ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗನಿಗೆ ಬಂಧನ ಭೀತಿ, ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ, ದೂರು ದಾಖಲು

Published : Jun 23, 2026, 11:27 PM IST

ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸಮನ್ ವಿರುದ್ದ ದೂರು ದಾಖಲಾಗಿದೆ. ಯುವತಿಗೆ ಮದುವೆ ಭರವಸೆ ನೀಡಿ ವಂಚಿಸಲಾಗಿದೆ ಎಂಬ ದೂರಿನಡಿ ಪ್ರಕರಣ ದಾಖಲಾಗಿದೆ. ಈ ದೂರಿನ ಕುರಿತು ಕ್ರಿಕೆಟಿಗ ಪ್ರತಿಕ್ರಿಯೆ ನೀಡಿದ್ದಾರೆ. 

PREV
16
ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗನ ಮೇಲೆ ದೂರು

ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿನಿಧಿಸುವ ಕ್ರಿಕೆಟಿಗ ಅಭಿಷೇಕ್ ಪೊರೆಲ್ ವಿರುದ್ದ ದೂರು ದಾಖಲಾಗಿದೆ. ಯುವತಿ ಹಾಗೂ ಆಕೆಯ ತಾಯಿ ಜೊತೆ ಸೇರಿ ದೂರು ನೀಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತನಗೆ ಮೋಸ ಮಾಡಿದ್ದಾನೆ. ದೈಹಿಕ ಸಂಬಂಧ ಬೆಳೆಸಿದ್ದಾನೆ. ಇದೀಗ ಮದುವೆಯಾಗದೇ ದೂರ ಸರಿಯುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

26
3 ವರ್ಷದಿಂದ ಲವ್ ಎಂದು ಯುವತಿ

ಪಶ್ಚಿಮ ಬಂಗಾಳ ಮೂಲದ ವಿಕೆಟ್ ಕೀಪರ್ ಕಮ್ ಬ್ಯಾಟ್ಸಮನ್ ಅಭಿಷೇಕ್ ಪೊರೆಲ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಶ್ಚಿಮ ಬಂಗಾಳ ಹೂಗ್ಲಿಯ ಮೊಗ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂರು ವರ್ಷದಿಂದ ನಾವು ರಿಲೇಶನ್‌ಶಿಪ್‌ನಲ್ಲಿದ್ದೆವು. ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಹೀಗಾಗಿ ದೈಹಿಕ ಸಂಬಂಧ ಬೆಳೆಸಿದ್ದೆವು. ಆದರೆ ಅಭಿಷೇಕ್ ಪೊರೆಲ್ ಇದೀಗ ಸ್ಪಂದಿಸುತ್ತಿಲ್ಲ ಎಂದು ಯುವತಿ ದೂರು ನೀಡಿದ್ದಾಳೆ.

36
ಬೆಂಗಳೂರಿನಲ್ಲಿರುವ ಅಭಿಷೇಕ್ ಪೊರೆಲ್

2023ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಐಪಿಎಲ್ ಟೂರ್ನಿ ಆಡುತ್ತಿರುವ ಅಭಿಷೇಕ್ ಪೊರೆಲ್ ವಿರುದ್ದ ದೂರು ದಾಖಲಾಗಿದೆ. ತನಿಖೆ ನಡೆಸಲು ಮೊಗ್ರಾ ಪೊಲೀಸರು ಮುಂದಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಅಭಿಷೇಕ್ ಪೊರೆಲ್ ದೂರಿನ ಕುರಿತು ಪ್ರತಿಕ್ರಿಯಿಸಿದ್ದಾರೆ. ಸದ್ಯ ನಾನು ಉತ್ತಮ ಕ್ರಿಕೆಟ್ ಆಡುತ್ತಿದ್ದೇನೆ. ಈ ವೇಳೆ ಕೆಲ ದೂರುಗಳು, ಮಾತುಗಳನ್ನು ಕೇಳಿದ್ದೇನೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಅಭಿಷೇಕ್ ಪೊರೆಲ್ ಹೇಳಿದ್ದಾರೆ.

46
ಪೊಲೀಸರ ತನಿಖೆಗೆ ಸಹಕಾರ

ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ನನ್ನನ್ನು ಸಂಪರ್ಕಿಸಿಲ್ಲ. ಅವರು ಪ್ರಶ್ನಿಸಿದರೆ ಉತ್ತರಿಸಲು ನಾನು ಸಿದ್ಧ. ಯುವತಿ ನನ್ನ ವಿರುದ್ಧ ಷಡ್ಯಂತ್ರ ಹೂಡಿದ್ದಾಳೆ. ನಡೆದೇ ಇಲ್ಲದ ಘಟನೆಯನ್ನು ಆಗಿದೆ ಎಂದು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅಭಿಷೇಕ್ ಪೊರೆಲ್ ಆರೋಪಿಸಿದ್ದಾಳೆ.

56
ತನಿಖೆ ನಡೆಸುವುದಾಗಿ ಹೇಳಿದ ಪೊಲೀಸ್

ಯುವತಿ ತನಗೆ ಮೋಸ ಆಗಿದೆ ಎಂದು ದೂರು ನೀಡಿದ್ದಾಳೆ. ಆರೋಪಿ ಯುವಕ ಕ್ರಿಕೆಟರ್ ಆಗಿದ್ದಾನೆ. ನ್ಯಾಯದ ಮುಂದೆ ಎಲ್ಲರೂ ಒಂದೆ. ನಾವು ತನಿಖೆ ಮಾಡುತ್ತೇವೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಮೊಗ್ರಾ ಪೊಲೀಸರು ಹೇಳಿದ್ದಾರೆ. ಈ ಕುರಿತು ವಿವರಣೆ ಪಡೆಯುತ್ತೇವೆ ಎಂದಿದ್ದಾರೆ.

66
ಬಂಗಾಳದ ಕ್ರಿಕೆಟರ್ ಅಭಿಷೇಕ್ ಪೊರೆಲ್

ಅಭಿಷೇಕ್ ಪೊರೆಲ್ ಭಾರತ ಎ ತಂಡದ ಪರವೂ ಆಡಿದ್ದಾರೆ. 2021-22ರ ಸಾಲಿನಲ್ಲಿ ಬಂಗಾಳ ಫಸ್ಟ್ ಕ್ಲಾಸ್ ಕ್ರಿಕೆಟ್ ಮೂಲಕ ಪಾದರ್ಪಣೆ ಮಾಡಿದ್ದಾರೆ. 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತ್ತು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories