ಐಪಿಎಲ್ 2021: ಆಟಗಾರರ ಗೇಟ್‌ಪಾಸ್‌ಗೆ ಮೂರೇ ದಿನ ಬಾಕಿ; ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ..?

Suvarna News   | Asianet News
Published : Jan 18, 2021, 04:20 PM ISTUpdated : Jan 25, 2021, 12:32 PM IST

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಕೆಲವೇ ತಿಂಗಳುಗಳು ಕಳೆದಿದ್ದು, ಮತ್ತೊಂದು ಚುಟುಕು ಕ್ರಿಕೆಟ್‌ ಹಬ್ಬಕ್ಕೆ ಕೌಂಟ್‌ ಡೌನ್ ಆರಂಭವಾಗಿದೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನ ಒಂದು ಮಿನಿ ಹರಾಜು ಕೂಡಾ ನಡೆಯಲಿದೆ. ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಹಾಗೂ ಗೇಟ್‌ಪಾಸ್ ನೀಡಲು ಜನವರಿ 21 ಕೊನೆಯ ದಿನವಾಗಿದೆ. ಎಲ್ಲಾ ಫ್ರಾಂಚೈಸಿಗಳು 85 ಕೋಟಿ ರುಪಾಯಿಯೊಳಗೆ ತಮಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ. ಈ ಪೈಕಿ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದುಕೊಂಡಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.  

PREV
116
ಐಪಿಎಲ್ 2021: ಆಟಗಾರರ ಗೇಟ್‌ಪಾಸ್‌ಗೆ ಮೂರೇ ದಿನ ಬಾಕಿ; ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ..?

1. ಚೆನ್ನೈ ಸೂಪರ್‌ ಕಿಂಗ್ಸ್‌ ಖಾತೆಯಲ್ಲಿದೆ ಕೇವಲ 15 ಲಕ್ಷ ರುಪಾಯಿ ಮಾತ್ರ

216

ಕಳೆದ ಹರಾಜಿನಲ್ಲಿ ಸಾಕಷ್ಟು ಅಳೆದು ತೂಗಿ ಆಟಗಾರರನ್ನು ಖರೀದಿಸಿದ್ದ ಸಿಎಸ್‌ಕೆ ಫ್ರಾಂಚೈಸಿ ಬಳಿ ಕೇವಲ 15 ಲಕ್ಷ ರುಪಾಯಿ ಮಾತ್ರವಿದ್ದು, ಈ ಬಾರಿಯ ಹರಾಜಿಗೂ ಮುನ್ನ ಕೆಲ ದುಬಾರಿ ಆಟಗಾರರಿಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ.

316

2. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಖಾತೆಯಲ್ಲಿ 1.95 ಕೋಟಿ ರುಪಾಯಿ..!

416

5 ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಖಾತೆಯಲ್ಲಿ ಇನ್ನೂ 1.95 ಕೋಟಿ ರುಪಾಯಿ ಹಣವಿದ್ದು, ರೋಹಿತ್ ಪಡೆ ಯಾರನ್ನು ಉಳಿಸಿಕೊಳ್ಳುತ್ತೆ, ಮತ್ತೆ ಯಾರಿಗೆ ಗೇಟ್‌ಪಾಸ್ ಕೊಡುತ್ತೆ ಕಾದು ನೋಡಬೇಕಿದೆ.

516

3.ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಾತೆಯಲ್ಲಿ 6.4 ಕೋಟಿ ರುಪಾಯಿ

616

ಆರ್‌ಸಿಬಿ ತಂಡದಲ್ಲಿ ಪಾರ್ಥಿವ್ ಪಟೇಲ್‌, ಡೇಲ್ ಸ್ಟೇನ್ ಹೊರನಡೆದಿದ್ದರಿಂದ ಬೆಂಗಳೂರು ಮೂಲದ ಫ್ರಾಂಚೈಸಿ ಬಳಿಕ ಈಗಾಗಲೇ 6 ಕೋಟಿಗೂ ಅಧಿಕ ಹಣವಿದ್ದು, ಉಮೇಶ್ ಯಾದವ್, ಶಿವಂ ದುಬೆ ಅವರಂತಹ ಆಟಗಾರರಿಗೆ ಆರ್‌ಸಿಬಿ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ.

716

4. ಕೋಲ್ಕತ ನೈಟ್ ರೈಡರ್ಸ್ ಖಾತೆಯಲ್ಲಿದೆ 8.5 ಕೋಟಿ ರುಪಾಯಿ..!

816

2 ಬಾರಿ ಐಪಿಎಲ್‌ ಚಾಂಪಿಯನ್‌ ಕೆಕೆಆರ್ ತಂಡದಲ್ಲಿ ಕಮಿನ್ಸ್, ನರೈನ್‌, ಕಾರ್ತಿಕ್‌ ಅವರಂತಹ ದುಬಾರಿ ಆಟಗಾರರಿದ್ದರೂ ಸಹಾ ಶಾರುಕ್ ಒಡೆತನದ ಕೆಕೆಆರ್ ಫ್ರಾಂಚೈಸಿ ಬಳಿ 8.5 ಕೋಟಿ ರುಪಾಯಿ ಹೊಂದಿದೆ. ಹರಾಜಿಗೂ ಮುನ್ನ ಕೆಕೆಆರ್ ಕುಲ್ದೀಪ್ ಯಾದವ್, ದಿನೇಶ್ ಕಾರ್ತಿಕ್‌ಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ.

916

5. ಡೆಲ್ಲಿ ಕ್ಯಾಪಿಟಲ್ಸ್‌ ಪರ್ಸ್‌ನಲ್ಲಿದೆ 9 ಕೋಟಿ ರುಪಾಯಿ

1016

ಹಾಲಿ ರನ್ನರ್‌ ಅಪ್‌ ಈ ಬಾರಿ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆಗಳು ಕಡಿಮೆ. ಹೀಗಿದ್ದೂ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಬಳಿ ಆಟಗಾರರನ್ನು ಖರೀದಿಸಲು 9 ಕೋಟಿ ರುಪಾಯಿ ಹೊಂದಿದೆ.

1116

6. ಸನ್‌ರೈಸರ್ಸ್ ಹೈದ್ರಾಬಾದ್ ಬಳಿ ಇದೆ 10.1 ಕೋಟಿ ರುಪಾಯಿ

1216

ಪ್ಲೇ ಆಫ್‌ ಪ್ರವೇಶಿಸುತ್ತಿದ್ದರೂ ಮಹತ್ವದ ಪಂದ್ಯಗಳಲ್ಲಿ ಎಡವುತ್ತಿರುವವ ಸನ್‌ರೈಸರ್ಸ್‌ ಹೈದ್ರಾಬಾದ್ ತಂಡಕ್ಕೆ ಫ್ರಾಂಚೈಸಿ ಮೇಜರ್ ಸರ್ಜರಿಯ ಅಗತ್ಯವಿದ್ದು, ಮತ್ತೆ ಕೆಲವು ದುಬಾರಿ ಆಟಗಾರರನ್ನು ಕೈಬಿಟ್ಟು ಹೊಸ ತಂಡ ಕಟ್ಟುವ ಸಾಧ್ಯತೆಯಿದೆ.

1316

7. ರಾಜಸ್ಥಾನ ರಾಯಲ್ಸ್‌ ಖಾತೆಯಲ್ಲಿ 14.75 ಕೋಟಿ ರುಪಾಯಿ

1416

ಚೊಚ್ಚಲ ಆವೃತ್ತಿಯ ಐಪಿಎಲ್‌ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್ ತಂಡವು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಆರ್‌ಆರ್ ಫ್ರಾಂಚೈಸಿ ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. 

1516

8. ಕಿಂಗ್ಸ್‌ ಇಲೆವನ್‌ ಪಂಜಾಬ್‌ ಅಕೌಂಟ್‌ನಲ್ಲಿ 16.5 ಕೋಟಿ ರುಪಾಯಿ..!

1616

ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಪಂಜಾಬ್‌ ತಂಡದ ಖಾತೆಯಲ್ಲಿ ಸದ್ಯ ಅತಿಹೆಚ್ಚು ಹಣವಿದೆ. ಪಂಜಾಬ್‌ ಈ ಬಾರಿ ಗ್ಲೇನ್‌ ಮ್ಯಾಕ್ಸ್‌ವೆಲ್‌ಗೆ ಬಹುತೇಕ ಗೇಟ್‌ಪಾಸ್ ನೀಡುವ ಸಾಧ್ಯತೆಯಿದ್ದು, ಮತ್ತೊಮ್ಮೆ ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿದೆ ಪ್ರೀತಿ ಪಡೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories