ಸೌರವ್ ಗಂಗೂಲಿ ಪುತ್ರಿ ಸನಾ ಇಂಟರ್ನ್‌ಶಿಪ್ ಸಂಬಳವೇ ಲಕ್ಷ ಲಕ್ಷ..!

First Published | Jan 4, 2024, 6:09 PM IST

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಇಂಟರ್ನ್‌ಶಿಪ್‌ನಲ್ಲಿಯೇ ದೊಡ್ಡ ಮೊತ್ತದ ಸಂಬಳ ಪಡೆಯುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ತಂದೆ ಸೌರವ್ ಗಂಗೂಲಿ ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದರೆ, ಮಗಳು ಇದೀಗ ಫೈನಾನ್ಸ್ ಜಗತ್ತು ಆಳುವತ್ತ ಮೊದಲ ಹೆಜ್ಜೆಯಿಟ್ಟಿದ್ದಾರೆ. ಸನಾ ಗಂಗೂಲಿ ಇದೀಗ ಇಂಟರ್ನ್‌ಶಿಪ್‌ನಲ್ಲಿಯೇ ದೊಡ್ಡ ಸಂಬಳದ ಕಾಂಟ್ರ್ಯಾಕ್ಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲ್ಕತಾದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮುಗಿಸಿದ ಸನಾ ಗಂಗೂಲಿ ಪದವಿ ಶಿಕ್ಷಣವನ್ನು ಲಂಡನ್‌ನ UCL ನಲ್ಲಿ ಪೂರೈಸಿದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಒಳ್ಳೆಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
 

Tap to resize

ಶಾಲಾ ದಿನಗಳಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಸನಾ ಗಂಗೂಲಿ, UCL ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಬಹುರಾಷ್ಟ್ರೀಯ ಕಂಪನಿಗಳಾಗಿರುವ HSBC ಹಾಗೂ Goldman Sachs ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡುವ ಮೂಲಕ ಹೊಸ ಸವಾಲಿಗೆ ಸಜ್ಜಾಗಿದ್ದಾರೆ.

ಇದೀಗ ಸನಾ ಗಂಗೂಲಿ PwC ಎನ್ನುವ ಜಗತ್ತಿನ ಅತಿದೊಡ್ಡ ಫೈನಾನ್ಸ್‌ ಸಲಹೆ ನೀಡುವ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದಾರೆ. ಇಂಟರ್ನ್‌ಶಿಪ್‌ನಲ್ಲಿ ಸನಾ ಪಡೆಯುತ್ತಿರುವ ಸಂಭಾವನೆ ಎಲ್ಲರ ಹುಬ್ಬೇರಿಸುವಷ್ಟಿದೆ.

ಸನಾ ಗಂಗೂಲಿ ಅವರ ಇಂಟರ್ನ್‌ಶಿಪ್ ಸಂಬಳ ಕೇಳಿದರೆ ನಿಮಗೂ ಒಂದು ಕ್ಷಣ ಶಾಕ್ ಎನಿಸಬಹುದು. ಸನಾ ಲಕ್ಷದ ಲೆಕ್ಕಾಚಾರದಲ್ಲಿ ಸಂಬಳ ಪಡೆಯುತ್ತಿದ್ದಾರೆ. ಹೌದು ವರದಿಯೊಂದರ ಪ್ರಕಾರ PwC ಕಂಪನಿಯಲ್ಲಿ ಕೆಲಸ ಮಾಡುವವರು ವಾರ್ಷಿಕ 30 ಲಕ್ಷ ರುಪಾಯಿವರೆಗೆ ಸಂಬಳವನ್ನು ಪಡೆಯುತ್ತಾರೆ.

ಡ್ಯಾನ್ಸಿಂಗ್ ರಾಣಿಯಾಗಿದ್ದ ಸನಾ ಗಂಗೂಲಿ ಇದೀಗ ಫಿನಾನ್ಸ್‌ ಕ್ಷೇತ್ರದಲ್ಲಿ ಮೋಡಿ ಮಾಡಲು ಕಾಲಿಟ್ಟಿದ್ದು, ಅವರ ಈ ಹೊಸ ಜೆರ್ಸಿಯಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆಯಾಗಿದೆ.

Latest Videos

click me!