ಭಾರತ ಎದುರಿನ ಟಿ20 ಸರಣಿಗೂ ಮುನ್ನ ಇಂಗ್ಲೆಂಡ್‌ಗೆ ಬಿಗ್‌ ಶಾಕ್‌..!

Suvarna News   | Asianet News
Published : Mar 08, 2021, 04:22 PM IST

ಅಹಮದಾಬಾದ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗಿದ್ದು, ಉಭಯ ತಂಡಗಳು ಇದೀಗ ಚುಟುಕು ಕ್ರಿಕೆಟ್‌ ಕಾದಾಟಕ್ಕೆ ಸಜ್ಜಾಗುತ್ತಿವೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವ ತಯಾರಿ ಎನಿಸಿಕೊಂಡಿರುವ 5 ಪಂದ್ಯಗಳ ಈ ಟಿ20 ಸರಣಿ ಹೈವೋಲ್ಟೇಜ್‌ ಪಂದ್ಯವಾಗಿರಲಿದ್ದು, ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಮಾರ್ಚ್‌ 12ರಿಂದ 5 ಪಂದ್ಯಗಳ ಟಿ20 ಸರಣಿಯು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಹೈವೋಲ್ಟೇಜ್‌ ಸರಣಿ ಆರಂಭಕ್ಕೂ ಮುನ್ನ ಪ್ರವಾಸಿ ಇಂಗ್ಲೆಂಡ್‌ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
17
ಭಾರತ ಎದುರಿನ ಟಿ20 ಸರಣಿಗೂ ಮುನ್ನ ಇಂಗ್ಲೆಂಡ್‌ಗೆ ಬಿಗ್‌ ಶಾಕ್‌..!

ಟೆಸ್ಟ್ ಸರಣಿಯಲ್ಲಿ 3-1 ಅಂತರದ ಸೋಲು ಕಂಡಿರುವ ಇಂಗ್ಲೆಂಡ್‌, ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ರೇಸಿನಿಂದ ಹೊರಬಿದ್ದು ಮುಖಭಂಗ ಅನುಭವಿಸಿತ್ತು. 

27

ಈ ಶಾಕ್‌ನಿಂದ ಹೊರಬರುವ ಮುನ್ನವೇ ಪ್ರವಾಸಿ ಇಂಗ್ಲೆಂಡ್‌ ತಂಡಕ್ಕೆ ಮತ್ತೊಂದು ಶಾಕ್‌ ಎದುರಾಗುವ ಸಾಧ್ಯತೆಯಿದೆ.

37

ಇಂಗ್ಲೆಂಡ್‌ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್‌ ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ದದ ಟಿ20 ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

47

ಈಗಾಗಲೇ ಜೋ ರೂಟ್‌ ಟಿ20 ಸರಣಿಯಿಂದ ವಿಶ್ರಾಂತಿ ಬಯಸಿ, ತಂಡದಿಂದ ಹೊರಗುಳಿದಿದ್ದು, ಇದೀಗ ಆರ್ಚರ್‌ ಕೂಡಾ ಹಿಂದೆ ಸರಿದರೆ ಇಂಗ್ಲೆಂಡ್‌ ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.

57

ಜೋಫ್ರಾ ಆರ್ಚರ್ ಈಗಾಗಲೇ ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಭಾರತ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದರು.

67

ಜೋಫ್ರಾ ಆರ್ಚರ್‌ ಗಾಯದ ಕುರಿತಂತೆ ನಮ್ಮ ವೈದ್ಯಕೀಯ ಸಿಬ್ಬಂದಿಗಳು ನಿಗಾ ಇಟ್ಟಿದ್ದಾರೆ. ಭಾರತ ವಿರುದ್ದದ ಟಿ20 ಸರಣಿಗೆ ಆರ್ಚರ್‌ ಸೇರ್ಪಡೆ ಕುರಿತಂತೆ ಇಂಗ್ಲೆಂಡ್ ಮಂಡಳಿ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯ ಕೋಚ್‌ ಕ್ರಿಸ್‌ ಸಿಲ್ವರ್‌ವುಡ್‌ ತಿಳಿಸಿದ್ದಾರೆ.

77

ಇಲ್ಲಿಯವರೆಗೂ ಜೋಫ್ರಾ ಆರ್ಚರ್‌ ಭಾರತ ಪ್ರವಾಸ ಅಷ್ಟೇನು ಗಮನಾರ್ಹವಾಗಿಲ್ಲ. ಭಾರತ ವಿರುದ್ದದ ಟೆಸ್ಟ್ ಸರಣಿಯಲ್ಲಿ ಆರ್ಚರ್ ಎರಡು ಪಂದ್ಯಗಳಿಂದ ಕೇವಲ 35.1 ಓವರ್‌ಗಳನ್ನಷ್ಟೇ ಬೌಲಿಂಗ್‌ ಮಾಡಿ 4 ವಿಕೆಟ್ ಮಾತ್ರ ಕಬಳಿಸಿದ್ದರು. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories