ಇಬ್ರು ಗೆಳತಿಯರ ಜೊತೆ ಮನೆಯಲ್ಲಿದ್ದೆ, ಮೈಕ್ ಆನ್ ಮರೆತು ಖುಲ್ಲಂ ಖುಲ್ಲಾ ಮಾತಾಡಿದ ಬ್ರಾವೋ, ಕೆಕೆಆರ್ ಸುದ್ದಿಗೋಷ್ಠಿಯಲ್ಲಿ ಬ್ರಾವೋ ಮಾತು ಇದೀಗ ಭಾರಿ ವೈರಲ್ ಆಗಿದೆ. ಅಜಿಂಕ್ಯ ರಹಾನೆ ಸೂಚನೆ ನೀಡುತ್ತಿದ್ದಂತೆ ಅಯ್ಯೋ ಎಂದು ಬ್ರಾವೋ ಮಾತು ನಿಲ್ಲಿಸಿದ್ದಾರೆ.
ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನ ಮಾತ್ರ ಬಾಕಿ. ಇದರ ನಡುವೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಡ್ವೇನ್ ಬ್ರಾವೋ ಮಾತು ಭಾರಿ ಕೋಲಾಹಲ ಸೃಷ್ಟಿಸಿದೆ.ಕೆಕೆಆರ್ ಸುದ್ದಿಗೋಷ್ಠಿಯಲ್ಲಿ ನಾಯಕ ಅಜಿಂಕ್ಯ ರಹಾನೆ, ಕೋಚ್ ಅಭಿಷೇಕ್ ನಾಯಕರ್, ಅಸಿಸ್ಟೆಂಟ್ ಕೋಚ್ ಶೇನ್ ವ್ಯಾಟ್ಸನ್ ಜೊತೆ ವೇದಿಕೆ ಹಂಚಿಕೊಂಡಿದ್ದ ಬ್ರಾವೋ ಮಾತು ಇದೀಗ ಭಾರಿ ವೈರಲ್ ಆಗಿದೆ.
25
ಮೈಕ್ ಆನ್ ಇರುವುದು ಮರೆತು ಮಾತನಾಡಿದ ಬ್ರಾವೋ
ಕೆಕೆಆರ್ ಸುದ್ದಿಗೋಷ್ಠಿ ವೇದಿಕೆಯಲ್ಲಿ ಡ್ವೇನ್ ಬ್ರಾವೋ ಮೈಕ್ ಆನ್ ಆಗಿದೆ ಅನ್ನೋದೇ ಮರೆತಿದ್ದಾರೆ. ಶೇನ್ ವ್ಯಾಟ್ಸನ್ ವೇದಿಕೆಗೆ ಆಗಮಿಸಿ ಕುಳಿತುಕೊಳ್ಳುತ್ತಿದಂತೆ ಡಿಜೆ ಬ್ರಾವೋ ಆಡಿದ ಮಾತು ಕೆಲ ಆಕ್ರೋಶಕ್ಕೂ ಕಾರಣವಾಗಿದೆ. ಅಭಿಷೇಕ್ ನಾಯರ್‌ನತ್ತ ಕೈತೋರಿಸಿ ಮಾತನಾಡಿದ ಬ್ರಾವೋ, ಇವರು ಕರೆ ಮಾಡುವಾಗ ನಾನು ಇಬ್ಬರು ಚಿಕ್ಸ್ ( ಗರ್ಲ್‌ಫ್ರೆಂಡ್ಸ್) ಜೊತೆ ಮನೆಯಲ್ಲಿ ಕಾಲ ಕಳೆಯುತ್ತಿದ್ದೆ ಎಂದಿದ್ದಾರೆ. ಮತ್ತೆ ಮಾತು ಮುಂದುವರಿಸಿದ್ದಾರೆ.
35
ಬ್ರಾವೋ ಖುಲ್ಲಂ ಖುಲ್ಲಾ ಮಾತಿಗೆ ರಹಾನೆ ಬ್ರೇಕ್
ಸುದ್ದಿಗೋಷ್ಠಿಯಲ್ಲೇ ಡ್ವೇನ್ ಬ್ರಾವೋ ಇಬ್ಬರು ಗೆಳತಿಯರ ಜೊತೆ ಮನೆಯಲ್ಲಿ ಇದ್ದಾಗ ಇವರು ಕರೆ ಮಾಡಿದ್ದಾರೆ ಎಂದು ವ್ಯಾಟ್ಸನ್ ಬಳಿ ಹೇಳಿ ನಕ್ಕಿದ್ದಾರೆ. ಬ್ರಾವೋ ಮಾತು ಕೇಳಿಸಿಕೊಳ್ಳುತ್ತಿದ್ದಂತೆ ಅಜಿಂಕ್ಯ ರಹಾನೆ ಎಚ್ಚೆತ್ತುಕೊಂಡಿದ್ದಾರೆ. ಮೈಕ್ ಆನ್ ಇದೆ, ಮಾತಿನ ಬಗ್ಗೆ ನಿಗಾ ಇರಲಿ ಎಂದು ಎಚ್ಚರಿಸಿದ್ದಾರೆ. ಈ ವೇಳೆ ಅಯ್ಯೋ ಎಂದ ಬ್ರಾವೋ ತಕ್ಷಣ ಮಾತು ನಿಲ್ಲಿಸಿದ್ದಾರೆ.
ರಹಾನೆ ಎಚ್ಚರಿಕೆಯಿಂದ ಬ್ರಾವೋ ಅಲರ್ಟ್ ಆಗಿದ್ದಾರೆ. ರಹಾನೆ ಇಲ್ಲದಿದ್ದರೆ ಬ್ರಾವೋ ಮನೆಯಲ್ಲಿ ಗೆಳೆತಿಯರ ಜೊತೆ ಏನು ಮಾಡುತ್ತಿದ್ದೆ ಅನ್ನೋದು ಹೇಳುತ್ತಿದ್ದರು. ಅಜಿಂಕ್ಯ ರಾಹನೆ ತಕ್ಷಣವೇ ಅಲರ್ಟ್ ನೀಡಿದ ಕಾರಣ ಬ್ರಾವೋ ಮಾನ ಉಳಿದಿದೆ ಎಂದು ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
55
ಕೋಲಾಹಲ ಸೃಷ್ಟಿಸಿದ್ದ ಹೇಳಿಕೆ
ಬ್ರಾವೋ ಕಾರಣದಿಂದ ಈ ಹೇಳಿಕೆ ಅಷ್ಟರಮಟ್ಟಿಗೆ ಕೋಲಾಹಲ ಸೃಷ್ಟಿಸಿಲ್ಲ. ಆದರೆ ಭಾರತೀಯ ಕ್ರಿಕೆಟಿಗರು ಹೀಗೆ ಕ್ಯಾಶ್ಯುಯೆಲ್ ಆಗಿ ಮಾತನಾಡಿ ಕೆಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ , ಕರಣ್ ಜೋಹರ್ ಶೋನಲ್ಲಿ ಮಾತನಾಡಿ ಕರಿಯರ್‌ಗೂ ಕುತ್ತು ತಂದಿದ್ದರು. ಬಳಿಕ ಕ್ಷಮೆ ಕೇಳಿದರೂ ಕ್ರಿಕೆಟಿಗರು ತೀವ್ರ ಸಂಕಷ್ಟ ಅನುಭವಿಸಿದ್ದರು.
ಕೋಲಾಹಲ ಸೃಷ್ಟಿಸಿದ್ದ ಹೇಳಿಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.