47ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ದ್ರಾವಿಡ್; ದಿಗ್ಗಜನಿಗೆ ಶುಭಾಶಯಗಳ ಸುರಿಮಳೆ!

First Published | Jan 11, 2020, 1:42 PM IST

ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಹುಟ್ಟು ಹಬ್ಬದ ಸಂಭ್ರಮ. ಟೆಸ್ಟ್ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ಜಂಟ್ಲಮೆನ್ ರಾಹುಲ್ ದ್ರಾವಿಡ್. ಕ್ರಿಕೆಟ್‌ನ ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಅಪರೂಪದ ಕ್ರಿಕೆಟಿಗ ದ್ರಾವಿಡ್.  ಆರಂಭಿಕ, ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿದ್ದಾರೆ. ವಿಕೆಟ್ ಕೀಪರ್, ಬೌಲರ್, ನಾಯಕನಾಗಿಯೂ ತಂಡದ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದೀಗ 47ನೇ ವಸಂತಕ್ಕೆ ಕಾಲಿಟ್ಟಿರುವ ರಾಹುಲ್ ದ್ರಾವಿಡ್‌ಗೆ ದಿಗ್ಗಜರು ಶುಭಾಶಯ ಕೋರಿದ್ದಾರೆ.

ಮಾಜಿ ನಾಯಕ, ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್‌ಗೆ 47ನೇ ಹಟ್ಟು ಹಬ್ಬ ಸಂಭ್ರಮ
undefined
ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಸರಳ ಸಜ್ಜನಿಕೆಯ ರಾಹುಲ್ ದ್ರಾವಿಡ್ ನಮ್ಮ ಹೆಮ್ಮೆಯ ಕನ್ನಡಿಗ
undefined

Latest Videos


1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್ ದ್ರಾವಿಡ್
undefined
2012ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಲ್ಪ ಹಿನ್ನಡೆಯಿಂದ ದಿಢೀರ್ ನಿವೃತ್ತಿ
undefined
ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಡೆಬ್ಯೂ, ಮೊದಲ ಪಂದ್ಯದಲ್ಲಿ 95 ರನ್
undefined
1973ರಲ್ಲಿ ಮಧ್ಯಪ್ರದೇಶದಲ್ಲಿ ಹುಟ್ಟಿದ ದ್ರಾವಿಡ್ ಬೆಳದಿದ್ದು ನೆಲೆಸಿರುವುದು ಬೆಂಗಳೂರಿನಲ್ಲಿ
undefined
ಬೆಂಗಳೂರಿನ st.ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ರಾಹುಲ್ ದ್ರಾವಿಡ್ ವಿದ್ಯಾಭ್ಯಾಸ
undefined
MBA ಓದುತ್ತಿರುವಾಗಲೇ ಟೀಂ ಇಂಡಿಯಾಗೆ ಆಯ್ಕೆಯಾದ ರಾಹುಲ್ ದ್ರಾವಿಡ್
undefined
ಮೇ 4, 2003ರಲ್ಲಿ ವಿಜೇತಾ ಮದುವೆಯಾದ ರಾಹುಲ್ ದ್ರಾವಿಡ್
undefined
ಸಮಿತ್ ದ್ರಾವಿಡ್ ಹಾಗೂ ಅನ್ವಯ್ ದ್ರಾವಿಡ್ ಇಬ್ಬರ ಮಕ್ಕಳ ತಂದೆಯಾಗಿದ್ದಾರೆ
undefined
ಸಮಿತ್ ದ್ರಾವಿಡ್ ಕರ್ನಾಟಕ ಅಂಡರ್ 14 ತಂಡಕ್ಕೆ ಆಯ್ಕೆಯಾಗೋ ಮೂಲಕ ಅಪ್ಪನ ಹಾದಿಯಲ್ಲಿದ್ದಾರೆ
undefined
ಭಾರತ ಎ ಹಾಗೂ ಅಂಡರ್ 19 ತಂಡದ ಕೋಚ್ ಆಗಿ ಯಶಸ್ವಿಯಾಗಿರುವ ದ್ರಾವಿಡ್
undefined
ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಸೇವೆ
undefined
ಅರ್ಜುನ, ಪದ್ಮಶ್ರಿ ಹಾಗೂ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ ದ್ರಾವಿಡ್
undefined
ದಿ ವಾಲ್, ದಿ ಗ್ರೇಟ್ ವಾಲ್, ಮಿಸ್ಟರ್ ಡಿಪೆಂಡೇಬಲ್, ಜಿಮ್ಮಿ ಹೆಸರುಗಳಿಂದ ದ್ರಾವಿಡ್ ಖ್ಯಾತಿ
undefined
ಭಾರತದ ಪರ 164 ಟೆಸ್ಟ್, 344 ಏಕದಿನ ಹಾಗೂ ಏಕೈಕ ಟಿ20 ಪಂದ್ಯ ಆಡಿದ್ದಾರೆ
undefined
ಟೆಸ್ಟ್ ಕ್ರಿಕೆಟ್‌ನಲ್ಲಿ 13,288 ರನ್ ಹಾಗೂ ಏಕದಿನದಲ್ಲಿ 10889 ರನ್
undefined
click me!