ಸೋಲುವುದರಲ್ಲೂ ಕೆಟ್ಟ ದಾಖಲೆ ಬರೆದ ಗೌತಮ್ ಗಂಭೀರ್ ಮಾರ್ಗದರ್ಶನದ Team India!

Published : Jul 12, 2026, 11:54 AM IST

ಸೌಥಾಂಪ್ಟನ್: ಹಾಲಿ ಚಾಂಪಿಯನ್ ಟೀಂ ಇಂಡಿಯಾ ಇದೀಗ ಸತತ ಸೋಲುಗಳ ಮೂಲಕ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆಯನ್ನು ನಿರ್ಮಿಸಿದೆ. ಇದರ ಜತೆಗೆ ನಂಬರ್ ಒನ್ ಪಟ್ಟವನ್ನೂ ಕಳೆದುಕೊಂಡಿದೆ. ಇನ್ನು ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಸೋಲುವುದರಲ್ಲಿ ಕೆಟ್ಟ ದಾಖಲೆ ನಿರ್ಮಿಸಿದೆ. 

PREV
16
ಶ್ರೇಯಸ್ ಅಯ್ಯರ್ ಪಾಲಾದ ಕೆಟ್ಟ ದಾಖಲೆ

ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಐರ್ಲೆಂಡ್ ಬಳಿಕ ಇಂಗ್ಲೆಂಡ್ ಎದುರು ಟಿ20 ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದೆ. ಇಂಗ್ಲೆಂಡ್‌ನ ಬ್ರೈಡನ್ ಟೇಲರ್, ಎಲ್ಟನ್ ಚಿಗುಂಬುರ ಹಾಗೂ ಶ್ರೀಲಂಕಾದ ತಿಸಾರ ಪೆರೇರಾ ಬಳಿಕ ನಾಯಕನಾಗಿ ಮೊದಲ ಏಳು ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ದಾಖಲಿಸದ ನಾಲ್ಕನೇ ನಾಯಕ ಎನ್ನುವ ಕುಖ್ಯಾತಿಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ.

26
ಕೆಟ್ಟ ದಾಖಲೆಗೆ ಪಾತ್ರವಾದ ಟೀಂ ಇಂಡಿಯಾ

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದಾದ ಬಳಿಕ ನಡೆದ ಕೊನೆಯ 4 ಪಂದ್ಯಗಳಲ್ಲೂ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ನಾಲ್ಕನೇ ನಾಲ್ಕು ಪಂದ್ಯಗಳಲ್ಲೂ ಸೋಲುವ ಮೂಲಕ ಟೀಂ ಇಂಡಿಯಾ ನಿರಾಸೆ ಅನುಭವಿಸಿದೆ..

36
ಮೊದಲ ಸರಣಿಯೊಂದರಲ್ಲಿ 4 ಟಿ20 ಪಂದ್ಯ ಸೋತ ಭಾರತ

ಭಾರತ ತಂಡವು ಟಿ20 ಸರಣಿಯೊಂದರಲ್ಲಿ ಈವರೆಗೂ ಮೂರಕ್ಕಿಂತ ಹೆಚ್ಚು ಪಂದ್ಯಗಳನ್ನು ಸೋತಿರಲಿಲ್ಲ. ಇದೀಗ ಇಂಗ್ಲೆಂಡ್ ಎದುರಿನ ಐದನೇ ಟಿ20 ಪಂದ್ಯವನ್ನು ಸೋಲುವ ಮೂಲಕ ಟಿ20 ಸರಣಿಯಲ್ಲಿ ಮೊದಲ ಸಲ 4 ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತು ಮುಖಭಂಗ ಅನುಭವಿಸಿದೆ.

46
ಕಳೆದ ಎರಡು ಟಿ20 ಸರಣಿಯಲ್ಲಿ ಆರು ಸೋಲು ಕಂಡ ಭಾರತ

ಭಾರತ ತಂಡವು 2024ರ ಜನವರಿಯಿಂದ 2026ರ ಮಾರ್ಚ್‌ವರೆಗೆ 53 ಟಿ20 ಪಂದ್ಯಗಳನ್ನಾಡಿ 47 ಗೆಲುವು ಹಾಗೂ ಆರು ಸೋಲು ಕಂಡಿದೆ. ಈ ಅವಧಿಯಲ್ಲಿ ಭಾರತ ತಂಡವು ಎರಡು ಟಿ20 ವಿಶ್ವಕಪ್ ಗೆದ್ದಿತ್ತು. ಇದೀಗ 2026ರ ಜೂನ್‌ನಿಂದ ಜುಲೈ ಅವಧಿಯಲ್ಲಿ ಏಳು ಪಂದ್ಯಗಳನ್ನಾಡಿರುವ ಭಾರತ ಆರು ಪಂದ್ಯಗಳನ್ನು ಸೋತಿದ್ದು, ಇನ್ನೊಂದು ಪಂದ್ಯ ಯಾವುದೇ ಫಲಿತಾಂಶ ಹೊರಬಂದಿರಲಿಲ್ಲ.

56
ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಸೋಲು ಅನುಭವಿಸಿದ್ದ ಭಾರತ

ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು 125 ರನ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿತ್ತು. ಈ ಮೂಲಕ ಟಿ20 ಪಂದ್ಯದ ಇತಿಹಾಸದಲ್ಲಿ ಭಾರತ ಅನುಭವಿಸಿದ ಅತಿದೊಡ್ಡ ಅಂತರದ ಸೋಲು ಎನಿಸಿಕೊಂಡಿತು. ಇದಕ್ಕೂ ಮೊದಲು 2019ರಲ್ಲಿ ನ್ಯೂಜಿಲೆಂಡ್ ಎದುರು 80 ರನ್‌ಗಳ ಅಂತರದ ಸೋಲು ಅನುಭವಿಸಿತ್ತು.

66
1601 ದಿನ ಬಳಿಕ ನಂ.1 ಸ್ಥಾನದಿಂದ ಭಾರತ ಕೆಳಕ್ಕೆ!

ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಟಿ20 ಕ್ರಿಕೆಟ್‌ನಲ್ಲಿ 1601 ದಿನಗಳಿಂದ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿತ್ತು. ಆದರೆ ಇದೀಗ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನಲ್ಲಿ ಒಂದೇ ಒಂದು ಗೆಲುವು ಕಾಣದ ಟೀಂ ಇಂಡಿಯಾ, ಸುಮಾರು ನಾಲ್ಕೂವರೆ ವರ್ಷಗಳ ಬಳಿಕ ನಂ.1 ಸ್ಥಾನದಿಂದ ಹೊರಬಿದ್ದಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories