ದಾಂಪತ್ಯ ಜೀವನದಲ್ಲಿ ಬಿರುಕು; ಕೊನೆಗೂ ಮೌನ ಮುರಿದ ಯುಜುವೇಂದ್ರ ಚಹಲ್‌..!

First Published | Aug 19, 2022, 3:22 PM IST

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಜೋಡಿ ಬೇರ್ಪಡಲಿದೆ ಎಂದೆಲ್ಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೀಗ ಈ ಎಲ್ಲಾ ವಿಚಾರಗಳ ಕುರಿತಂತೆ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್, ಮೌನ ಮುರಿದಿದ್ದಾರೆ.
 

ಟೀಂ ಇಂಡಿಯಾ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ 2020ರ ಆಗಸ್ಟ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, 2022ರ ಡಿಸೆಂಬರ್ 22ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.

ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿತ್ತು. ಇದರ ಜತೆಗೆ ಚಹಲ್ ಕ್ರಿಕೆಟ್‌ ಆಡಲು ಮೈದಾನಕ್ಕೆ ಇಳಿದಾಗಲೆಲ್ಲಾ, ಧನಶ್ರೀ ವರ್ಮಾ ಸ್ಟೇಡಿಯಂಗೆ ಬಂದು ತಮ್ಮ ಪತಿಯನ್ನು ಹುರುದುಂಬಿಸುತ್ತಿದ್ದರು.

Tap to resize

ಸ್ವತಃ ಯೂಟ್ಯೂಬರ್, ಡ್ಯಾನ್ಸರ್ ಹಾಗೂ ಕೊರಿಯೋಗ್ರಾಫರ್ ಆಗಿರುವ ಧನಶ್ರೀ ವರ್ಮಾ, ತಮ್ಮ ಪತಿ ಚಹಲ್‌ ಜತೆಗೆ ಮಾತ್ರವಲ್ಲದೇ ಇತ್ತೀಚೆಗಿನ ದಿನಗಳಲ್ಲಿ ಶ್ರೇಯಸ್ ಅಯ್ಯರ್, ಶಿಖರ್ ಧವನ್ ಜತೆಗೂ ಡ್ಯಾನ್ಸ್‌ ಮಾಡಿ ಗಮನ ಸೆಳೆದಿದ್ದರು.
 

ಇದೆಲ್ಲದರ ನಡುವೆ, ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಸದ್ಯದಲ್ಲಿಯೇ ಬೇರ್ಪಡೆಯಾಗಲಿದ್ದಾರೆ ಎಂದೆಲ್ಲಾ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

Yuzvendra Chahal

ಇದೆಲ್ಲದರ ನಡುವೆ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಬುಧವಾರವಷ್ಟೇ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೊಸ ಬದುಕು ಆರಂಭವಾಗುತ್ತಿದೆ(‘New Life Loading’) ಎಂದು ಬರೆದುಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನ ಮೂಡಿಸುತ್ತಿದ್ದಂತೆಯೇ, ಎಚ್ಚೆತ್ತುಕೊಂಡ ಯುಜುವೇಂದ್ರ ಚಹಲ್ ಸರಿಯಾದ ಸ್ಪಷ್ಟನೆ ನೀಡುವ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ.

ಇನ್ನು ಧನಶ್ರೀ ವರ್ಮಾ ಕೂಡಾ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ನಮ್ಮ ಸಂಬಂಧದ ಕುರಿತಂತೆ ಹಬ್ಬಿರುವ ಗಾಳಿ ಸುದ್ದಿಯನ್ನು ನಂಬಬೇಡಿ. ಇದಕ್ಕೆಲ್ಲಾ ಕೊನೆ ಹಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Latest Videos

click me!