ನಿಮಗೆ ಗೊತ್ತಿರದ ಸರ್ ಡಾನ್‌ ಬ್ರಾಡ್ಮನ್‌ ಬಗೆಗಿನ 10 ಇಂಟ್ರೆಸ್ಟಿಂಗ್ ಸಂಗತಿಗಳಿವು..!

First Published Aug 27, 2020, 5:10 PM IST

ಬೆಂಗಳೂರು: ವಿಶ್ವ ಕ್ರಿಕೆಟ್‌ ಕಂಡ ಅಸಾಧಾರಣ ಪ್ರತಿಭೆ, ಸರ್‌ ಡಾನ್‌ ಬ್ರಾಡ್‌ಮನ್‌ ಅವರು ಆಗಸ್ಟ್ 27, 1908ರಲ್ಲಿ ಜನಿಸಿದ್ದರು. ಇಂದು ಇಡೀ ಕ್ರಿಕೆಟ್‌ ಜಗತ್ತು ಬ್ರಾಡ್‌ಮನ್‌ ಅವರ 112ನೇ ಜನ್ಮದಿನೋತ್ಸವವನ್ನಾಗಿ ಆಚರಿಸಲಾಗುತ್ತಿದೆ. 1928ರಿಂದ 1948ರ ಅವಧಿಯಲ್ಲಿ ಆಸ್ಟ್ರೇಲಿಯಾ ಪರ 52 ಟೆಸ್ಟ್ ಪಂದ್ಯಗಳನ್ನಾಡಿ ಹಲವಾರು ಅಪರೂಪದ ವಿಶ್ವದಾಖಲೆಗಳನ್ನು ಬ್ರಾಡ್ಮನ್ ಬರೆದಿದ್ದರು. ಬ್ರಾಡ್ಮನ್ ಅವರ ಬ್ಯಾಟಿಂಗ್ ಸರಾಸರಿ 99.94 ಆಗಿದ್ದು, ವಿಶ್ವಕ್ರಿಕೆಟ್‌ನ ಮತ್ತೊಬ್ಬ ಬ್ಯಾಟ್ಸ್‌ಮನ್ ಈ ದಾಖಲೆಯ ಸಮೀಪವೂ ಬರಲು ಸಾಧ್ಯವಾಗಿಲ್ಲ. ಬ್ರಾಡ್ಮನ್‌ ಹುಟ್ಟುಹಬ್ಬದ ದಿನದಂದ ಅವರ ಅಪರೂಪದಲ್ಲೇ ಅಪರೂಪವಾದ ನಿಮಗೆ ಗೊತ್ತಿರದ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
 

ಸರ್‌ ಡಾನ್ ಬ್ರಾಡ್ಮನ್ 11 ವರ್ಷ ವಯಸ್ಸಿನವರಾಗಿದ್ದಾಗಲೇ ಮೊದಲ ಕ್ರಿಕೆಟ್ ಪಂದ್ಯವನ್ನಾಡಿದ್ದರು. ಆ ಪಂದ್ಯದಲ್ಲಿ ಬ್ರಾಡ್ಮನ್ ಅಜೇಯ 55 ರನ್ ಬಾರಿಸಿದ್ದರು.
undefined
ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ ಪ್ರಥಮ ದರ್ಜೆ ಪಾದಾರ್ಪಣಾ ಪಂದ್ಯದಲ್ಲೇ ಬ್ರಾಡ್ಮನ್ ಶತಕ ಬಾರಿಸಿದ್ದರು. ಇದರೊಂದಿಗೆ ಈ ಸಾಧನೆ ಮಾಡಿದ 20ನೇ ಆಸೀಸ್ ಬ್ಯಾಟ್ಸ್‌ಮನ್ ಎನಿಸಿಕೊಂಡರು.
undefined
ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಕ್ರಿಕೆಟ್ ದಂತಕಥೆ ಬ್ರಾಡ್ಮನ್ ಒಮ್ಮೆಯೂ ಸ್ಟಂಪ್‌ ಔಟ್ ಆಗಿಲ್ಲ. ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದು ಇನಿಂಗ್ಸ್‌ನಲ್ಲಿ ಶತಕ ಮತ್ತೊಂದು ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ ಆಸ್ಟ್ರೇಲಿಯಾ ಏಕೈಕ ಬ್ಯಾಟ್ಸ್‌ಮನ್ ಬ್ರಾಡ್ಮನ್
undefined
1940ರಲ್ಲಿ ಲೆಫ್ಟಿನೆಂಟ್ ಆಗಿ ಬ್ರಾಡ್ಮನ್ ಸೇನೆ ಸೇರಿದ್ದರು. ಆದರೆ ಫಿಬ್ರೋಸೈಟಿಸ್‌ನಿಂದ ಬಳಲುತ್ತಿದ್ದುದರಿಂದ ಸೇನೆಯಲ್ಲಿ ಕ್ರಿಕೆಟ್ ದಂತಕಥೆಗೆ ಮುಂದುವರೆಯಲು ಸಾಧ್ಯವಾಗಲಿಲ್ಲ.
undefined
1986ರಲ್ಲಿ ಅಸ್ಟ್ರೇಲಿಯಾದ ಮಾಜಿ ಪ್ರಧಾನಿ ಫ್ರೇಸರ್, ಆಫ್ರಿಕಾದ ನೆಲ್ಸನ್ ಮಂಡೆಲಾ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದರಂತೆ. ಆಗ ಮಂಡೆಲಾ ಆಸೀಸ್ ಪ್ರಧಾನಿಯ ಬಳಿ ಮೊದಲುಕೇಳಿದ್ದು, ಡಾನ್ ಬ್ರಾಡ್ಮನ್‌ ಇನ್ನು ಜೀವಂತವಾಗಿದ್ದಾರಾ? ಎಂದು.
undefined
ನೈಟ್‌ಹುಡ್‌ ಪದವಿ ಪಡೆದ ಆಸ್ಟ್ರೇಲಿಯಾದ ಏಕೈಕ ಕ್ರಿಕೆಟಿಗ ಸರ್‌ ಡಾನ್ ಬ್ರಾಡ್ಮನ್. ಜೀವಂತವಾಗಿರುವಾಗಲಿ ಅವರ ಪೋಸ್ಟ್ ಸ್ಟಾಂಪ್‌ ಫೋಟೋ ರಾರಾಜಿಸುತ್ತಿತ್ತು.
undefined
ಒಟ್ಟು 80 ಟೆಸ್ಟ್ ಇನಿಂಗ್ಸ್‌ಗಳನ್ನು ಆಡಿದ್ದ ಬ್ರಾಡ್ಮನ್ 29 ಶತಕ ಅದರಲ್ಲಿ 12 ದ್ವಿಶತಕಗಳು ಸೇರಿದಂತೆ 99.94ರ ಸರಾಸರಿಯಲ್ಲಿ 6996 ರನ್ ಬಾರಿಸಿದ್ದಾರೆ.
undefined
ಬ್ರಾಡ್ಮನ್ ಆಡಿದ ಕೊನೆಯ ಟೆಸ್ಟ್ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಬಾರಿಸಿದ್ದರೆ ಅವರ ಬ್ಯಾಟಿಂಗ್ ಸರಾಸರಿ 100 ಆಗಿರುತಿತ್ತು. ಆದರೆ ವಿದಾಯದ ಪಂದ್ಯದಲ್ಲಿ ಬ್ರಾಡ್ಮನ್ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದರು.
undefined
ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ದಿನ ತ್ರಿಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಬ್ರಾಡ್ಮನ್. 1930ರಲ್ಲಿ ಹೆಡಿಗ್ಲೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಬ್ರಾಡ್ಮನ್ 309 ಚಚ್ಚಿದ್ದರು.
undefined
ಬ್ರಾಡ್ಮನ್ ತಮ್ಮ 92ನೇ ವಯಸ್ಸಿನಲ್ಲಿ ಅಂದರೆ 25 ಫೆಬ್ರವರಿ 2001ರಲ್ಲಿ ದಕ್ಷಿಣ ಆಸ್ಟ್ರೇಲಿಯಾದ ಕಿಂಗ್ಸ್‌ಟನ್‌ ಪಾರ್ಕ್‌ನಲ್ಲಿ ಕೊನೆಯುಸಿರೆಳೆದರು.
undefined
click me!