ಚೊಚ್ಚಲ ಐಪಿಎಲ್‌ನಲ್ಲಿ ಚೆನ್ನೈನ ಮೊದಲ ಆಯ್ಕೆ ಧೋನಿ ಆಗಿರಲಿಲ್ಲ: ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಚೆನ್ನೈ ಮಾಜಿ ಕ್ರಿಕೆಟಿಗ!

First Published | Sep 20, 2024, 5:00 PM IST

ಬೆಂಗಳೂರು: 2025ರ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇದೀಗ ಚೆನ್ನೈ ತಂಡಕ್ಕೆ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿರುವ ಧೋನಿಯನ್ನು ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮೊದಲ ಆಯ್ಕೆಯ ರೀಟೈನ್ ಆಟಗಾರನಾಗಿ ಆಯ್ಕೆ ಮಾಡುವುದಿಲ್ಲ ಎಂದು ಮಾಜಿ ಆಟಗಾರ ಎಸ್ ಬದ್ರಿನಾಥ್ ತಿಳಿಸಿದ್ದಾರೆ
 

ಪ್ರತಿ ವರ್ಷ ಐಪಿಎಲ್ ಕ್ರಿಕೆಟ್  ಟೂರ್ನಿ ಅದ್ದೂರಿಯಾಗಿ ನಡೆಯುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2008 ರಿಂದ 17 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮುಂದಿನ ಐಪಿಎಲ್ 2025ರಲ್ಲಿ 18ನೇ ಸೀಸನ್ ಆರಂಭವಾಗಲಿದೆ. 
 

ಇದಕ್ಕೆ ಸಂಬಂಧಿಸಿದ ಮೆಗಾ ಹರಾಜು ಮುಂದಿನ ಎರಡು ತಿಂಗಳಲ್ಲಿ ನಡೆಯಲಿದೆ. ಇದರಲ್ಲಿ ಹಲವು ಬದಲಾವಣೆಗಳು ಆಗುವ ನಿರೀಕ್ಷೆಯಿದೆ. ಪ್ರತಿಯೊಂದು ತಂಡವು ತಮ್ಮ ತಂಡವನ್ನು ಬಲಪಡಿಸಿಕೊಳ್ಳಲು ಅತ್ಯುತ್ತಮ ಆಟಗಾರರಿಗಾಗಿ ಬಿಡ್ ಮಾಡಲು ಈಗಿನಿಂದಲೇ ರಣತಂತ್ರ ಹೆಣೆಯುತ್ತಿವೆ
 

Tap to resize

ಇನ್ನು ಇದಷ್ಟೇ ಅಲ್ಲದೆ, ಕೆಲವು ತಂಡಗಳಲ್ಲಿ ನಾಯಕರು ಬದಲಾಗುವ ಸಾಧ್ಯತೆಯಿದೆ. ಇದರಲ್ಲಿ ಒಮ್ಮೆಯೂ ಟ್ರೋಫಿ ಎತ್ತದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಸ್ಥಾನದಲ್ಲಿ ಹೊಸ ನಾಯಕನನ್ನು ನೇಮಿಸುವ ಸಾಧ್ಯತೆಯಿದೆ. 
 

ಇದರೊಂದಿಗೆ ಅತ್ಯಂತ ಶ್ರೀಮಂತ ಫ್ರಾಂಚೈಸಿಯಾಗಿರುವ ಮುಂಬೈ ಇಂಡಿಯನ್ಸ್ ಕೂಡ ತಮ್ಮ ನಾಯಕನನ್ನು ಬದಲಾಯಿಸಬಹುದು ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿದೆ. ಸದ್ಯ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ.

ಸಿಎಸ್‌ಕೆ ಪರ ಧೋನಿ, ಮುಂಬೈ ಪರ ರೋಹಿತ್‌ ಶರ್ಮಾ ಐಪಿಎಲ್‌ನಲ್ಲಿ ಯಶಸ್ವಿ ನಾಯಕರಾಗಿದ್ದಾರೆ. ಈ ಇಬ್ಬರೂ ತಮ್ಮ ತಂಡಗಳನ್ನು ತಲಾ ಐದು ಬಾರಿ ಚಾಂಪಿಯನ್‌ನ್ನಾಗಿ ಮಾಡಿದ್ದಾರೆ. 2008 ರಿಂದ ಸಿಎಸ್‌ಕೆ ನಾಯಕರಾಗಿರುವ ಧೋನಿ 2024 ರ ಐಪಿಎಲ್ ಸರಣಿಗೂ ಮುನ್ನ ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದರು.

ಅವರ ಸ್ಥಾನಕ್ಕೆ ಋತುರಾಜ್ ಗಾಯಕ್ವಾಡ್ ಅವರನ್ನು ಸಿಎಸ್‌ಕೆ ನಾಯಕರನ್ನಾಗಿ ನೇಮಿಸಿಕೊಂಡಿದೆ. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿದ 14 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಮತ್ತು 7 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದು ಪ್ಲೇ ಆಫ್‌ಗೇರಲು ವಿಫಲವಾಗಿತ್ತು. 

ಮುಂದಿನ ಐಪಿಎಲ್ 2025 ರ ಸೀಸನ್‌ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇಂತಹ ಸಂದರ್ಭದಲ್ಲಿ ಒಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದೇನೆಂದರೆ ಐಪಿಎಲ್ ಹರಾಜಿನಲ್ಲಿ ಧೋನಿ ಸಿಎಸ್‌ಕೆ ಮೊದಲ ಆದ್ಯತೆಯಾಗಿರಲಿಲ್ಲವಂತೆ. ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಧೋನಿಯನ್ನು ರೂ.9.5 ಕೋಟಿಗೆ ಸಿಎಸ್‌ಕೆ ಖರೀದಿಸಿತ್ತು. ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆ ಧೋನಿ ಪಾಲಾಗಿತ್ತು.

ಆ ಬಳಿಕ 2016, 2017ರಲ್ಲಿ ಸಿಎಸ್‌ಕೆಯಲ್ಲಿ ಆಡದಂತೆ ನಿಷೇಧಿಸಲಾಗಿತ್ತು. 2022 ರಲ್ಲಿ ಕೆಲವು ಪಂದ್ಯಗಳಿಗೆ ಮಾತ್ರ ಧೋನಿ ನಾಯಕತ್ವ ವಹಿಸಿದ್ದರು. ಆದರೆ, 2024 ರಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು ಸಿಎಸ್‌ಕೆ ನಾಯಕರನ್ನಾಗಿ ನೇಮಿಸಲಾಯಿತು. ಆದರೆ, ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಭಾರತದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರನ್ನು ಮೊದಲ ಹರಾಜಿನಲ್ಲಿ ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಯೋಚಿಸಿತ್ತಂತೆ.

ಆದರೆ, ವೀರೇಂದ್ರ ಸೆಹ್ವಾಗ್ ದೆಹಲಿಯ ಕ್ರಿಕೆಟಿಗ. ಅವರು ದೆಹಲಿ ಪರವಾಗಿಯೇ ಆಡಲು ನಿರ್ಧರಿಸಿದ್ದರು. ಹೀಗಾಗಿ ಚೆನ್ನೈ ತಂಡ ಧೋನಿಯನ್ನು ಮೊದಲ ಹರಾಜಿನಲ್ಲಿ ಖರೀದಿಸಬೇಕಾಯಿತು ಎಂದು ಸಿಎಸ್‌ಕೆ ಮಾಜಿ ಆಟಗಾರ ಬದ್ರಿನಾಥ್ ಹೇಳಿದ್ದಾರೆ. ಇದೀಗ ಅವರ ಈ ಹೇಳಿಕೆ ವೈರಲ್ ಆಗಿದೆ.

ಈ ಬಗ್ಗೆ ಬದ್ರಿನಾಥ್ ಮಾತನಾಡಿ, "ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರಂಭದಲ್ಲಿ ನಿರ್ಮಿಸುವಲ್ಲಿ ದಿವಂಗತ ಪಿವಿ ಚಂದ್ರಶೇಖರ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ನನ್ನನ್ನು ತಂಡಕ್ಕೆ ಆಯ್ಕೆ ಮಾಡಿದರು. ಮಹೇಂದ್ರ ಸಿಂಗ್ ಧೋನಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಸ್‌ಕೆ ಮಾಲೀಕರು ನನಗೆ ತಿಳಿಸಿದರು. ಅಲ್ಲದೆ, ಸೆಹ್ವಾಗ್ ಅವರನ್ನೂ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಆದರೆ, ಅವರು ಒಮ್ಮೆ ಚೆನ್ನೈಗೆ ಬಂದು ಶ್ರೀನಿವಾಸನ್ (ಸಿಎಸ್‌ಕೆ ಮಾಲೀಕರು) ಅವರನ್ನು ಭೇಟಿಯಾದರು. ಅವರು ತಾವು ಇಷ್ಟಪಟ್ಟು ದೆಹಲಿ ಪರವಾಗಿಯೇ ಆಡಲು ಬಯಸಿದ್ದರು. ಆ ನಂತರವೇ ಧೋನಿಗಾಗಿ ಸಿಎಸ್‌ಕೆ ಬಿಡ್ ಮಾಡಿತು" ಎಂದು ಹೇಳಿದ್ದಾರೆ.

ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ದೆಹಲಿ ಡೇರ್‌ಡೆವಿಲ್ಸ್‌ ತಂಡವನ್ನು ವೀರೇಂದ್ರ ಸೆಹ್ವಾಗ್ ಮುನ್ನಡೆಸಿದ್ದರು. ಆ ಬಳಿಕ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಸೆಹ್ವಾಗ್ 2008 ರಿಂದ 2015 ರವರೆಗೆ 104 ಐಪಿಎಲ್ ಪಂದ್ಯಗಳನ್ನು ಆಡಿ 2,728 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು, 18 ಅರ್ಧಶತಕಗಳು ಸೇರಿವೆ. ಅಲ್ಲದೆ ಸೆಹ್ವಾಗ್ ದೆಹಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳಿಗೆ 53 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು

Latest Videos

click me!