ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಲು ಮುಂದಾಗಿದೆ ಎಂಬ ವದಂತಿಗಳು ಹಬ್ಬಿವೆ. ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಹಲವು ಫ್ರಾಂಚೈಸಿಗಳು ಪಾಂಡ್ಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿವೆ.
ಮುಂದಿನ ಐಪಿಎಲ್ ಆವೃತ್ತಿಗೂ ಮುನ್ನವೇ ಆಟಗಾರರ ವಿನಿಮಯ ಕುರಿತಾದ ಚರ್ಚೆಗಳು ಕಾವು ಪಡೆದುಕೊಂಡಿವೆ. ಮುಂಬೈ ಇಂಡಿಯನ್ಸ್ (MI) ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಲವು ಬಲಿಷ್ಠ ಫ್ರಾಂಚೈಸಿಗಳು ತೆರೆಮರೆಯ ಕಸರತ್ತು ನಡೆಸುತ್ತಿವೆ ಎಂಬ ವರದಿಗಳು ಕ್ರೀಡಾಲೋಕದಲ್ಲಿ ಸಂಚಲನ ಮೂಡಿಸಿವೆ. ಹಲವು ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್‌ಗೆ ಸಂಬಂಧಿಸಿದಂತೆ ವಿವಿಧ ಐಪಿಎಲ್ ಫ್ರಾಂಚೈಸಿಗಳಲ್ಲಿ ನಡೆಯುತ್ತಿರುವ ಪ್ರಮುಖ ವಿದ್ಯಮಾನಗಳ ವಿವರ ಇಲ್ಲಿದೆ.
27
ಮುಂಬೈ ಇಂಡಿಯನ್ಸ್ (MI): ಇನ್ನೂ ಅಂತಿಮವಾಗದ ನಿರ್ಧಾರ
ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡಿಂಗ್ ಅಡಿಯಲ್ಲಿ ಬೇರೆ ತಂಡಕ್ಕೆ ಬಿಟ್ಟುಕೊಡಬೇಕೇ ಅಥವಾ ಇಲ್ಲವೇ ಎಂಬ ಕುರಿತು ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ತಂಡದ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಫ್ರಾಂಚೈಸಿ ಆಂತರಿಕ ಚರ್ಚೆ ನಡೆಸುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಹಾರ್ದಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿದೆ. ಮುಂಬೈ ಇಂಡಿಯನ್ಸ್ ಸಮ್ಮತಿಸಿದರೆ, ಹಾರ್ದಿಕ್ ಪಾಂಡ್ಯ ಬದಲಿಗೆ ಭಾರತದ ಪ್ರಮುಖ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಮುಂಬೈಗೆ ನೀಡುವ ಬೃಹತ್ ‘ಆಲ್‌ರೌಂಡರ್ ಸ್ವಾಪ್’ ಆಫರ್ ನೀಡಲು ಡೆಲ್ಲಿ ಯೋಜನೆ ರೂಪಿಸುತ್ತಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR): ಆಸಕ್ತಿ ಇದೆ, ಆದರೆ ಸ್ಟಾರ್ ಆಟಗಾರರನ್ನು ನೀಡಲ್ಲ!
ಕೆಕೆಆರ್ ಫ್ರಾಂಚೈಸಿಗೂ ಹಾರ್ದಿಕ್ ಅವರನ್ನು ತಮ್ಮ ಸಾಲಿಗೆ ಸೇರಿಸಿಕೊಳ್ಳುವ ಇಚ್ಛೆಯಿದೆ. ಆದರೆ, ಹಾರ್ದಿಕ್‌ಗಾಗಿ ತಮ್ಮ ತಂಡದ ಯಾವುದೇ ಪ್ರಮುಖ ಆಟಗಾರನನ್ನು ಮುಂಬೈಗೆ ಬಿಟ್ಟುಕೊಡಲು ಕೆಕೆಆರ್ ಮ್ಯಾನೇಜ್‌ಮೆಂಟ್ ಸಂಪೂರ್ಣವಾಗಿ ನಿರಾಕರಿಸಿದೆ.
57
ರಾಜಸ್ಥಾನ್ ರಾಯಲ್ಸ್ (RR): ಯಶಸ್ವಿ ಜೈಸ್ವಾಲ್ ಬದಲಿಗೆ ಹಾರ್ದಿಕ್?
ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ಸಂಚಲನಕ್ಕೆ ಸಜ್ಜಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ತರಲು ತಮ್ಮ ಭರವಸೆಯ ಯುವ ಓಪನರ್ ಯಶಸ್ವಿ ಜೈಸ್ವಾಲ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ನೀಡುವ 'ಜೈಸ್ವಾಲ್-ಹಾರ್ದಿಕ್ ಸ್ವಾಪ್' ಸಾಧ್ಯತೆಗಳ ಬಗ್ಗೆಯೂ ವದಂತಿಗಳು ಹರಿದಾಡುತ್ತಿವೆ.
67
ಲಕ್ನೋ ಸೂಪರ್ ಜೈಂಟ್ಸ್ (LSG): ಪೂರನ್ ಬದಲಿಗೆ ಹಾರ್ದಿಕ್ ಡೀಲ್?
ಎಲ್‌ಎಸ್‌ಜಿ ಕೂಡ ಈ ಟ್ರೇಡಿಂಗ್ ರೇಸ್‌ನಲ್ಲಿದ್ದು, ತಮ್ಮ ಸ್ಫೋಟಕ ವಿಕೆಟ್‌ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ಮುಂಬೈಗೆ ನೀಡಿ, ಪ್ರತಿಯಾಗಿ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ತರುವ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದೆ.
77
ಚೆನ್ನೈ ಸೂಪರ್ ಕಿಂಗ್ಸ್ (CSK): ಹೊಸ ಕೋಚ್ ಮತ್ತು ನಾಯಕನ ನಿರ್ಧಾರಕ್ಕೆ ಕಾಯುತ್ತಿರುವ ಸಿಎಸ್‌ಕೆ
ಇತ್ತ ಸಿಎಸ್‌ಕೆ ಫ್ರಾಂಚೈಸಿ ಹಾರ್ದಿಕ್ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ತಂಡದ ಹೊಸ ಮುಖ್ಯ ಕೋಚ್ ಮತ್ತು ನಾಯಕ ಬಂದು ಜವಾಬ್ದಾರಿ ವಹಿಸಿಕೊಂಡ ಬಳಿಕವೇ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.