೋಲಿಸಿ ಶುಭಾ​ರಂಭ ಮಾಡಿದೆ. ಭಾನು​ವಾ​ರದ ಪಂದ್ಯ​ದಲ್ಲಿ ಭಾರತ 7 ವಿಕೆಟ್‌ ಗೆಲುವು ಸಾಧಿ​ಸಿತು.  ಜೆಮಿಮಾ ರೋಡ್ರಿಗ್ಸ್‌ ಅಜೇಯ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. 
ಭಾರತ ತಂಡದ ಪಾಲಿಗೆ ಮೂರನೇ ಕ್ರಮಾಂಕದಲ್ಲಿ ಆಪತ್ಬಾಂದರಾಗಿ ಮಿಂಚಿದ ಜಿಮಿಮಾ ರೋಡ್ರಿಗ್ಸ್‌ ಯಾರು? ಅವರ ಹಿನ್ನೆಲೆ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
 

Image credit: Getty

ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು, ನಾಯಕಿ ಬಿಸ್ಮಾ ಮಾರೂಫ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 149 ರನ್ ಕಲೆ ಹಾಕಿತ್ತು. ಈ ಗುರಿಯನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಭಾರತ ಗೆಲುವಿನ ನಗೆ ಬೀರಿತ್ತು.

ಜಿಮಿಮಾ ರೋಡ್ರಿಗ್ಸ್‌, ಪಾಕಿಸ್ತಾನ ಎದುರು ಕೇವಲ 38 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಜೆಮಿಮಾ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಜೆಮಿಮಾ ರೋಡ್ರಿಗ್ಸ್‌, ಸೆಪ್ಟೆಂಬರ್ 05, 2000 ಇಸವಿಯಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದ್ದರು. ಆಲ್ರೌಂಡರ್ ಆಗಿರುವ ಜೆಮಿಮಾ, ಒಮ್ಮೆ ಮಹಾರಾಷ್ಟ್ರ ಅಂಡರ್ 17 ಹಾಕಿ ತಂಡವನ್ನು ಪ್ರತಿನಿಧಿಸಿದ್ದು, ಬಹುತೇಕ ಮಂದಿಗೆ ಗೊತ್ತಿಲ್ಲ.

ದೇಶಿ ಜೂನಿಯರ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರ್ತಿಗೆ ಬಿಸಿಸಿಐ ಕೊಡಮಾಡುವ ಜಗಮೋಹನ್ ದಾಲ್ಮೀಯ ಪ್ರಶಸ್ತಿಗೆ 2018ರಲ್ಲಿ ಜೆಮಿಮಾ ರೋಡ್ರಿಗ್ಸ್‌ ಪಾತ್ರರಾಗಿದ್ದರು.

ಮುಂಬೈನಲ್ಲೇ ಹುಟ್ಟಿ ಬೆಳೆದ ಜಿಮಿಮಾ ರೋಡ್ರಿಗ್ಸ್, ಬಾಲ್ಯದ ದಿನಗಳಲ್ಲಿಯೇ ಕ್ರಿಕೆಟ್ ಆಡುವುದನ್ನು ಆರಂಭಿಸಿದ್ದರು. ಜೆಮಿಮಾ ಶಾಲಾ ದಿನಗಳಲ್ಲಿ ಅವರ ತಂದೆ ಇವಾನ್ ರೋಡ್ರಿಗ್ಸ್‌ ಕೋಚ್ ಆಗಿದ್ದರು

ಜೆಮಿಮಾ ರೋಡ್ರಿಗ್ಸ್‌ ತಮ್ಮ ಹನ್ನೆರಡೂವರೆ ವಯಸ್ಸಿಗೆ ಅಂಡರ್ 19 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧನಾ ಬಳಿಕ ದ್ವಿಶತಕ ಬಾರಿಸಿದ ಎರಡನೇ ಭಾರತೀಯ ಮಹಿಳಾ ಬ್ಯಾಟರ್ ಎನ್ನುವ ಹೆಗ್ಗಳಿಕೆ ಜೆಮಿಮಾ ಅವರದ್ದು.

Jemimah Rodrigues

ಜೆಮಿಮಾ ರೋಡ್ರಿಗ್ಸ್‌ ಫೆಬ್ರವರಿ 13, 2018ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಮಾರ್ಚ್‌ 12, 2018ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ಏಕದಿನ ತಂಡಕ್ಕೂ ಜೆಮಿಮಾ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದರು.

click me!