ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

Published : Dec 12, 2025, 03:15 PM IST

ಮುಲ್ಲಾನ್‌ಪುರ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 51 ರನ್ ಅಂತರದ ಭರ್ಜರಿ ಜಯ ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇದರ ನಡುವೆ ಪಾಂಡ್ಯ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

PREV
16
ಎರಡನೇ ಟಿ20 ಪಂದ್ಯ ಸೋತ ಭಾರತ

ಭಾರತ ತಂಡವು ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಶರಣಾಗಿದೆ. ಈ ಮೂಲಕ ಮೊದಲ ಟಿ20 ಪಂದ್ಯದ ಸೋಲಿಗೆ ಹರಿಣಗಳ ಪಡೆ ತಿರುಗೇಟು ನೀಡವಲ್ಲಿ ಯಶಸ್ವಿಯಾಗಿದೆ.

26
ಪಾಂಡ್ಯ ಅಪರೂಪದ ದಾಖಲೆ

ಇನ್ನು ಇದೇ ಪಂದ್ಯದಲ್ಲಿ ಭಾರತ ತಂಡವು ಸೋಲಿನ ಹೊರತಾಗಿಯೂ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

36
100 ಸಿಕ್ಸರ್ & 100 ವಿಕೆಟ್ ದಾಖಲೆ

ಎರಡನೇ ಟಿ20 ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಹಾರ್ದಿಕ್ ಪಾಂಡ್ಯ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಹಾಗೂ 100 ವಿಕೆಟ್ ಕಬಳಿಸಿದ ಭಾರತದ ಮೊದಲ ಹಾಗೂ ಒಟ್ಟಾರೆ ನಾಲ್ಕನೇ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

46
ಹೊಸ ದಾಖಲೆ ಬರೆದ ಪಾಂಡ್ಯ

ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಪಾಂಡ್ಯ 100+ ವಿಕೆಟ್ ಕ್ಲಬ್ ಸೇರಿದ್ದರು. ಇದೀಗ ಎರಡನೇ ಟಿ20 ಪಂದ್ಯಕ್ಕೂ ಮುನ್ನ 99 ಸಿಕ್ಸರ್ ಸಿಡಿಸಿದ್ದ ಪಾಂಡ್ಯ, ಎರಡನೇ ಟಿ20 ಪಂದ್ಯದಲ್ಲಿ ಸಿಕ್ಸರ್ ಚಚ್ಚಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

56
ಅಪರೂಪದ ದಾಖಲೆ ಬರೆದ ಮೂವರು!

ಈ ಮೊದಲು ಕೇವಲ ಮೂವರು ಮಾತ್ರ 100+ ಸಿಕ್ಸರ್, 100+ ವಿಕೆಟ್‌ ಸಾಧನೆ ಮಾಡಿದ್ದಾರೆ. ಅವರೆಂದರೆ ಜಿಂಬಾಬ್ವೆಯ ಸಿಕಂದರ್‌ ರಝಾ, ಅಫ್ಘಾನಿಸ್ತಾನದ ಮೊಹಮ್ಮದ್‌ ನಬಿ ಹಾಗೂ ಮಲೇಷ್ಯಾದ ವಿರನ್‌ದೀಪ್‌ ಸಿಂಗ್‌ ಈ ಸಾಧನೆ ಮಾಡಿದ ಇತರ ಮೂವರು ಆಟಗಾರರಾಗಿದ್ದಾರೆ.

66
ಹಾರ್ದಿಕ್ ಪಾಂಡ್ಯ ಟಿ20 ನಂಬರ್ಸ್‌

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ಪರ 122 ಟಿ20 ಪಂದ್ಯಗಳಲ್ಲಿ 100 ಸಿಕ್ಸರ್‌ ಬಾರಿಸಿದ್ದು, 100 ವಿಕೆಟ್‌ ಪಡೆದಿದ್ದಾರೆ. 1939 ರನ್‌ ಕಲೆಹಾಕಿದ್ದಾರೆ.

Read more Photos on
click me!

Recommended Stories