13,000 ರನ್ ಗಡಿ ದಾಟಿದ ಬಟ್ಲರ್: ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 7 ಬ್ಯಾಟರ್ಸ್!

Published : Jul 19, 2025, 02:03 PM IST

ಲೀಡ್ಸ್‌: ಇಂಗ್ಲೆಂಡ್‌ನ ತಾರಾ ಕ್ರಿಕೆಟಿಗ ಜೋಸ್‌ ಬಟ್ಲರ್‌ ಟಿ20 ಕ್ರಿಕೆಟ್‌ನಲ್ಲಿ 13000 ರನ್‌ ಮೈಲುಗಲ್ಲು ಸಾಧಿಸಿದ್ದು, ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 2ನೇ, ಒಟ್ಟಾರೆ ವಿಶ್ವದ 7ನೇ ಆಟಗಾರ ಎನಿಸಿಕೊಂಡಿದ್ದಾರೆ. 

PREV
19

ಗುರುವಾರ ಇಂಗ್ಲೆಂಡ್‌ನ ಟಿ20 ಲೀಗ್‌ ಆಗಿರುವ ವಿಟಲಿಟಿ ಬ್ಲಾಸ್ಟ್‌ನಲ್ಲಿ ಯಾರ್ಕ್‌ಶೈರ್‌ ವಿರುದ್ಧ ಲಂಕಾಶೈರ್‌ ತಂಡದ ಬಟ್ಲರ್ 46 ಎಸೆತಗಳಲ್ಲಿ 77 ರನ್‌ ಸಿಡಿಸಿದರು. ಈ ಮೂಲಕ ಟಿ20ಯ ಒಟ್ಟಾರೆ ರನ್‌ ಗಳಿಕೆಯನ್ನು 13046ಕ್ಕೆ ಹೆಚ್ಚಿಸಿದರು.

29

ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 7 ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ

39

ಕ್ರಿಸ್‌ ಗೇಲ್

ವೆಸ್ಟ್‌ ಇಂಡೀಸ್‌ನ ಸ್ಪೋಟಕ ಬ್ಯಾಟರ್ ಕ್ರಿಸ್‌ ಗೇಲ್ ಒಟ್ಟಾರೆ 463 ಟಿ20 ಪಂದ್ಯಗಳನ್ನಾಡಿ 14562 ರನ್ ಸಿಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

49

ಕೀರನ್ ಪೊಲ್ಲಾರ್ಡ್‌

ವಿಂಡೀಸ್ ಮತ್ತೋರ್ವ ಬ್ಯಾಟರ್ ಕೀರನ್ ಪೊಲ್ಲಾರ್ಡ್ ಒಟ್ಟಾರೆ 707 ಟಿ20 ಪಂದ್ಯಗಳನ್ನಾಡಿ 13,854 ರನ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.

59

ಅಲೆಕ್ಸ್ ಹೇಲ್ಸ್‌

ಇಂಗ್ಲೆಂಡ್ ಮೂಲದ ಸ್ಪೋಟಕ ಆರಂಭಿಕ ಬ್ಯಾಟರ್ ಅಲೆಕ್ಸ್ ಹೇಲ್ 503 ಟಿ20 ಪಂದ್ಯಗಳನ್ನಾಡಿ 13,814 ರನ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.

69

ಶೋಯೆಬ್ ಮಲಿಕ್‌

ಪಾಕಿಸ್ತಾನದ ಅನುಭವಿ ಆಲ್ರೌಂಡರ್ ಶೋಯೆಬ್ ಮಲಿಕ್ 557 ಟಿ20 ಪಂದ್ಯಗಳನ್ನಾಡಿ 13,571 ರನ್ ಸಿಡಿಸಿದ್ದಾರೆ.

79

ವಿರಾಟ್‌ ಕೊಹ್ಲಿ

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಒಟ್ಟಾರೆ 414 ಟಿ20 ಪಂದ್ಯಗಳನ್ನಾಡಿ 13,543 ರನ್ ಸಿಡಿಸಿದ್ದಾರೆ.

89

ಡೇವಿಡ್ ವಾರ್ನರ್‌

ಆಸ್ಟ್ರೇಲಿಯಾ ದಿಗ್ಗಜ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 416 ಟಿ20 ಪಂದ್ಯಗಳನ್ನಾಡಿ 13,395 ರನ್ ಸಿಡಿಸಿದ್ದಾರೆ.

99

ಜೋಸ್ ಬಟ್ಲರ್‌

ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಜೋಸ್ ಬಟ್ಲರ್ 457 ಟಿ20 ಪಂದ್ಯಗಳನ್ನಾಡಿ 13,046 ರನ್ ಸಿಡಿಸಿ ಏಳನೇ ಸ್ಥಾನಕ್ಕೇರಿದ್ದಾರೆ.

Read more Photos on
click me!

Recommended Stories