ಸಚಿನ್ ತೆಂಡುಲ್ಕರ್ ಔಟ್ ಮಾಡಿದ್ದಕ್ಕೆ ಇಂಗ್ಲೆಂಡ್ ವೇಗಿಗೆ ಬಂದಿತ್ತಂತೆ ಜೀವ ಬೆದರಿಕೆ!
First Published | Jun 9, 2020, 1:45 PM ISTಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ ಅನ್ನುವುದಾದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅದಕ್ಕೆ ದೇವರು ಅನ್ನುವ ಮಾತೊಂದಿದೆ. ಅಷ್ಟರ ಮಟ್ಟಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಬೇರೂರಿದ್ದಾರೆ. 24 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಸಚಿನ್ ಆರಾಧ್ಯ ದೈವವಾಗಿದ್ದರು.
90ರ ದಶಕದಲ್ಲಿ ಸಚಿನ್ ಔಟಾದರೆ ಮುಗಿಯಿತು ಟೀಂ ಇಂಡಿಯಾ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಭಾವಿಸಲಾಗುತ್ತಿತ್ತು. ಕೆಲವರಂತು ಸಚಿನ್ ಔಟಾಗುತ್ತಿದ್ದಂತೆ ಟಿವಿಯನ್ನು ಆಫ್ ಮಾಡಿ ಬಿಡುತ್ತಿದ್ದರು. ಶತಕಗಳ ಶತಕದ ಸರದಾರ 90 ರನ್ ಗಳಿಸುತ್ತಿದ್ದಂತೆ ನರ್ವಸ್ ಆಗಿ ವಿಕೆಟ್ ಒಪ್ಪಿಸುತ್ತಿದ್ದರು. ಹೀಗೆ 99 ಶತಕ ಬಾರಿಸಿದ್ದ ತೆಂಡುಲ್ಕರ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 90 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ವಿಕೆಟ್ ಪಡೆದ ಬೌಲರ್ ಹಾಗೂ ವಿವಾದಾತ್ಮಕ ಔಟ್ ನೀಡಿದ ಅಂಪೈರ್ ಜೀವ ಬೆದರಿಕೆ ಎದುರಿಸಿದ್ದರಂತೆ..!