ಭಾರತೀಯ ಕ್ರಿಕೆಟಿಗರ ವೈಯಕ್ತಿಕ ಜೀವನ ಸಹ ಸಖತ್ ಫೇಮಸ್.ಕಳೆದ ವರ್ಷ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಸುರೇಶ್ ರೈನಾ, ಈಗ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯಕಳೆಯುತ್ತಿದ್ದಾರೆ.ಸುರೇಶ್ ರೈನಾ ಮತ್ತು ಪ್ರಿಯಾಂಕಾ ರೈನಾರಿಗೆ 2 ಮಕ್ಕಳಿವೆ. 4 ವರ್ಷದ ಮಗಳು ಗಾರ್ಸಿಯಾ ಮತ್ತು ಮಗ ರಿಯೊ.
ಸುರೇಶ್ ರೈನಾ ಮತ್ತು ಪ್ರಿಯಾಂಕಾ ಅವರು ಮಾರ್ಚ್ 23, 2020 ರಂದು ಎರಡನೇ ಮಗುವಿಗೆ ಪೋಷಕರಾದರು. ರೈನಾರ 10 ತಿಂಗಳ ಮಗ ತುಂಬಾ ಮುದ್ದಾಗಿದೆ.
ರಿಯೊ ರೈನಾನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗೆ, ರೈನಾ ತಮ್ಮ ಮಗನೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ರಿಯೊ ಕ್ಯಾಮೆರಾಕ್ಕೆ ಪೋಸ್ ನೀಡಿದರೆ, ರೈನಾ ಮಗನನ್ನು ಪ್ರೀತಿಯಿಂದ ನೋಡುತ್ತಿದ್ದಾರೆ.'ಪ್ರೀತಿಯಿಂದ ತುಂಬಿದ ಜೀವನ ತುಂಬಿದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಮಕರ ಸಂಕ್ರಾಂತಿಯಂದು ಶೇರ್ ಮಾಡಿದ ಅಕ್ಕ ತಮ್ಮನ ಈ ಫೋಟೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ಗಾರ್ಸಿಯಾ ತನ್ನ ಕಿರಿಯ ಸಹೋದರ ರಿಯೊವನ್ನು ಹಿಡಿದಿಟ್ಟು ಕೊಂಡಿದ್ದಾಳೆ.
ರಿಯೊ ತನ್ನ ಅಜ್ಜಿಯ ತೊಡೆಮೇಲೆ.
ಜ್ಯೂನಿಯರ್ ರೈನಾ ಪ್ಯಾಂಟ್ ಶರ್ಟ್ತಲೆಗೆ ಟೋಪಿ ಧರಿಸಿರುವ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು.
ಕ್ರಿಸ್‌ಮಸ್ ಸಮಯದ ಈ ಫೋಟೋವನ್ನು ಸುಮಾರು 4 ಲಕ್ಷ ಜನರು ಇಷ್ಟ ಪಟ್ಟಿದ್ದಾರೆ.
ರಿಯೊ6 ತಿಂಗಳ ಮಗುವಾಗಿದ್ದಾಗ, ಕುಳಿತು ಕೊಳ್ಳಲುಪ್ರಾರಂಭಿಸಿದಾಗಿನ ಫೋಟೋ.
ರೈನಾ ಜೊತೆಗೆ, ಅವರ ಪತ್ನಿ ಪ್ರಿಯಾಂಕಾಮಗನ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ತನ್ನ ಇಬ್ಬರು ಮಕ್ಕಳೊಂದಿಗೆ.