IPL 2022: ಲಖನೌ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ನೇಮಕ

Suvarna News   | Asianet News
Published : Dec 18, 2021, 05:39 PM IST

ಬೆಂಗಳೂರು: 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿಯಲ್ಲಿ 10 ತಂಡಗಳು ಸೆಣಸಾಟ ನಡೆಸಲಿವೆ. ಈಗಿರುವ ಎಂಟು ತಂಡಗಳ ಜತೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ (Lucknow) ಹಾಗೂ ಅಹಮದಾಬಾದ್ ತಂಡಗಳು ಈಗಿನಿಂದಲೇ ಸಿದ್ದತೆಗಳು ಆರಂಭಿಸಿವೆ. ಇದೀಗ ಹೊಸ ಬೆಳವಣಿಗೆ ಎನ್ನುವಂತೆ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್‌ ಗಂಭೀರ್(Gautam Gambhir), ಲಖನೌ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.   

PREV
16
IPL 2022: ಲಖನೌ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ನೇಮಕ

2022ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಭರ್ಜರಿಯಾಗಿಯೇ ಆರಂಭಿಸುವ ನಿಟ್ಟಿನಲ್ಲಿ ಲಖನೌ ಫ್ರಾಂಚೈಸಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಹಮದಾಬಾದ್ ಹಾಗೂ ಲಖನೌ ತಂಡಗಳು ಸೇರ್ಪಡೆಯಾಗಿವೆ. ಇದೀಗ ಲಖನೌ ಫ್ರಾಂಚೈಸಿಯು ಗೌತಮ್ ಗಂಭೀರ್ ಅವರನ್ನು ತನ್ನ ತಂಡದ ಮೆಂಟರ್‌ ಆಗಿ ನೇಮಕ ಮಾಡಿಕೊಂಡಿದೆ.
 

26

ಬಿಜೆಪಿ ಸಂಸದ ಗೌತಮ್ ಗಂಭೀರ್, ಇದೀಗ ಐಪಿಎಲ್‌ ವೃತ್ತಿ ಜೀವನದ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ಈ ಮೊದಲು ಗಂಭೀರ್ ಡೆಲ್ಲಿ ಡೇರ್‌ಡೆವಿಲ್ಸ್‌(ಡೆಲ್ಲಿ ಕ್ಯಾಪಿಟಲ್ಸ್) ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.

36

ಗೌತಮ್‌ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ ನೈಟ್‌ ರೈಡರ್ಸ್ ತಂಡವು ಎರಡು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. 2012 ಹಾಗೂ 2014ರಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಗಂಭೀರ್ ಮಹತ್ವದ ಪಾತ್ರ ವಹಿಸಿದ್ದರು. ಇನ್ನು 2018ರಲ್ಲಿ ಡೆಲ್ಲಿ ತಂಡದ ಪರ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು. 

46

ಇಂತಹ ಅದ್ಭುತ ಅವಕಾಶ ಕಲ್ಪಿಸಿಕೊಟ್ಟ ಡಾ. ಸಂಜೀವ್ ಗೋಯೆಂಕಾ ಹಾಗೂ ಆರ್‌ಪಿಎಸ್‌ಜಿ ಗ್ರೂಪ್‌ಗೆ ಅನಂತ ಧನ್ಯವಾದಗಳು. ಸ್ಪರ್ಧೆಯನ್ನು ಗೆಲ್ಲುವ ಕಿಚ್ಚು ಇನ್ನೂ ನನ್ನಲ್ಲಿ ಉಳಿದಿದೆ. ಗೆಲ್ಲುವ ಹಂಬಲ ಇನ್ನೂ 24*7 ನನ್ನಲ್ಲಿ ಜಾಗೃತವಾಗಿದೆ. ನಾನು ಸುಮ್ಮನೆ ಡ್ರೆಸ್ಸಿಂಗ್‌ ರೂಂಗಾಗಿ ಹೋರಾಟ ಮಾಡುವವನಲ್ಲ, ಬದಲಿಗೆ ಉತ್ತರ ಪ್ರದೇಶದ ಸ್ಪೂರ್ತಿ ಹಾಗೂ ಆತ್ಮವಾಗಿ ಕಾಣಿಸಿಕೊಳ್ಳಲಿದ್ದೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

56
संजीव गोयनका

ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ, ಆರ್‌ಪಿಎಸ್‌ಜಿ ಕುಟುಂಬಕ್ಕೆ ಗೌತಮ್ ಗಂಭೀರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಗೌತಮ್ ಗಂಭೀರ್ ಅದ್ಭುತವಾದ ಕೆರಿಯರ್ ರೆಕಾರ್ಡ್ ಹೊಂದಿದ್ದಾರೆ. ಅವರ ಕ್ರಿಕೆಟ್ ಜ್ಞಾನವನ್ನು ನಾನು ಗೌರವಿಸುತ್ತೇನೆ ಹಾಗೂ ಅವರ ಜತೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

66

ಕಳೆದ ಅಕ್ಟೋಬರ್‌ನಲ್ಲಿ ನಡೆದ ಹೊಸ ತಂಡಗಳ ಬಿಡ್ಡಿಂಗ್‌ ವೇಳೆ ಸಂಜೀವ್ ಗೋಯೆಂಕಾ ನೇತೃತ್ವದ ಆರ್‌ಪಿಎಸ್‌ಜಿ ಗ್ರೂಪ್ ಬರೋಬ್ಬರಿ 7,090 ಕೋಟಿ ರುಪಾಯಿ ನೀಡಿ ಲಖನೌ ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು.
 

Read more Photos on
click me!

Recommended Stories