ಬಿಗ್ ಬಾಸ್‌ನಲ್ಲಿ ಧೂಳೆಬ್ಬಿಸಿದ ಸ್ಟಾರ್ ಕ್ರಿಕೆಟಿಗರಿವರು! ಈ ಆಟಗಾರ ಫೈನಲ್ ತಲುಪಿದ್ರು!

Published : Jun 29, 2025, 11:51 AM ISTUpdated : Jun 29, 2025, 12:27 PM IST

ಬಿಗ್ ಬಾಸ್‌ನಲ್ಲಿ ಕ್ರಿಕೆಟಿಗರು: ಸಲಿಲ್ ಅಂಕೋಲಾರಿಂದ ಎಸ್. ಶ್ರೀಶಾಂತ್‌ವರೆಗೆ, ಹಲವು ಕ್ರಿಕೆಟಿಗರು ಬಿಗ್ ಬಾಸ್ ಮನೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಕೆಲವರು ಬೇಗನೆ ಔಟ್ ಆದ್ರೆ, ಇನ್ನು ಕೆಲವರು ಫೈನಲ್‌ವರೆಗೂ ತಲುಪಿದ್ರು.

PREV
15
ಸಲಿಲ್ ಅಂಕೋಲಾ

ಭಾರತ ತಂಡದ ಮಾಜಿ ಬೌಲರ್ ಸಲೀಲ್ ಅಂಕೋಲಾ ಬಿಗ್ ಬಾಸ್‌ನ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ರು, ಆದ್ರೆ ಮೊದಲ ವಾರದಲ್ಲೇ ಹೊರಬಂದ್ರು.

25
ವಿನೋದ್ ಕಾಂಬ್ಳಿ

ವಿನೋದ್ ಕಾಂಬ್ಳಿ ಕೂಡ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರನೇ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ರು. ಆದ್ರೆ 14 ದಿನಗಳಲ್ಲೇ ಹೊರಬಿದ್ದರು.

35
ಆಂಡ್ರ್ಯೂ ಸೈಮಂಡ್ಸ್

ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ಕೂಡ ಬಿಗ್ ಬಾಸ್‌ನ ಭಾಗವಾಗಿದ್ದರು. 2011ರಲ್ಲಿ ಐದನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು. ಜೂಹಿ ಪರ್ಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.

45
ನವಜೋತ್ ಸಿಂಗ್ ಸಿಧು

ಮಾಜಿ ಕ್ರಿಕೆಟಿಗ, ರಾಜಕಾರಣಿ ಹಾಗೂ ಕ್ರಿಕೆಟ್ ವಿಶ್ಲೇಷಕ ನವಜೋತ್ ಸಿಂಗ್ ಸಿಧು 2012ರಲ್ಲಿ ಬಿಗ್ ಬಾಸ್‌ನ ಆರನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಒಂದು ತಿಂಗಳಲ್ಲೇ ಹೊರನಡೆದರು.

55
ಎಸ್. ಶ್ರೀಶಾಂತ್

ಭಾರತ ತಂಡದ ವೇಗಿ ಎಸ್. ಶ್ರೀಶಾಂತ್ ಬಿಗ್ ಬಾಸ್ 12ನೇ ಸೀಸನ್‌ನಲ್ಲಿ ಫೈನಲ್‌ವರೆಗೂ ತಲುಪಿದ್ದರು. ಆದರೆ ದೀಪಿಕಾ ಕಕ್ಕರ್ ಟ್ರೋಫಿ ಗೆದ್ದರು.

Read more Photos on
click me!

Recommended Stories