ಟೀಂ ಇಂಡಿಯಾದ ಪ್ರತಿ ಆಸ್ಟ್ರೇಲಿಯಾ ಪ್ರವಾಸ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗಿದೆ. ಆಟಗಾರರ ಸ್ಲೆಡ್ಜಿಂಗ್, ಅಭಿಮಾನಿಗಳ ಅತೀರೇಕದ ವರ್ತನೆ ಸೇರಿದಂತೆ ಹಲವು ಘಟನೆಗಳು ಬಹುದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಇದಕ್ಕೆ ಈ ಬಾರಿಯ ಟೂರ್ನಿ ಕೂಡ ಹೊರತಾಗಿಲ್ಲ.
undefined
ಈ ಬಾರಿ ಪ್ರವಾಸದಲ್ಲಿ ಸಿಡ್ನಿ ಟೆಸ್ಟ್ ಪಂದ್ಯ ಜನಾಂಗೀಯ ನಿಂದನೆ ವಿವಾದಕ್ಕೆ ಕಾರಣವಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಸಿಡ್ನಿ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದಾರೆ.
undefined
ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ವಿರುದ್ಧ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದಾರೆ. ಇಬ್ಬರು ಆಟಗಾರರು ಮ್ಯಾಚ್ ರೆಫ್ರಿ ಬಳಿ ದೂರು ನೀಡಿದ್ದರು.
undefined
ಈ ಘಟನೆ ಟೀಂ ಇಂಡಿಯಾ ಹಾಗೂ ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ತಕ್ಷಣವೇ ಕಠಿಣ ಕ್ರಮಕ್ಕೆ ಬಿಸಿಸಿಐ ಆಗ್ರಹಿಸಿತ್ತು. ವಿವಾದ ಸದ್ದು ಮಾಡುತ್ತಿದ್ದಂತೆ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ, ಟೀಂ ಇಂಡಿಯಾ ಆಟಗಾರರ ಬಳಿ ಕ್ಷಮೆ ಕೇಳಿದೆ.
undefined
ಜನಾಂಗೀಯ ನಿಂದನೆ ಆರೋಪದ ಕುರಿತು NSW ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ನ 86ನೇ ಓವರ್ ವೇಳೆ ಬುಮ್ರಾ ಹಾಗೂ ಸಿರಾಜ್, ಜನಾಂಗೀಯ ನಿಂದನೆ ಕುರಿತು ದೂರು ನೀಡಿದ್ದಾರೆ.
undefined
NSW ಪೊಲೀಸ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಜಂಟಿಯಾಗಿ ತನಿಖೆ ನಡೆಸುತ್ತಿದೆ. ಹಲವು ಪ್ರೇಕ್ಷಕರು ವಿಚಾರಣೆ ನಡೆಸಲಾಗುವುದು. ಪ್ರೇಕ್ಷಕರು ಕ್ರಿಕೆಟಿಗರನ್ನು ನಿಂದಿಸುವುದು ಅಪರಾಧವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
undefined
ತಕ್ಕ ಸಮಯದಲ್ಲಿ ಟೀಂ ಇಂಡಿಯಾ ಆಟಗಾರರು ದೂರು ನೀಡಿದ್ದಾರೆ. ಹೀಗಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಭರವಸೆ ನೀಡಿದೆ.
undefined
ಈ ಘಟನೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಖಂಡಿಸುತ್ತದೆ. ಈ ಘಟನೆ ಹೊರತು ಪಡಿಸಿದರೆ ಅತ್ಯುತ್ತಮ ಟೆಸ್ಟ್ ಪಂದ್ಯವಾಗಿದೆ. ಉಭಯ ತಂಡಗಳು ಕ್ರೀಡಾಸ್ಪೂರ್ತಿಯಿಂದ ಆಡುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
undefined