Ind vs Aus: ವೈಜಾಗ್‌ನಲ್ಲಿ ಕೊಹ್ಲಿಯೇ ಕಿಂಗ್‌..! ವಿರಾಟ್ ಸೆಂಚುರಿ ಭೀತಿಯಲ್ಲಿ ಆಸೀಸ್‌

Published : Mar 18, 2023, 02:33 PM IST

ಬೆಂಗಳೂರು(ಮಾ.18): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಮೊದಲ ಪಂದ್ಯ ಸೋತು ಕಂಗಾಲಾಗಿರುವ ಕಾಂಗರೂ ಪಡೆಗೆ ಇದೀಗ ವಿರಾಟ್ ಕೊಹ್ಲಿ ಭೀತಿ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
17
Ind vs Aus: ವೈಜಾಗ್‌ನಲ್ಲಿ ಕೊಹ್ಲಿಯೇ ಕಿಂಗ್‌..! ವಿರಾಟ್ ಸೆಂಚುರಿ ಭೀತಿಯಲ್ಲಿ ಆಸೀಸ್‌

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ ಜಯ ಸಾಧಿಸಿದೆ. ಇದೀಗ ಎರಡನೇ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ಸರಣಿ ಜೀವಂತವಾಗಿರಿಸಿಕೊಳ್ಳಲು ಆಸೀಸ್ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ.
 

27

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ವಿಶಾಖಪಟ್ಟಣಂನ ವೈಜಾಗ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಈ ಪಿಚ್‌ ವಿರಾಟ್ ಕೊಹ್ಲಿ ಪಾಲಿಗೆ ಲಕ್ಕಿ ಪಿಚ್‌ ಎಂದೇ ಬಿಂಬಿತವಾಗಿದೆ. ಇದು ಆಸೀಸ್ ತಲೆನೋವು ಹೆಚ್ಚುವಂತೆ ಮಾಡಿದೆ.
 

37

ವಿರಾಟ್‌ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ವೈಜಾಗ್‌ ಪಿಚ್‌ನಲ್ಲಿ ಅಸಾಧಾರಣ ದಾಖಲೆ ಹೊಂದಿದ್ದಾರೆ. ವಿರಾಟ್ ಕೊಹ್ಲಿ, ವೈಜಾಗ್‌ನಲ್ಲಿ 6 ಏಕದಿನ ಪಂದ್ಯಗಳನ್ನಾಡಿ 111.20 ಬ್ಯಾಟಿಂಗ್ ಸರಾಸರಿಯಲ್ಲಿ 556 ರನ್ ಸಿಡಿಸಿದ್ದಾರೆ.
 

47

ವಿರಾಟ್ ಕೊಹ್ಲಿ, ವೈಜಾಗ್‌ ಪಿಚ್‌ನಲ್ಲಿ ಆಡಿದ 6 ಏಕದಿನ ಪಂದ್ಯಗಳ ಪೈಕಿ 3 ಶತಕ ಹಾಗೂ ಎರಡು ಅರ್ಧಶತಕ ಸಿಡಿಸಿದ್ದಾರೆ. 2010ರಲ್ಲಿ ಆಸ್ಟ್ರೇಲಿಯಾ, 2011 ಹಾಗೂ 2018ರಲ್ಲಿ ವೆಸ್ಟ್ ಇಂಡೀಸ್‌ ಎದುರು ಶತಕ ಸಿಡಿಸಿದ್ದರು.

57

ವಿರಾಟ್ ಕೊಹ್ಲಿ, 2018ರಲ್ಲಿ ವೆಸ್ಟ್‌ ಇಂಡೀಸ್ ಎದುರು ಅಜೇಯ 157 ರನ್ ಸಿಡಿಸಿ ಅಬ್ಬರಿಸಿದ್ದರು. ಇನ್ನು ಇದಷ್ಟೇ ಅಲ್ಲದೇ ಎರಡು ಅರ್ಧಶತಕ ಸಿಡಿಸಿದ್ದು, ಈ ಪೈಕಿ 2013ರಲ್ಲಿ ವೆಸ್ಟ್‌ ಇಂಡೀಸ್ ಎದುರು 99 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದು ಸೇರಿದೆ.
 

67

ಇದೀಗ ವಿರಾಟ್ ಕೊಹ್ಲಿ, ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಮ್ಮೆ ವೈಜಾಗ್‌ನಲ್ಲಿ ರನ್‌ ಮಳೆ ಹರಿಸಲು ಎದುರು ನೋಡುತ್ತಿದ್ದಾರೆ. 

77

ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದ ವಿರಾಟ್ ಕೊಹ್ಲಿ, ಇದೀಗ ತಮ್ಮ ಅದೃಷ್ಟದ ಪಿಚ್‌ನಲ್ಲಿ ಮತ್ತೊಂದು ಶತಕ ಸಿಡಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Read more Photos on
click me!

Recommended Stories