IPL 2021 ಮುಂಬೈ ಎದುರು ಚೆನ್ನೈ ದಿಗ್ವಿಜಯವನ್ನು ಕೊಂಡಾಡಿದ ಕ್ರಿಕೆಟ್ ಪಂಡಿತರು..!
First Published | Sep 20, 2021, 1:10 PM ISTದುಬೈ : ಯುಎಇ ಚರಣದ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಒಂದು ಹಂತದಲ್ಲಿ 24 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕ್ವಾಡ್ ಬಾರಿಸಿದ ಕೆಚ್ಚೆದೆಯ 156 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮುಂಬೈ 136 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ತಂಡದ ಗೆಲುವನ್ನು ಕ್ರಿಕೆಟ್ ಪಂಡಿತರು ಶ್ಲಾಘಿಸಿದ್ದಾರೆ