Happy Birthday MSD: ಇಲ್ಲಿವೆ ನೋಡಿ ಧೋನಿ ಸಾಧನೆಯ ಒಂದು ಝಲಕ್

Suvarna News   | Asianet News
Published : Jul 07, 2020, 05:47 PM IST

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ, ಮಹಿ ಜಯಿಸದ ಐಸಿಸಿ ಟ್ರೋಫಿಗಳಿಲ್ಲ ಎನ್ನುವ ಮಾತು ಅಕ್ಷರಶಃ ಸತ್ಯ. ದಿಗ್ಗಜ ಧೋನಿಗಿಂದು(ಜು.07) 39ನೇ ಹುಟ್ಟುಹಬ್ಬದ ಸಂಭ್ರಮ. ನಾಯಕನಾದ ಮೊದಲ ಯತ್ನದಲ್ಲೇ ಟಿ20 ವಿಶ್ವಕಪ್ ಗೆಲ್ಲಿಸಿದ ಧೋನಿ, ಅದಾಗಿ ಎರಡು ವರ್ಷದಲ್ಲೇ ಅಂದರೆ 2009ರಲ್ಲಿ ಭಾರತವನ್ನು ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂ.1 ಪಟ್ಟಕ್ಕೇರಿಸಿದರು, ಇದಾಗಿ 2011ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟರು. ಇನ್ನು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಧೋನಿ ಪ್ರಚಂಡ ನಾಯಕತ್ವದಿಂದಾಗಿ ಭಾರತದ ಪಾಲಾಯಿತು. ಧೋನಿ ಸಾದನೆಯ ಒಂದು ಕ್ವಿಕ್ ಝಲಕ್ ಇಲ್ಲಿದೆ ನೋಡಿ.  

PREV
15
Happy Birthday MSD: ಇಲ್ಲಿವೆ ನೋಡಿ ಧೋನಿ ಸಾಧನೆಯ ಒಂದು ಝಲಕ್

ಟ್ರೈನ್ ಟಿಟಿಯಿಂದ ಟೀಂ ಇಂಡಿಯಾ ದಿಗ್ಗಜನಾಗಿ ಬೆಳೆದು ನಿಂತ ಧೋನಿ

ಟ್ರೈನ್ ಟಿಟಿಯಿಂದ ಟೀಂ ಇಂಡಿಯಾ ದಿಗ್ಗಜನಾಗಿ ಬೆಳೆದು ನಿಂತ ಧೋನಿ

25

ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಅಧಿಕ ರನ್‌ಗಳ ಸರದಾರ

ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಅಧಿಕ ರನ್‌ಗಳ ಸರದಾರ

35

ಅರಸಿ ಬಂದ ಖೇಲ್ ರತ್ನ-ಪದ್ಮ ಭೂಷಣ ಪ್ರಶಸ್ತಿಗಳು

ಅರಸಿ ಬಂದ ಖೇಲ್ ರತ್ನ-ಪದ್ಮ ಭೂಷಣ ಪ್ರಶಸ್ತಿಗಳು

45

ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಆರಾಧ್ಯದೈವ; ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ತಾಲಾ

ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಆರಾಧ್ಯದೈವ; ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ತಾಲಾ

55

ಇಷ್ಟೆಲ್ಲಾ ಹೇಳಿದ ಮೇಲೆ ಧೋನಿ ವಿಕೆಟ್ ಕೀಪಿಂಗ್ ವಿಚಾರವನ್ನು ಹೇಳದೇ ಹೋದರೆ ಅಪೂರ್ಣವಾದೀತು. ಧೋನಿ ವಿಕೆಟ್ ಹಿಂದೆ 634 ಕ್ಯಾಚ್ ಹಾಗೂ 195 ಸ್ಟಂಪಿಂಗ್ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 123 ಸ್ಟಂಪಿಂಗ್ ಮಾಡುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories