Breaking: ಏಷ್ಯಾಕಪ್ ನಡೆಯುತ್ತಿರುವಾಗಲೇ ಲಂಕಾ ಮಾಜಿ ಕ್ರಿಕೆಟಿಗ ಆರೆಸ್ಟ್‌..!

Published : Sep 06, 2023, 05:13 PM IST

ಕೊಲಂಬೊ: ಒಂದು ಕಡೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿ ಭರದಿಂದ ಸಾಗುತ್ತಿದೆ ಹೀಗಿರುವಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗನನ್ನು ಲಂಕಾ ಪೊಲೀಸರು ಬಂಧನ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.  

PREV
17
Breaking: ಏಷ್ಯಾಕಪ್ ನಡೆಯುತ್ತಿರುವಾಗಲೇ ಲಂಕಾ ಮಾಜಿ ಕ್ರಿಕೆಟಿಗ ಆರೆಸ್ಟ್‌..!

ಕಳೆದ ರಾತ್ರಿಯಷ್ಟೇ ಶ್ರೀಲಂಕಾ ಕ್ರಿಕೆಟ್ ತಂಡವು ಆಫ್ಘಾನಿಸ್ತಾನ ಎದುರು ರೋಚಕ ಜಯ ಸಾಧಿಸುವ ಮೂಲಕ ಕೂದಲೆಳೆ ಅಂತರದಲ್ಲಿ ಸೋಲಿನಿಂದ ಪಾರಾಗಿ ಏಷ್ಯಾಕಪ್ ಟೂರ್ನಿಯ ಸೂಪರ್‌ 4 ಹಂತಕ್ಕೆ ಲಗ್ಗೆಯಿಟ್ಟಿದೆ.

27
Sachithra Senanayake

ಹೀಗಿರುವಾಗಲೇ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸಚಿತ್ರಾ ಸೇನಾನಾಯಕೆ ಅವರನ್ನು ಬುಧವಾರ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪದಡಿ ಆರೆಸ್ಟ್ ಮಾಡಲಾಗಿದೆ. ಅವರನ್ನು ಕ್ರೀಡಾ ಸಚಿವಾಲಯ ನೇಮಕ ಮಾಡಿದ ವಿಶೇಷ ತನಿಖಾ ತಂಡದ ಮುಂದೆ ಹಾಜರುಪಡಿಸಲಾಗಿದೆ.
 

37

ಕಳೆದ ತಿಂಗಳಷ್ಟೇ ಕೊಲಂಬೊ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 38 ವರ್ಷದ ಸಚಿತ್ರಾ  ಸೇನಾನಾಯಕೆಗೆ ಮುಂದಿನ ಮೂರು ತಿಂಗಳು ವಿದೇಶಕ್ಕೆ ಹಾರದಂತೆ ನಿರ್ಬಂಧ ಹೇರಿತ್ತು. 

47

ಇದೀಗ ಶ್ರೀಲಂಕಾದ ಮಾಜಿ ಕ್ರಿಕೆಟಿಗನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಶ್ರೀಲಂಕಾದ ಅಟಾರ್ನಿ ಜನರಲ್ ಅವರ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡವು ಸೇನಾನಾಯಕೆ ಮೇಲೆ ಕೇಸ್ ದಾಖಲಿಸಿದೆ.
 

57

ವಿಶೇಷ ತನಿಖಾ ಸಂಸ್ಥೆಯ ವರದಿ ಪ್ರಕಾರ, ಸೇನಾನಾಯಕೆ 2020ರ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಮ್ಯಾಚ್ ಫಿಕ್ಸಿಂಗ್ ಮಾಡಲು ಇಬ್ಬರು ಆಟಗಾರರನ್ನು ದುಬೈನಲ್ಲಿ ಫೋನ್‌ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ.

67

ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಸೇನಾನಾಯಕೆ, ಇವೆಲ್ಲವೂ ಆಧಾರರಹಿತವಾದ ಶುದ್ದ ಸುಳ್ಳುಗಳಾಗಿವೆ ಎಂದು ಈ ಆರೋಪಗಳನ್ನು ತಳ್ಳಿ ಹಾಕಿದ್ದರು. ಸೇನಾನಾಯಕೆ ಶ್ರೀಲಂಕಾ ಪರ 73 ಸೀಮಿತ ಓವರ್‌ಗಳ ಪಂದ್ಯಗಳನ್ನಾಡಿ 78 ವಿಕೆಟ್ ಕಬಳಿಸಿದ್ದಾರೆ.

77
Sachithra Senanayake

ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಸೇನಾನಾಯಕೆ, ಇವೆಲ್ಲವೂ ಆಧಾರರಹಿತವಾದ ಶುದ್ದ ಸುಳ್ಳುಗಳಾಗಿವೆ ಎಂದು ಈ ಆರೋಪಗಳನ್ನು ತಳ್ಳಿ ಹಾಕಿದ್ದರು. ಸೇನಾನಾಯಕೆ ಶ್ರೀಲಂಕಾ ಪರ 73 ಸೀಮಿತ ಓವರ್‌ಗಳ ಪಂದ್ಯಗಳನ್ನಾಡಿ 78 ವಿಕೆಟ್ ಕಬಳಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories