ಕನ್ನಡ ಕಿರುತೆರೆ ನಟಿ ಬಿಗ್ ಬಾಸ್ ಮನೆಮಗಳು ಐಶ್ವರ್ಯ ಸಿಂಧೋಗಿ.
ಐಶ್ವರ್ಯ ಟ್ರಾವೆಲ್ ಪ್ರಿಯೆಯಾಗಿದ್ದು, ದೇಶ ವಿದೇಶ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ.
ಬಿಗ್ ಬಾಸ್ ನಿಂದ ಬಂದ ಬಳಿಕ ಐಶ್ವರ್ಯ ನಟಿ ಮೋಕ್ಷಿತಾ ಪೈ ಮತ್ತು ಶಿಶಿರ್ ಜೊತೆ ಸಿಕ್ಕಾಪಟ್ಟೆ ಟ್ರಾವೆಲ್ ಮಾಡಿದ್ದಾರೆ.
ಐಶ್ವರ್ಯ ತಮ್ಮ ಫೋಟೊ ಶೂಟ್ ಮೂಲಕವೂ ಸದ್ದು ಮಾಡುತ್ತಿರುತ್ತಾರೆ. ದಿನಕ್ಕೊಂದರಂತೆ ಫೋಟೊ ಶೂಟ್ ಮಾಡಿ ಶೇರ್ ಮಾಡುತ್ತಿರುತ್ತಾರೆ.
ಇದೀಗ ಅಶ್ವರ್ಯ ಕೆಂಪು ಬಣ್ಣದ ಸ್ಲೀವ್ ಲೆಸ್ ಗೌನ್ ಧರಿಸಿ ಫೋಟೊ ಶೂಟ್ ಮಾಡಿಸಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸ್ತಿದ್ದಾರೆ.
ಐಶ್ವರ್ಯ ಕ್ಯಾಪ್ಶನಲ್ಲಿ ಶಕ್ತಿ ಎಂದರೆ ಮುರಿಯಲಾಗದು ಎಂಬುದರ ಬಗ್ಗೆ ಅಲ್ಲ, ಬದಲಾಗಿ ಭೇದಿಸಿ ಮುನ್ನಡೆಯುವುದರ ಬಗ್ಗೆ! ಎಂದು ಬರೆದಿದ್ದಾರೆ.
ಐಶ್ವರ್ಯ ಫೋಟೊಗಳಿಗೆ ಅಭಿಮಾನಿಗಳು ಪ್ರೀತಿಯಿಂದ ಕಾಮೆಂಟ್ ಮಾಡಿದ್ದು, ಏಂಜಲ್ ಬ್ಯೂಟಿಫುಲ್, ಗೊಂಬೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಕಾಮೆಂಟ್ ಮಾಡಿ ಶಿಶಿರ್ ಮತ್ತು ಐಶ್ವರ್ಯ ಜೋಡಿ ಚೆನ್ನಾಗಿದೆ, ಇಬ್ಬರು ಮದ್ವೆಯಾದ್ರೆ ಚೆನ್ನಾಗಿರುತ್ತೆ ಎಂದಿದ್ದಾರೆ.
ಐಶ್ವರ್ಯ ಬಿಗ್ ಬಾಸ್ ಬಳಿಕ ಇದೀಗ ಸ್ಟಾರ್ ಸುವರ್ಣದ ನಿನ್ನ ಜೊತೆ ನನ್ನ ಕಥೆ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.
ಸೀರಿಯಲ್ ಮಾತ್ರವಲ್ಲದೇ ಐಶ್ವರ್ಯ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದು, ಇದೀಗ ತುಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ಸಹಜ ಸರಳ ಸುಂದರಿ ಮೋಕ್ಷಿತಾ… ಕಿರುನಗುವಿಗೆ ಮನ ಸೋತ ಫ್ಯಾನ್ಸ್
ವೈಭವದ ಮಂಟಪದಲ್ಲಿ ನಡೆದ ಸೀತಾ ವಲ್ಲಭ ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ Photos
ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ… ರಿಯಲ್ ಆಗಿ ಸಖತ್ ಸ್ಟೈಲಿಶ್
ಮತ್ತೆ ಒಂದಾದ ಮೋಕ್ಷಿತಾ, ಶಿಶಿರ್, ಐಶ್ವರ್ಯಾ… ಗೆಳೆತನ ನೋಡಿ ಫ್ಯಾನ್ಸ್ ಖುಷ್