ಇದು ನಮ್ಮ ಆಂತರಿಕ ವಿಚಾರ; ವಿದೇಶಿ ತಾರೆಯರಿಗೆ ತಿರುಗೇಟು ನೀಡಿದ ತೆಂಡುಲ್ಕರ್

First Published | Feb 4, 2021, 1:25 PM IST

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 3 ಕೃಷಿಕಾಯ್ದೆಗಳ ವಿರುದ್ದ ರೈತರು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಗೆ ಜಾಗತಿಕ  ಸೆಲಿಬ್ರಿಟಿಗಳು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.  
ಈ ಪೈಕಿ ಖ್ಯಾತ ಪಾಪ್‌ ಸ್ಟಾರ್ ರಿಹಾನ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಕಟವಾದ ರೈತರ ಮುಷ್ಕರದ ಬಗ್ಗೆಗಿನ ಕಾರ್ಯಕ್ರಮವನ್ನು ಉಲ್ಲೇಖಿಸಿ 'ನಾವೇಕೆ ಈ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ? ಎಂದು ಟ್ವೀಟ್‌ ಮೂಲಕ ಪ್ರಶ್ನಿಸಿದ್ದರು. ಇದಕ್ಕೆ ಬಾಲಿವುಡ್‌ ಸೆಲಿಬ್ರಿಟಿಗಳು ಸೇರಿದಂತೆ ಕ್ರಿಕೆಟಿಗರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ರಿಕೆಟಿಗರ ಈ ನಡೆಗೆ ಸಾಕಷ್ಟು ಪರ ಹಾಗೂ ವಿರೋಧಗಳು ವ್ಯಕ್ತವಾಗಿವೆ.
 

ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಪ್ರಶ್ನಿಸಿ ಅಮೆರಿಕದ ಪಾಪ್ ಸ್ಟಾರ್ ರಿಹಾನಾ ಮಾಡಿದ ಟ್ವೀಟ್‌ಗೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
undefined
ಈ ಕುರಿತಂತೆ ಟ್ವೀಟ್‌ ಮಾಡಿರುವ ಸಚಿನ್ ತೆಂಡುಲ್ಕರ್‌, ಭಾರತದ ಏಕತೆಯ ವಿಷಯದಲ್ಲಿ ರಾಜಿ ಇಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದೇ ವಿನಃ ಭಾಗೀದಾರರಾಗಲು ಸಾಧ್ಯವಿಲ್ಲ. ಭಾರತವೇ ಭಾರತದ ಒಳಿತನ್ನು ನಿರ್ಧರಿಸಬೇಕು ಎನ್ನುವುದು ಭಾರತೀಯರೆಲ್ಲರಿಗೂ ಗೊತ್ತು. ಒಗ್ಗಟ್ಟಾಗಿರೋಣ ಎಂದು ಹೇಳಿದ್ದಾರೆ.
undefined

Latest Videos


ಕೃಷಿಕಾಯ್ದೆ ವಿಚಾರದಲ್ಲಿ ರೈತನಾಯಕರು ಹಾಗೂ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಫಲಪ್ರದವಾಗಿಲ್ಲ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾತುಕತೆ ನಡೆದರೂ ರೈತರು ಸಮಾಧಾನವಾಗದೇ ಇದ್ದದ್ದು ದುರಾದೃಷ್ಟಕರ ಎಂದು ಪ್ರತಿಕ್ರಿಯಿಸಿತ್ತು.
undefined
ಜನವರಿ 26ರಂದು ದೇಶವೇ ಗಣರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂಸಾಚಾರ ಹಾಗೂ ವಿಧ್ವಂಸಕ ಕೃತ್ಯಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ.
undefined
ಕೆಲವೊಂದು ಪಾಶ್ಚಿಮಾತ್ಯ ಹಿತಾಸಕ್ತಿಗಳ ಗುಂಪು ಭಾರತದ ಸಾರ್ವಭೌಮತ್ವಕ್ಕೆ ಸವಾಲಾಗಿ ಪರಿಣಮಿಸುತ್ತಿವೆ. ಹೀಗಾಗಿ ಇಲ್ಲಿನ ವಾಸ್ತವ ವಿಚಾರ ತಿಳಿದು ಕಾಮೆಂಟ್‌ ಮಾಡಿ ಎಂದು ರೆಹಾನಾ ಅವರಂತಹ ವಿದೇಶಿ ಸೆಲಿಬ್ರಿಟಿಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂದೇಶ ರವಾನಿಸಲಾಗಿದೆ ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ಸಚಿನ್ ಟ್ವೀಟ್‌ ಮಾಡಿದ್ದಾರೆ.
undefined
ಇನ್ನು ಸ್ಪಿನ್ ದಿಗ್ಗಜ ಅನಿಲ್‌ ಕುಂಬ್ಳೆ ಸಹಾ ಸಚಿನ್‌ ತೆಂಡುಲ್ಕರ್ ಹಾದಿಯನ್ನೇ ಹಿಂಬಾಲಿಸಿದ್ದು, ನಮ್ಮ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ
undefined
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಭಾರತ ತನ್ನ ಆಂತರಿಕ ಸಮಸ್ಯೆಗಳನ್ನು ಪರಸ್ಪರರಿಗೆ ಸಮ್ಮತವಾಗಬಲ್ಲ ರೀತಿಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿಂದೆ ಮತ್ತು ಮುಂದೆ ಕೂಡಾ ಎಂದು ಕುಂಬ್ಳೆ ಟ್ವೀಟ್‌ ಮಾಡಿದ್ದಾರೆ.
undefined
ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌, ನೀಲಿಚಿತ್ರ ತಾರೆ ಮಿಯಾ ಖಲೀಫಾ ಮುಂತಾದವರು ಸಾಮಾಜಿಕ ಜಾಲತಾಣಗಳ ಮೂಲಕ ನೈತಿಕ ಬೆಂಬಲ ಸೂಚಿಸಿದ್ದಾರೆ.
undefined
click me!