Image Credit: Getty Images
ಕ್ರಿಕೆಟ್ ದಂತಕಥೆ ಶೇನ್ ವಾರ್ನ್, ಮಾರ್ಚ್ 04ರಂದು ಥಾಯ್ಲೆಂಡ್‌ನಲ್ಲಿರುವ ಕೋಹ್ ಸಾಮಯಿ ದ್ವೀಪದಲ್ಲಿರುವ ವಿಲ್ಲಾದಲ್ಲಿ ದಿಢೀರ್ ಎನ್ನುವಂತೆ ಕೊನೆಯುಸಿರೆಳೆದಿದ್ದರು. ಈ ಸುದ್ದಿ ಒಂದು ಕ್ಷಣ ಕ್ರಿಕೆಟ್ ಜಗತ್ತನ್ನೇ ತಬ್ಬಿಬ್ಬಾಗುವಂತೆ ಮಾಡಿತ್ತು. ಶೇನ್ ವಾರ್ನ್‌ಗೆ 52 ವರ್ಷ ವಯಸ್ಸಾಗಿತ್ತು.
ಇದೀಗ ಶೇನ್ ವಾರ್ನ್ ಅವರ ಮೃತದೇಹ ಥಾಯ್ಲೆಂಡ್‌ನಿಂದ ಆಸ್ಟ್ರೇಲಿಯಾಗೆ ತರಲಾಗಿದ್ದು, ಖಾಸಗಿ ವಿದಾಯ ಕಾರ್ಯಕ್ರಮದಲ್ಲಿ ಅವರ ಕುಟುಂಬಸ್ಥರ ಜತೆಗೆ ಶೇನ್ ವಾರ್ನ್ ಅವರ ಸಹ ಆಟಗಾರರು ಪಾಲ್ಗೊಂಡು, ಮತ್ತೊಮ್ಮೆ ಅಂತಿಮ ನಮನ ಸಲ್ಲಿಸಿದ್ದಾರೆ.
Image Credit: Getty Images
ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರಾದ ಗ್ಲೆನ್ ಮ್ಯಾಕ್ಸ್‌ವೆಲ್, ಮೆರ್ವ್ ಹ್ಯೂಸ್, ಇಯಾನ್ ಹೀಲಿ ಹಾಗೂ ಮಾರ್ಕ್ ವಾ ಸೇರಿದಂತೆ ಶೇನ್ ವಾರ್ನ್ ಜತೆ ಕ್ರಿಕೆಟ್ ಹಲವು ತಾರಾ ಕ್ರಿಕೆಟಿಗರು ಪಾಲ್ಗೊಂಡಿದ್ದರು.
Image Credit: Getty Images
ಭಾನುವಾರ ನಡೆದ ಈ ಖಾಸಗಿ ವಿದಾಯ ಕಾರ್ಯಕ್ರಮದಲ್ಲಿ ಸರಿಸುಮಾರು 80 ಮಂದಿ ಅತ್ಯಾಪ್ತರಷ್ಟೇ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಟೆಸ್ಟ್ ನಾಯಕರಾಗಿದ್ದಂತಹ ಅಲೆನ್ ಬಾರ್ಡರ್, ಮಾರ್ಕ್ ಟೇಲರ್, ಮೈಕಲ್ ಕ್ಲಾರ್ಕ್ ಸೇರಿದಂತೆ ಹಲವು ಸಹ ಆಟಗಾರರು ಪಾಲ್ಗೊಂಡಿದ್ದರು.
Image Credit: Getty Images
15 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದ ಶೇನ್ ವಾರ್ನ್ ಅವರ ಮೃತದೇಹವನ್ನು ಮಾರ್ಚ್ 30ರಂದು ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲು ನಿರ್ಧರಿಸಲಾಗಿದೆ. ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
Image Credit: Getty Images
ಶೇನ್ ವಾರ್ನ್ ತಮ್ಮ ವೃತ್ತಿಜೀವನದ 700ನೇ ಟೆಸ್ಟ್ ವಿಕೆಟ್ ಅನ್ನು ಎಂಸಿಜಿ ಮೈದಾನದಲ್ಲಿಯೇ ಕಬಳಿಸಿದ್ದರು. 2006ರಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ವಾರ್ನ್, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿದ್ದ ಆಂಡ್ರ್ಯೂ ಸ್ಟ್ರಾಸ್ ಅವರನ್ನು ಬಲಿ ಪಡೆಯುವ ಮೂಲಕ 700 ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದರು. ಇದೇ ಮೈದಾನದಲ್ಲಿ ವಾರ್ನ್ 56 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ.
ಇನ್ನು ಶೇನ್ ವಾರ್ನ್ ಅವರ ಅಂತ್ಯಕ್ರಿಯೆಯಲ್ಲಿ ತಾವೂ ಪಾಲ್ಗೊಳ್ಳುವುದಾಗಿ ಆಸ್ಟ್ರೇಲಿಯಾ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಹೇಳಿದ್ದಾರೆ. ಸದ್ಯ ಡೇವಿಡ್ ವಾರ್ನರ್, ಪಾಕಿಸ್ತಾನ ಪ್ರವಾಸದಲ್ಲಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ.