Mohammad Rizwan ಆಸ್ಪತ್ರೆಗೆ ತೆರಳುವುದು 20 ನಿಮಿಷ ತಡವಾಗಿದ್ದರೆ ನನ್ನ ಶ್ವಾಸನಾಳ ಒಡೆದು ಹೋಗುತ್ತಿತ್ತು..!

First Published Nov 17, 2021, 12:14 PM IST


ದುಬೈ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯ ಸೆಮಿಫೈನಲ್‌ಗೂ ಮುನ್ನ ಪಾಕಿಸ್ತಾನದ (Pakistan Cricket Team) ವಿಕೆಟ್ ಕೀಪರ್‌ ಮೊಹಮ್ಮದ್ ರಿಜ್ವಾನ್‌ (Mohammad Rizwan) ಅನುಭವಿಸಿದ ಸಂಕಷ್ಟವನ್ನು ಬಿಚ್ಚಿಟ್ಟಿದ್ದು, ಆಸ್ಪತ್ರೆ ತೆರಳಿದಾಗ ಉಸಿರಾಡಲು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 20 ನಿಮಿಷ ತಡವಾಗಿದ್ದರೂ ನನ್ನ ಶ್ವಾಸನಾಳ ಒಡೆದು ಹೋಗುತ್ತಿತ್ತು ಎಂದು ರಿಜ್ವಾನ್ ಹೇಳಿದ್ದಾರೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

মহম্মদ রিজওয়ান (পাকিস্তান)

ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ 2 ದಿನ ಐಸಿಯುನಲ್ಲಿದ್ದ ಪಾಕಿಸ್ತಾನ ಕ್ರಿಕೆಟಿಗ ಮೊಹಮದ್‌ ರಿಜ್ವಾನ್‌ ತಮ್ಮ ಅನುಭವ ಹಂಚಿಕೊಂಡಿದ್ದು, ಆಸ್ಪತ್ರೆಗೆ ತೆರಳಿದಾಗ ಉಸಿರಾಡಲು ಆಗುತ್ತಿರಲಿಲ್ಲ ಎನ್ನುವ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

‘ಆಸ್ಪತ್ರೆಗೆ ತೆರಳಿದಾಗ ನಾನು ಉಸಿರಾಡುತ್ತಿರಲಿಲ್ಲ. ಇನ್ನು 20 ನಿಮಿಷ ತಡವಾಗಿ ಬಂದಿದ್ದರೆ ನನ್ನ ಶ್ವಾಸನಾಳ ಒಡೆದು ಹೋಗುತ್ತಿತ್ತು ಎಂದು ವೈದ್ಯರು ತಿಳಿಸಿದರು ಎಂದು ಮೊಹಮ್ಮದ್ ರಿಜ್ವಾನ್ ಹೇಳಿದ್ದಾರೆ. 

ನಾನು ಈಗ ಬಿಡುಗಡೆಯಾಗುತ್ತೇನೆ, ಆಗ ಬಿಡುಗಡೆಯಾಗುತ್ತೇನೆ ಎಂದು ನರ್ಸ್‌ಗಳು ಹೇಳುತ್ತಿದ್ದರು. ಪವಾಡ ರೀತಿಯಲ್ಲಿ ನಾನು ಗುಣಮುಖನಾಗಿ ಸೆಮೀಸ್‌ನಲ್ಲಿ ಆಡಿದೆ’ ಎಂದು ರಿಜ್ವಾನ್‌ ಹೇಳಿಕೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮೊಹಮ್ಮದ್ ರಿಜ್ವಾನ್‌ ಬಲಿಷ್ಠ ಆಸ್ಟ್ರೇಲಿಯಾ ಎದುರು ಸ್ಪೋಟಕ 67 ರನ್‌ ಸಿಡಿಸುವ ಮೂಲಕ ಪಾಕ್ ಪರ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್ ಎನಿಸಿದ್ದರು.

ಆಸೀಸ್‌ ವಿರುದ್ದದ ಸೆಮೀಸ್‌ ಪಂದ್ಯಕ್ಕೂ ಮುನ್ನ ಮೊಹಮ್ಮದ್ ರಿಜ್ವಾನ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಇದಾದ ಬಳಿಕ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಾಗಿ ಪವಾಡ ಸದೃಶವಾಗಿ ಗುಣಮುಖರಾಗಿ ಸೆಮಿಫೈನಲ್‌ ಪಂದ್ಯವನ್ನಾಡಿದ್ದರು.

ಭಾರತೀಯ ಮೂಲದ ಡಾಕ್ಟರ್, ಪಾಕಿಸ್ತಾನದ ವಿಕೆಟ್‌ ಕೀಪರ್‌ ಮೊಹಮ್ಮದ್ ರಿಜ್ವಾನ್‌ ಅವರಿಗೆ ಚಿಕಿತ್ಸೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ರಿಜ್ವಾನ್‌ ತಮ್ಮ ಸಹಿಯೊಂದಿಗಿನ ಜೆರ್ಸಿಯನ್ನು ಉಡುಗೊರೆ ರೂಪದಲ್ಲಿ ಡಾಕ್ಟರ್‌ಗೆ ನೀಡಿದ್ದರು.

ಸೆಮಿಫೈನಲ್‌ನಲ್ಲಿ ರಿಜ್ವಾನ್ ಆಕರ್ಷಕ ಬ್ಯಾಟಿಂಗ್‌ ಹೊರತಾಗಿಯೂ ಆಸ್ಟ್ರೇಲಿಯಾದ ವಿಕೆಟ್ ಕೀಪರ್‌ ಬ್ಯಾಟರ್‌ ಮ್ಯಾಥ್ಯೂ ವೇಡ್ ಬಾರಿಸಿದ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಪಾಕ್ ಎದುರು ಆಸೀಸ್‌ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

click me!