6 ನಗರ, ಬೆಂಗಳೂರಲ್ಲಿ 10 ಪಂದ್ಯ; IPL 2021 ಟೂರ್ನಿಯಲ್ಲಿದೆ ಕೆಲ ಬದಲಾವಣೆ!

First Published Mar 7, 2021, 6:35 PM IST

ಐಪಿಎಲ್ 2021ರ ಟೂರ್ನಿಯ ವೇಳಾಪಟ್ಟಿ ಬಿಡುಗೆಯಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಲ ವಿಶೇಷತೆಗಳಿಗೆ ಜೊತೆಗೆ ಕೆಲ ಬದಲಾವಣೆಗಳಿವೆ.  ಎಪ್ರಿಲ್ 9 ರಿಂದ ಆರಂಭಗೊಳ್ಳಲಿರುವ 14ನೇ ಆವೃತ್ತಿ ಐಪಿಎಲ್ ಟೂರ್ನಿ ವಿಶೇಷತೆ ಇಲ್ಲಿದೆ.

ಎಪ್ರಿಲ್ 9 ರಂದು ಚೆನ್ನೈನಲ್ಲಿ ಉದ್ಘಾಟನೆಗೊಳ್ಳಲಿರುವ ಐಪಿಎಲ್ 2021, ಮೇ.30ಕ್ಕೆ ಅಹಮ್ಮದಾಬಾದ್‌ನಲ್ಲಿ ಅಂತ್ಯಗೊಳ್ಳಲಿದೆ. ಕೊರೋನಾ ವೈರಸ್ ಕಾರಣ ಕೇವಲ 6 ನಗರಗಳಲ್ಲಿ ಟೂರ್ನಿ ಆಯೋಜಿಸಲಾಗಿದೆ.
undefined
ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಅಹಮ್ಮದಾಬಾದ್ ನಗರಗಳಲ್ಲಿ ಟೂರ್ನಿ ಆಯೋಜಿಸಲಾಗಿದೆ. 2020ರ ಐಪಿಎಲ್ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ದುಬೈ, ಶಾರ್ಜಾ ಹಾಗೂ ಅಬುಧಾಬಿ ಮೂರು ಕಡಗಳಲ್ಲಿ ಆಯೋಜಿಸಲಾಗಿತ್ತು.
undefined
ಐಪಿಎಲ್ ಪಂದ್ಯದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಡಬಲ್ ಹೆಡರ್ ಪಂದ್ಯಗಳು 3.30ಕ್ಕೆ ಆರಂಭಗೊಳ್ಳಲಿದೆ. ಇನ್ನು ರಾತ್ರಿ ಪಂದ್ಯಗಳು 7.30ಕ್ಕೆ ಆರಂಭಗೊಳ್ಳಲಿದೆ.
undefined
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 11 ಡಬಲ್ ಹೆಡರ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಇನ್ನು ಐಪಿಎಲ್ ತಂಡಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ಸತತ ಪ್ರಯಾಣವನ್ನು ತಪ್ಪಿಸಲಾಗಿದೆ. ಐಪಿಎಲ್ ತಂಡವೊಂದು ಲೀಗ್ ಹಂತದಲ್ಲಿ ಕೇವಲ 3 ಬಾರಿ ಪ್ರಯಾಣ ಮಾಡಲಿದೆ.
undefined
ಕೊರೋನಾ ವೈರಸ್ ಕಾರಣ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಬಿಸಿಸಿಐ ಕೈಗೊಂಡಿದೆ. ಹೀಗಾಗಿ ಅಭಿಮಾನಿಗಳ ಪ್ರವೇಶದ ಕುರಿತು ಇನ್ನು ನಿರ್ಧಾರ ಕೈಗೊಂಡಿಲ್ಲ. ಆರಂಭಿಕ ಹಂತದಲ್ಲಿ ಅಭಿಮಾನಿಗಳಿಲ್ಲದೆ ಐಪಿಎಲ್ ಟೂರ್ನಿ ನಡೆಯಲಿದೆ. ಬಳಿಕ ಹಂತ ಹಂತವಾಗಿ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.
undefined
ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ಕೋಲ್ಕತಾ ನಗರ ತಲಾ 10 ಐಪಿಎಲ್ ಪಂದ್ಯ ಆಯೋಜಿಸಲಿದೆ. ಇನ್ನು ದೆಹಲಿ ಹಾಗೂ ಅಹಮ್ಮದಾಬಾದ್ ನಗರ ತಲಾ 8 ಪಂದ್ಯ ಆಯೋಜಿಸಲಿದೆ.
undefined
ಬೆಂಗಳೂರಿನ ಚಿನ್ನಸ್ವಾಮಿ ಮೈದಾನ 10 ಐಪಿಎಲ್ ಪಂದ್ಯಗಳನ್ನು ಆಯೋಜಿಸಲಿದೆ. ಆದರೆ ತರಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯವಿಲ್ಲ.
undefined
click me!