ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು 62 ಎಸೆತ ಬಾಕಿ ಇರುವಂತೆಯೇ 10 ವಿಕೆಟ್ ಹೀನಾಯ ಸೋಲು ಅನುಭವಿಸಿದೆ. ಇದು ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಕೆರಳಿಸುವಂತೆ ಮಾಡಿದೆ.
ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಮಹತ್ವದ ಪಂದ್ಯ ಎನಿಸಿಕೊಂಡಿದ್ದ ಕದನದಲ್ಲಿ ಲಖನೌ ಬೌಲರ್‌ಗಳನ್ನು ಚೆಂಡಾಡಿದ ಆರೆಂಜ್ ಆರ್ಮಿಯ ಆರಂಭಿಕ ಬ್ಯಾಟರ್‌ಗಳಾದ ಟ್ರ್ಯಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ತಮ್ಮ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಎದುರು ಲಖನೌ ಹೀನಾಯ ಸೋಲು ಅನುಭವಿಸುತ್ತಿದ್ದಂತೆಯೇ ಮೈದಾನದಲ್ಲಿಯೇ ನಾಯಕ ಕೆ ಎಲ್ ರಾಹುಲ್ ಅವರನ್ನು ಮಾಲೀಕ ಸಂಜೀವ್ ಗೋಯೆಂಕಾ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋವೀಗ ವೈರಲ್ ಆಗಿದೆ
ಇದರ ಬೆನ್ನಲ್ಲೇ ಲಖನೌ ತಂಡದ ನಾಯಕತ್ವಕ್ಕೆ ರಾಹುಲ್‌ಗೆ ಮಾಲಿಕ ಕೆ.ಎಲ್.ರಾಹುಲ್ ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ 2025ರ ಹರಾಜಿಗೂ ಫ್ರಾಂಚೈಸಿಯು ತಂಡದಿಂದ ಕೈಬಿಡಲಿದೆ ಎಂದು ಹೇಳಲಾಗುತ್ತಿದೆ.
2022ರ ಹರಾಜಿಗೂ ಮುನ್ನ ರಾಹುಲ್ ರನ್ನು 17 ಕೋಟಿ ನೀಡಿ ಲಖನೌ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಈ ಬಾರಿ ಅವರ ಪ್ರದರ್ಶನದ ಬಗ್ಗೆ ಮಾಲಿಕ ಸಂಜೀವ್ ಗೋಯೆಂಕಾ ಅತೃಪ್ತಿ ಹೊಂದಿದ್ದು, ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ
ಇನ್ನೊಂದೆಡೆ ಕೆ ಎಲ್ ರಾಹುಲ್ ನಾಯಕತ್ವ ತೊರೆದು ಕೇವಲ ಬ್ಯಾಟಿಂಗ್‌ನತ್ತ ಗಮನ ಹರಿಸುವ ಸಾಧ್ಯತೆಯಿದ್ದು, ಉಪನಾಯಕನಾಗಿರುವ ವೆಸ್ಟ್ ಇಂಡೀಸ್ ಮೂಲದ ಹಾರ್ಡ್ ಹಿಟ್ಟರ್ ನಿಕೋಲಸ್ ಪೂರನ್ ಅವರು ಲಖನೌ ನಾಯಕತ್ವ ವಹಿಸುವ ನಿರೀಕ್ಷೆಯಿದೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಖನೌ ತಂಡದ ನಾಯಕ ಕೆ ಎಲ್ ರಾಹುಲ್ 12 ಪಂದ್ಯಗಳನ್ನಾಡಿ 136ರ ಸ್ಟ್ರೈಕ್‌ರೇಟ್‌ನಲ್ಲಿ 460 ರನ್ ಸಿಡಿಸಿದ್ದಾರೆ. ಹೀಗಿದ್ದೂ ತಮ್ಮ ತಂಡವನ್ನು ಪ್ಲೇ ಆಫ್‌ಗೇರಿಸಲು ಪರದಾಡುತ್ತಿದ್ದಾರೆ.
ಈ ಮೊದಲು 2016, 2017ರಲ್ಲಿ ಗೋಯೆಂಕಾ ರೈಸಿಂಗ್ ಪುಣೆ ತಂಡದ ಮಾಲಿಕತ್ವ ಹೊಂದಿದ್ದಾಗ 2017ರ ಐಪಿಎಲ್ ಆವೃತ್ತಿಗೂ ಮುನ್ನ ಎಂ ಎಸ್ ಧೋನಿಯನ್ನು ನಾಯಕತ್ವದಿಂದ ಕಿತ್ತು ಹಾಕಿ, ಆಸ್ಟ್ರೇಲಿಯಾದ ಸ್ವೀವ್ ಸ್ಮಿತ್‌ಗೆ ಕ್ಯಾಪ್ಟನ್ಸಿ ಹೊಣೆ ನೀಡಿದ್ದರು.