ಐಪಿಎಲ್ ಆಟಗಾರರ ರೀಟೈನ್ ಹಾಗೂ ರಿಲೀಸ್ ವೇಳೆಯಲ್ಲಿಯೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಿ ಸಾಕಷ್ಟು ಹೈಡ್ರಾಮಾಗೆ ಸಾಕ್ಷಿಯಾಗಿತ್ತು. ಗುಜರಾತ್ ಟೈಟಾನ್ಸ್ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಮುಂಬೈ ಫ್ರಾಂಚೈಸಿ ಯಶಸ್ವಿಯಾಗಿತ್ತು.
ಗುಜರಾತ್ ಟೈಟಾನ್ಸ್‌ನಿಂದ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ತಂಡದಲ್ಲಿದ್ದ ದುಬಾರಿ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಗೆ ಟ್ರೇಡ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.
ಇದೀಗ ಅಚ್ಚರಿಯ ಬೆಳವಣಿಗೆ ಎನ್ನುವಂತೆ 2024ರ ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಐಪಿಎಲ್‌ನ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್, ಹಾರ್ದಿಕ್ ಪಾಂಡ್ಯಗೆ ನಾಯಕ ಪಟ್ಟ ಕಟ್ಟಿದೆ.
5 ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕ ಪಟ್ಟ ನೀಡಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು.
Hardik Pandya Mumbai
ರೋಹಿತ್ ಶರ್ಮಾ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ರೋಹಿತ್ ಶರ್ಮಾ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಸೋಷಿಯಲ್ ಮೀಡಿಯಾ ಪೇಜ್ ಅನ್ ಫಾಲೋ ಮಾಡಲಾರಂಭಿಸಿದ್ದಾರೆ.
ಇದೆಲ್ಲದರ ನಡುವೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರುವ ಮುನ್ನ ಫ್ರಾಂಚೈಸಿ ಬಳಿ ಒಂದು ಕಂಡೀಷನ್ ವಿಧಿಸಿದ್ದರು. ಅದನ್ನು ಒಪ್ಪಿಯೇ ಮುಂಬೈ ಫ್ರಾಂಚೈಸಿಯು ಪಾಂಡ್ಯರನ್ನು ತಮ್ಮ ತಂಡಕ್ಕೆ ಸ್ವಾಗತಿಸಿತ್ತು ಎಂದು ವರದಿಯಾಗಿದೆ.
ಮೊದಲಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತಮ್ಮ ತಂಡಕ್ಕೆ ಬರಲು ಪಾಂಡ್ಯರ ಬಳಿ ಮಾತುಕತೆ ನಡೆಸಿತು. ಆಗ ಹಾರ್ದಿಕ್ ಪಾಂಡ್ಯ ತಮ್ಮನ್ನು ಕ್ಯಾಪ್ಟನ್ ಮಾಡುವುದಾದರೇ ಮಾತ್ರ ಮುಂಬೈ ತಂಡ ಕೂಡಿಕೊಳ್ಳುವುದಾಗಿ ಕಂಡೀಷನ್ ಹಾಕಿದ್ದರು.
ಇದಾದ ಬಳಿಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಹಾಕಿದ ಕಂಡೀಷನ್ ಒಪ್ಪಿಕೊಂಡಿತು. ಈ ವಿಷಯವನ್ನು ರೋಹಿತ್ ಶರ್ಮಾಗೂ ಮುಂಬೈ ಫ್ರಾಂಚೈಸಿ ತಿಳಿಸಿತು. ಆಗ ರೋಹಿತ್ ಶರ್ಮಾ ತಾವು ಹಾರ್ದಿಕ್ ಪಾಂಡ್ಯ ನಾಯಕತ್ವದಡಿ ಆಡಲು ರೆಡಿ ಎಂದು ಒಪ್ಪಿಕೊಂಡರು ಎಂದು ವರದಿಯಾಗಿದೆ.